alex Certify
ಕನ್ನಡ ದುನಿಯಾ       Mobile App
       

Kannada Duniya

ಹನಿಪ್ರೀತ್ ಪಾತ್ರಕ್ಕೆ ಜೀವ ತುಂಬಲಿದ್ದಾಳೆ ರಾಖಿ

ಸದ್ಯ ಸುದ್ದಿಯಲ್ಲಿರುವ ಗುರ್ಮಿತ್ ರಾಮ್ ರಹೀಂ ಜೀವನ ಚರಿತ್ರೆ ಚಿತ್ರವಾಗ್ತಿದೆ. ಆತನ ವಿವಾದಿತ ಜೀವನವನ್ನು ತೆರೆ ಮೇಲೆ ತರಲು ನಿರ್ಧರಿಸಲಾಗಿದೆ. ಈಗಾಗಲೇ ಹಿರೋ-ಹಿರೋಯಿನ್ ಆಯ್ಕೆಯಾಗಿದ್ದು, ಮಂಗಳವಾರದಿಂದ ಶೂಟಿಂಗ್ ಶುರುವಾಗಿದೆ.

ಅತ್ಯಾಚಾರಿ ರಾಮ್ ರಹೀಂ ಪಾತ್ರದಲ್ಲಿ ರಾಝಾ ಮುರಾದ್ ಕಾಣಿಸಿಕೊಳ್ಳಲಿದ್ದಾರೆ. ಹನಿಪ್ರೀತ್ ಪಾತ್ರವನ್ನು ರಾಖಿ ಸಾವಂತ್ ನಿಭಾಯಿಸಲಿದ್ದಾಳೆ. ಚಿತ್ರದಲ್ಲಿ ರಾಮ್ ರಹೀಂ ರಂಗೀನ್ ದುನಿಯಾ ಹಾಗೂ ಅಪರಾಧವನ್ನು ತೋರಿಸಲಾಗುವುದು ಎನ್ನಲಾಗಿದೆ. ರಾಕ್ ಸ್ಟಾರ್ ನಿಂದ ಜೈಲಿನವರೆಗಿನ ಕಥೆಯನ್ನು ಇದು ಒಳಗೊಂಡಿರುತ್ತದೆ. ಹನಿಪ್ರೀತ್ ಹಾಗೂ ರಾಮ್ ರಹೀಂ ಸಂಬಂಧವನ್ನೂ ಚಿತ್ರದಲ್ಲಿ ತೋರಿಸಲಾಗುವುದು.

ಮಂಗಳವಾರದಿಂದ ದೆಹಲಿಯಲ್ಲಿ ಶೂಟಿಂಗ್ ಶುರುವಾಗಿದೆ. ಇಜಾಜ್ ಖಾನ್ ತನಿಖಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಮ್ ರಹೀಂ ಜೈಲು ಸೇರುತ್ತಿದ್ದಂತೆ ಆತನ ರಂಗೀನ್ ದುನಿಯಾದ ಒಂದೊಂದೇ ವಿಷ್ಯ ಬಹಿರಂಗವಾಗಿದೆ. ಇದೆಲ್ಲವೂ ಚಿತ್ರ ಒಳಗೊಂಡಿರುತ್ತದೆ ಎನ್ನಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...