alex Certify
ಕನ್ನಡ ದುನಿಯಾ       Mobile App
       

Kannada Duniya

ಚೀನಾದಲ್ಲಿ ದಾಖಲೆ ಬರೆದ ಆಮೀರ್ ಚಿತ್ರ ದಂಗಲ್

dangal_usnxjfj

ಆಮೀರ್ ಖಾನ್ ಸೂಪರ್ ಹಿಟ್ ಚಿತ್ರ ‘ದಂಗಲ್’ ಮೇ 5ರಂದು ಚೀನಾದಲ್ಲಿ ಬಿಡುಗಡೆಯಾಗಿದೆ. ಚೀನಾದಲ್ಲಿ ‘ದಂಗಲ್’ ಸುಮಾರು 9000 ಥಿಯೇಟರ್ ನಲ್ಲಿ ತೆರೆಗೆ ಬಂದಿದೆ. ಚೀನಾದ ಅತಿ ಹೆಚ್ಚು ಥಿಯೇಟರ್ ಗಳಲ್ಲಿ ತೆರೆಗೆ ಬಂದ ಭಾರತದ ಮೊದಲ ಚಿತ್ರವಾಗಿದೆ ‘ದಂಗಲ್’.

ಇದಕ್ಕೂ ಮೊದಲು 2011ರಲ್ಲಿ ಬಿಡುಗಡೆಯಾದ ಆಮೀರ್ ಖಾನ್ ಅಭಿನಯದ ‘3 ಈಡಿಯಟ್ಸ್’ ಚಿತ್ರ ಚೀನಾ ಬಾಕ್ಸ್ ಆಫೀಸ್ ನಲ್ಲಿ 12 ಕೋಟಿ ರೂಪಾಯಿ ಗಳಿಕೆ ಕಂಡಿತ್ತು. ಇದಾದ ನಂತ್ರ ಚೀನಾದಲ್ಲಿ 2015ರಲ್ಲಿ ಬಿಡುಗಡೆಯಾದ  ಆಮೀರ್ ಖಾನ್ ಅಭಿನಯದ ‘ಪಿಕೆ’ ಚಿತ್ರ ಸುಮಾರು 110 ಕೋಟಿ ರೂ. ಗಳಿಕೆ ಕಂಡಿತ್ತು.

ಚೀನಾದಲ್ಲಿ 9 ಸಾವಿರ ಥಿಯೇಟರ್ ನಲ್ಲಿ ಬಿಡುಗಡೆಯಾದ ಮೊದಲ ಭಾರತದ ಚಿತ್ರ ‘ದಂಗಲ್’ ನಿಜ. ಆದ್ರೆ ಚೀನಾ ಮಟ್ಟಿಗೆ ಇದು ದೊಡ್ಡ ವಿಷಯವಲ್ಲ. ಚೀನಾದಲ್ಲಿ 40 ಸಾವಿರ ಥಿಯೇಟರ್ ಗಳಿದ್ದು, ಅದ್ರಲ್ಲಿ ಅನೇಕ ಥಿಯೇಟರ್ ಮಾಲೀಕರು ‘ದಂಗಲ್’ ಚಿತ್ರ ಬಿಡುಗಡೆಗೆ ಅವಕಾಶ ನೀಡಲಿಲ್ಲ. ಇದು ಚೀನಾದಲ್ಲಿರುವ ಆಮೀರ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಂತೂ ಸುಳ್ಳಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...