alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಕಾಜೋಲ್ ನಂಬರ್ ನೀಡಿದ್ದ ಅಜಯ್ 2ನೇ ಟ್ವಿಟ್ ನಲ್ಲೇನಿದೆ ಗೊತ್ತಾ?

ಬಾಲಿವುಡ್  ನಟ ಅಜಯ್ ದೇವಗನ್ ಇಂದು ಚರ್ಚೆಗೆ ಕಾರಣವಾಗಿದ್ದರು. ಅವ್ರು ಇಂದು ಮಾಡಿದ ಟ್ವಿಟ್ ಒಂದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿತ್ತು. ಅಜಯ್ ಪತ್ನಿ ಕಾಜೋಲ್ ಫೋನ್ ನಂಬರ್ ಟ್ವಿಟ್ ಮಾಡಿದ್ದರು. ಕಾಜೋಲ್ ಸದ್ಯ ದೇಶದಿಂದ ಹೊರಗಿದ್ದಾರೆ. ಅವ್ರನ್ನು ಸಂಪರ್ಕಿಸಲು ಈ ನಂಬರ್ ಬಳಸಿ ಎಂದು ನಂಬರ್ ಹಾಕಿದ್ದರು.

ಅಜಯ್ ಈ ಟ್ವಿಟ್ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಕೆಲವರು ಕಾಜೋಲ್ ಗೆ ವಾಟ್ಸಾಪ್ ಮಾಡಿದ್ರೆ ಮತ್ತೆ ಕೆಲವರು ಅಜಯ್ ದೇವಗನ್ ಕಾಲೆಳೆದಿದ್ದರು. ಅಪ್ಪಿತಪ್ಪಿ ಈ ನಂಬರ್ ಹಾಕಿದ್ದಾರೆಂದೂ ಹೇಳಲಾಗ್ತಿತ್ತು. ಆದ್ರೀಗ ಎಲ್ಲ ಪ್ರಶ್ನೆಗೆ ಅಜಯ್ ಉತ್ತರ ನೀಡಿದ್ದಾರೆ. ಅಜಯ್ ಇನ್ನೊಂದು ಟ್ವಿಟ್ ಮಾಡಿದ್ದಾರೆ.

ಚಿತ್ರೀಕರಣದ ವೇಳೆ ಸಿಬ್ಬಂದಿ ಜೊತೆ ತಮಾಷೆ ಮಾಡಿ ಸಾಕಾಯ್ತು. ಸ್ವಲ್ಪ ಅಭಿಮಾನಿಗಳ ಕಾಲೆಳೆಯೋಣವೆಂದು ಕಾಜೋಲ್ ನಂಬರ್ ಹಾಕಿದ್ದೇನೆಂದು ಅಜಯ್ ಟ್ವಿಟ್ ಮಾಡಿದ್ದಾರೆ. ಇದಕ್ಕೂ ಮೊದಲು ಕಾಜೋಲ್ ಕೂಡ ಅಜಯ್ ಟ್ವಿಟ್ ಗೆ ಪ್ರತಿಕ್ರಿಯೆ ನೀಡಿದ್ದರು. ಸದ್ಯ ಸ್ಟುಡಿಯೋದಲ್ಲಿರಬಹುದು. ಆದ್ರೆ ಮನೆಗೆ ಎಂಟ್ರಿಯಲ್ಲ ಎಂದು ಅಜಯ್ ಗೆ ತಮಾಷೆ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...