alex Certify
ಕನ್ನಡ ದುನಿಯಾ       Mobile App
       

Kannada Duniya

ಆ ಟ್ಯಾಟೋ ನೋಡಿ ಭಾವುಕರಾಗ್ತಾರೆ ಈ ನಟಿ

Adaa-Khanನಟಿ ಆದಾ ಖಾನ್ ಅವರ ಕೈ ಮೇಲೊಂದು ಟ್ಯಾಟೋ ಇದೆ. ತಮ್ಮ ಧರ್ಮದಲ್ಲಿ ಟ್ಯಾಟೋ ಹಾಕಿಸಿಕೊಳ್ಳುವುದು ನಿಷಿದ್ದವಿದ್ದರೂ ಅದನ್ನು ಹಾಕಿಸಿಕೊಂಡಿರುವ ಆದಾ ಖಾನ್, ಆ ದೇವರು ನಾನು ಟ್ಯಾಟೋ ಹಾಕಿಸಿಕೊಂಡಿರುವ ಕಾರಣವನ್ನು ಅರಿತು ಖಂಡಿತವಾಗಿಯೂ ಕ್ಷಮಿಸುತ್ತಾನೆ ಎಂದು ಹೇಳುತ್ತಾರೆ.

ಅಷ್ಟಕ್ಕೂ ಆದಾ ಖಾನ್ ಟ್ಯಾಟೋ ಹಾಕಿಸಿಕೊಂಡಿರುವುದು ಪ್ರೇಮಿಯ ಹೆಸರನ್ನಲ್ಲ. ಬದಲಾಗಿ ಕ್ಯಾನ್ಸರ್ ನಿಂದ ತೀರಿಕೊಂಡ ತಮ್ಮ ತಾಯಿ ಪರ್ವೀನ್ ಅವರ ನೆನಪಿಗಾಗಿ ‘ಮಾ’ ಎಂದು ಇಂಗ್ಲೀಷಿನಲ್ಲಿ ಟ್ಯಾಟೋ ಹಾಕಿಸಿಕೊಂಡಿದ್ದಾರೆ. ಅಲ್ಲದೇ ಅದರ ಪಕ್ಕದಲ್ಲೇ ರೆಕ್ಕೆಗಳನ್ನೂ ಬಿಡಿಸಿಕೊಂಡಿದ್ದಾರೆ.

ಇದಕ್ಕೆ ಕಾರಣವನ್ನೂ ನೀಡುವ ನಟಿ ಆದಾ ಖಾನ್, ಹಕ್ಕಿ ಯಾವ ರೀತಿ ತನ್ನ ಮರಿಗಳನ್ನು ರೆಕ್ಕೆಯಿಂದ ಮುಚ್ಚಿ ರಕ್ಷಿಸುತ್ತದೆಯೇ ಅದೇ ರೀತಿ ತಮ್ಮ ತಾಯಿಯೂ ನನ್ನನ್ನು ರಕ್ಷಿಸುತ್ತಾರೆ ಎನ್ನುತ್ತಾರಲ್ಲದೇ ಆಕೆ ನನ್ನ ಪಾಲಿನ ದೇವತೆ ಎಂದು ತಾಯಿಯನ್ನು ಸ್ಮರಿಸುತ್ತಾರೆ. ತಾಯಿಯ ನೆನಪಿನಿಂದ ಹೊರ ಬರಲು ತಮಗೆ ಸಾಧ್ಯವಾಗುತ್ತಿಲ್ಲ ಎನ್ನುವ ಆದಾ ಖಾನ್, ಆಕೆ ಎಲ್ಲಿದ್ದರೂ ಸದಾ ನನ್ನ ಹೃದಯದಲ್ಲಿ ನೆಲೆಸಿರುತ್ತಾರೆಂದು ಹೇಳುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...