alex Certify
ಕನ್ನಡ ದುನಿಯಾ       Mobile App
       

Kannada Duniya

ಕಿಕಿ ಚಾಲೆಂಜ್ ಗುಂಗಿನಲ್ಲಿ ವಿದೇಶದಲ್ಲಿ ರೈಲು ತಪ್ಪಿಸಿಕೊಂಡ್ಲು ಈ ನಟಿ

ಜನರಿಗೆ ಕಿಕಿ ಚಾಲೆಂಜ್ ಹುಚ್ಚು ಹಿಡಿದಿದೆ. ಸಾಮಾಜಿಕ ಜಾಲತಾಣದಲ್ಲಿ ಕಿಕಿ ಚಾಲೆಂಜ್ ವಿಡಿಯೋ ಅಪ್ಲೋಡ್ ಆಗ್ತಿದೆ. ಕಿಕಿ ಚಾಲೆಂಜ್ ಅಪಾಯಕ್ಕೆ ಆಹ್ವಾನ ನೀಡ್ತಿದೆ ಎಂದು ಪೊಲೀಸರು ಹೇಳ್ತಿದ್ದರೂ ಜನರಿಗೆ ಮಾತ್ರ ಬುದ್ದಿ ಬರ್ತಿಲ್ಲ. ಕಿಕಿ ಚಾಲೆಂಜ್ ಗುಂಗು ಏನೆಲ್ಲ ಮಾಡಿಸುತ್ತೆ ಎಂಬುದನ್ನು ಬಾಲಿವುಡ್ ನಟಿ ಶೆನಾಜ್ ಟ್ರೆಜರಿವಾಲಾ ವಿಡಿಯೋ ಮೂಲಕ ಹೇಳಿದ್ದಾಳೆ.

ಸ್ವಿಟ್ಜರ್ಲೆಂಡ್ ನ ರೈಲು ನಿಲ್ದಾಣದಲ್ಲಿ ಶೆನಾಜ್ ಕಿಕಿ ಚಾಲೆಂಜ್ ಪೂರ್ಣಗೊಳಿಸಲು ಮುಂದಾಗಿದ್ದಾಳೆ. ರೈಲ್ವೆ ನಿಲ್ದಾಣದಲ್ಲಿ ರೈಲು ನಿಲ್ಲುತ್ತಿದ್ದಂತೆ ಕೆಳಗಿಳಿದ ಶೆನಾಜ್ ಡಾನ್ಸ್ ಮಾಡಲು ಶುರು ಮಾಡ್ತಾಳೆ. ಡಾನ್ಸ್ ನಲ್ಲಿ ಎಷ್ಟು ಮಗ್ನಳಾಗಿರ್ತಾಳೆಂದ್ರೆ ರೈಲಿನ ಬಾಗಿಲು ಮುಚ್ಚಿದ್ದೆ ಆಕೆಗೆ ಗೊತ್ತಾಗೋದಿಲ್ಲ. ರೈಲು ಮುಂದೆ ಹೋಗ್ತಿದ್ದಂತೆ ಎಚ್ಚೆತ್ತ ಶೆನಾಜ್ ರೈಲಿನ ಹಿಂದೆ ಓಡ್ತಾಳೆ.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿರುವ ಶೆನಾಜ್ ಕಿಕಿ ಚಾಲೆಂಜ್ ಪೂರ್ಣಮಾಡಲು ಮುಂದಾದ್ರೆ ಈ ಎಲ್ಲ ಕಷ್ಟ ಅನುಭವಿಸಬೇಕೆಂದು ಶೀರ್ಷಿಕೆ ಹಾಕಿದ್ದಾಳೆ. ಶೆನಾಜ್ ಈ ವಿಡಿಯೋವನ್ನು ಈವರೆಗೆ 5.5 ಲಕ್ಷ ಬಾರಿ ವೀಕ್ಷಣೆ ಮಾಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...