alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ತಾರೆಯರ ಹೊಸ ಟ್ರೆಂಡ್

ಬಟ್ಟೆ, ಬ್ಯಾಗ್, ಚಪ್ಪಲಿ, ಆಭರಣ ಇವೆಲ್ಲದರ ಫ್ಯಾಷನ್ ಬದಲಾಗ್ತಾನೆ ಇರುತ್ತೆ. ದಿನಕ್ಕೊಂದು ಫ್ಯಾಷನ್. ಅದ್ರಲ್ಲೂ ಹೆಚ್ಚಾಗಿ ಬಾಲಿವುಡ್ ಸ್ಟಾರ್ಸ್ ತೊಟ್ಟ ಉಡುಗೆ, ಹಾಕಿದ ಚಪ್ಪಲಿ ದಿನ ಬೆಳಗಾಗೋದ್ರೊಳಗೆ ಫ್ಯಾಷನ್ ಆಗ್ಬಿಡುತ್ತದೆ.

ಹಿರಿತೆರೆ ಇರಲಿ ಕಿರುತೆರೆ ಇರಲಿ ತಮ್ಮಿಷ್ಟದ ನಟಿಯರು ಧರಿಸಿದ ಬಟ್ಟೆ, ಆಭರಣ, ಚಪ್ಪಲಿ, ಬ್ಯಾಗನ್ನೇ ನಾವೂ ಧರಿಸಬೇಕೆಂದು ಅನೇಕ ಹುಡುಗಿಯರು ಕನಸು ಕಾಣ್ತಾರೆ. ವಿಶೇಷವೆಂದ್ರೆ ಹಿಟ್ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಹಿರೋಯಿನ್ ಬಳಸಿದ ಬಳೆ, ಬಟ್ಟೆಯ ಮಾಡಲ್ ಮಾರುಕಟ್ಟೆಯಲ್ಲಿ ಅದೇ ಸಿನಿಮಾ, ಧಾರಾವಾಹಿ ಹೆಸರಿನಲ್ಲಿ ಮಾರಾಟವಾಗುತ್ತದೆ.

ಮಾಡೆಲ್ ಸೇರಿದಂತೆ ಹಿರೋಯಿನ್ಸ್ ಕ್ಯಾಮರಾ ಮುಂದೆ ಬಂದ್ರು ಎಂದ್ರೆ ಎಲ್ಲರ ಕಣ್ಣು ಅವರ ಮೇಲಿರುತ್ತದೆ. ಅಡಿಯಿಂದ ಮುಡಿಯವರೆಗೂ ಹುಡುಗಿಯರು ಗಮನಿಸ್ತಾರೆ. ಇತ್ತೀಚೆಗೆ ಬೇರೆ ಬೇರೆ ಡಿಸೈನ್ ಬಟ್ಟೆ ಧರಿಸುವ ಹಿರೋಯಿನ್ಸ್ ಕೈನಲ್ಲಿ ಬ್ಯಾಗ್ ಫ್ಯಾಷನ್ ಆಗಿದೆ.

ಹ್ಯಾಂಡ್ ಬ್ಯಾಗ್ ಹಿಡಿದು ಹೊರಗೆ ಬರ್ತಿದ್ದಾರೆ ನಟಿಯರು. ಕಂಗನಾ, ಕರೀನಾ ಕಪೂರ್, ಸೋನಂ ಕಪೂರ್ ಳಿಂದ ಹಿಡಿದು ಶ್ರೀದೇವಿಯವರೆಗೆ ಎಲ್ಲರೂ hermès birkin bag ಗಳನ್ನು ಬಳಸ್ತಿದ್ದಾರೆ. ನೀವೂ ಕೂಡ ಈ ಹ್ಯಾಂಡ್ ಬ್ಯಾಗ್ ಕೈನಲ್ಲಿ ಹಿಡಿದು ನಿಮ್ಮ ಲುಕ್ ಬದಲಿಸಿಕೊಳ್ಳಿ. ಪ್ರವಾಸಕ್ಕೊಂದೇ ಅಲ್ಲ ಕಾಲೇಜು, ಕಚೇರಿಗೆ ಕೂಡ ನೀವು ಈ ಬ್ಯಾಗ್ ಬಳಸಬಹುದಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...