alex Certify
ಕನ್ನಡ ದುನಿಯಾ       Mobile App
       

Kannada Duniya

ಶೂಟಿಂಗ್ ವೇಳೆ ಗಾಯಗೊಂಡ ನಾಯಕ ನಟ ಆಸ್ಪತ್ರೆಗೆ

saif

ಮುಂಬೈ: ಸಿನಿಮಾದ ಸಾಹಸ ದೃಶ್ಯಗಳಲ್ಲಿ ಅಭಿನಯಿಸುವಾಗ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ, ಅಪಾಯ ಉಂಟಾಗಬಹುದಾದ ಸಾಧ್ಯತೆ ಇರುತ್ತದೆ. ನಾಯಕ ನಟರು ಸಾಮಾನ್ಯವಾಗಿ ಸಾಹಸ ದೃಶ್ಯಗಳಲ್ಲಿ ಡೂಪ್ ಬಳಸುತ್ತಾರೆ.

ಆದರೆ, ಇತ್ತೀಚೆಗೆ ಡೂಪ್ ಬಳಸದೇ ಬಹುತೇಕ ನಾಯಕ ನಟರೇ ರಿಸ್ಕ್ ತೆಗೆದುಕೊಳ್ಳುತ್ತಾರೆ. ಅಪಾಯಕಾರಿ ಸಾಹಸದ ದೃಶ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ. ಹೀಗೆ ಸಾಹಸದ ದೃಶ್ಯಗಳನ್ನು ಚಿತ್ರೀಕರಿಸುವ ಸಂದರ್ಭದಲ್ಲಿ ಯಡವಟ್ಟುಗಳಾಗಿ ಹಲವಾರು ನಾಯಕ ನಟರು ಗಾಯಗೊಂಡ ಪ್ರಕರಣಗಳು ನಡೆದಿವೆ. ಮುಂಬೈನಲ್ಲಿ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟ ಸೈಫ್ ಆಲಿ ಖಾನ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ನಡೆದಿದೆ.

ಮುಂಬೈನಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಸೈಫ್ ಆಲಿ ಖಾನ್ ಅವರ ಹೆಬ್ಬೆರಳಿಗೆ ತೀವ್ರ ಹಾನಿಯಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸೈಫ್ ಸಹೋದರಿ ಸೋಹಾ ಆಲಿ ಖಾನ್ ತಿಳಿಸಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...