
5 ಕೋಟಿ ರೂಪಾಯಿ ಸಾಲ ಪಡೆದು ಅದನ್ನು ಮರುಪಾವತಿ ಮಾಡದ ಪ್ರಕರಣದಲ್ಲಿ ಬಾಲಿವುಡ್ ನಟ ರಾಜ್ಪಾಲ್ ಯಾದವ್ ಮತ್ತವರ ಪತ್ನಿ ಅಪರಾಧಿಗಳೆಂದು ಸಾಬೀತಾಗಿದೆ. ಏಪ್ರಿಲ್ 23ರಂದು ಕರ್ಕರ್ದೂಮ ಕೋರ್ಟ್ ಇಬ್ಬರಿಗೂ ಶಿಕ್ಷೆಯನ್ನು ಪ್ರಕಟಿಸಲಿದೆ.
2010ರಲ್ಲಿ ನಡೆದ ಪ್ರಕರಣ ಇದು. ರಾಜ್ಪಾಲ್ ಯಾದವ್ ಮತ್ತವರ ಪತ್ನಿ ರಾಧಾ, ‘ಅತಾ ಪತಾ ಲಾಪತಾ’ ಚಿತ್ರಕ್ಕಾಗಿ ದೆಹಲಿ ಮೂಲದ ಉದ್ಯಮಿ ಎಂ.ಜಿ. ಅಗರ್ವಾಲ್ ಅವರಿಂದ ಸಾಲ ಪಡೆದಿದ್ದರು. ಆದ್ರೆ ಅದನ್ನು ಹಿಂದಿರುಗಿಸಿರಲಿಲ್ಲ.
ಹಾಗಾಗಿ ಉದ್ಯಮಿ, ರಾಜ್ಪಾಲ್ ಯಾದವ್ ಹಾಗೂ ರಾಧಾ ವಿರುದ್ಧ ಪ್ರಕರಣ ದಾಖಲಿಸಿದ್ದರು. 2013ರಲ್ಲಿ ಇದೇ ಕೇಸ್ ಗೆ ಸಂಬಂಧಪಟ್ಟಂತೆ ರಾಜ್ಪಾಲ್ ಯಾದವ್ ರನ್ನು 10 ದಿನಗಳ ನ್ಯಾಯಾಂಗ ಬಂಧನಕ್ಕೂ ಒಪ್ಪಿಸಲಾಗಿತ್ತು. ತಾವು ಈಗಾಗ್ಲೇ 1.8 ಕೋಟಿ ರೂಪಾಯಿಯನ್ನು ಮರುಪಾವತಿ ಮಾಡಿರುವುದಾಗಿ ನಟ ಹೇಳಿದ್ದರು.
ಕಂಪನಿಯೊಂದು ತಮಗೆ ಹೊಸ ಆಫರ್ ನೀಡಿದೆ, ತಮ್ಮ ಸಾಲದ ಮೊತ್ತ ಭರಿಸುವುದಾಗಿ ಹೇಳಿದೆ. ಇನ್ನು 30 ದಿನಗಳೊಳಗೆ ಬಾಕಿ ಇರುವ 3.2 ಕೋಟಿ ರೂಪಾಯಿಯನ್ನು ಪಾವತಿಸುತ್ತೇನೆ ಅಂತಾ ಕೋರ್ಟ್ ಗೆ ಭರವಸೆ ನೀಡಿದ್ದರು.