alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ನಟ ಇಂದರ್ ಕುಮಾರ್ ಇನ್ನಿಲ್ಲ

inder_kumar_twitter_resize

ಬಾಲಿವುಡ್ ನಟ ಇಂದರ್ ಕುಮಾರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಶನಿವಾರ ಬೆಳಿಗ್ಗೆ ಮುಂಬೈ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಮುಂಬೈನ ಅಂಧೇರಿಯ ಅವರ ಮನೆಯಲ್ಲಿಯೇ ನಿಧನರಾಗಿದ್ದು, ವೈದ್ಯರು ಪರೀಕ್ಷೆ ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ತಿಳಿಸಿದ್ದಾರೆ. 45 ವರ್ಷದ ಇಂದರ್ ಕುಮಾರ್ ಗೆ ಯಾವುದೇ ಹೃದಯ ಸಂಬಂಧಿ ಖಾಯಿಲೆಯಿರಲಿಲ್ಲ. ಸದ್ಯ ಚಿತ್ರವೊಂದರ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರು. ಇಂದರ್ ಕುಮಾರ್ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಮೊದಲ ಬಾರಿ 1996ರಲ್ಲಿ ಮಾಮೂಸ್ ಚಿತ್ರದಲ್ಲಿ ನಟಿಸಿದ್ದರು. ಸಲ್ಮಾನ್ ಖಾನ್ ಜೊತೆ ವಾಂಟೆಡ್ ಹಾಗೂ ತುಮ್ಕೋ ನಾ ಬೂಲು ಪಾಯೆಂಗೆ ಚಿತ್ರದಲ್ಲಿ ನಟಿಸಿದ್ದರು. ಅಕ್ಷಯ್ ಕುಮಾರ್ ಜೊತೆ ಕಿಲಾಡಿಯೊಂಕಾ ಕಿಲಾಡಿ ಚಿತ್ರದಲ್ಲಿ ನಟಿಸಿದ್ದರು ಇಂದರ್. 2014ರಲ್ಲಿ ಇಂದರ್ ಕುಮಾರ್ ವಿರುದ್ಧ ಅತ್ಯಾಚಾರದ ದೂರು ಕೇಳಿ ಬಂದಿತ್ತು. ಜೈಲಿಗೆ ಹೋಗಿದ್ದ ನಟನಿಗೆ ಜಾಮೀನು ಸಿಕ್ಕಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...