alex Certify
ಕನ್ನಡ ದುನಿಯಾ       Mobile App
       

Kannada Duniya

ಚಿತ್ರ ಫ್ಲಾಪ್ ಆದ್ರೆ ಅಮೀರ್ ಪಡೆಯುತ್ತಾರಂತೆ ಇಷ್ಟು ಹಣ…!

ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಇತ್ತೀಚಿಗೆ ಆಶ್ಚರ್ಯಕಾರಿ ವಿಷ್ಯವೊಂದನ್ನು ಬಹಿರಂಗಪಡಿಸಿದ್ದಾರೆ. ಆಸ್ಕರ್ ವರೆಗೆ ಹೋಗಿದ್ದ ಚಿತ್ರ ಮಾಡಲು ಅಮೀರ್ ಗೆ ಮನಸ್ಸಿರಲಿಲ್ಲವಂತೆ. ಲಗಾನ್ ನನಗೆ ಇಷ್ಟವಾಗಿರಲಿಲ್ಲ. ಲಗಾನ್ ಕಥೆ ವಿಚಿತ್ರವಾಗಿದೆ ಎನ್ನಿಸಿತ್ತು ಎಂದು ಅಮೀರ್ ಖಾನ್ ಹೇಳಿದ್ದಾರೆ.

ಮುಂಬೈನಲ್ಲಿ ನಡೆಯುತ್ತಿರುವ ಭಾರತೀಯ ಚಿತ್ರ ಬರಹಗಾರರ ಐದನೇ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅಮೀರ್ ಖಾನ್, ಸಿನಿಮಾ ಬರವಣೆಗೆ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಲ್ಲದೆ ಚಿತ್ರ ಜಗತ್ತಿಗೆ ಸಂಬಂಧಿಸಿದ ಕೆಲ ಕಥೆಗಳನ್ನು ಹಂಚಿಕೊಂಡರು. ಅಮೀರ್ ಖಾನ್ ಯಾವುದೇ ಸಿನಿಮಾಕ್ಕಾಗ್ಲಿ ಅದ್ರ ಕಥೆ ಬಹಳ ಮುಖ್ಯ ಎಂದಿದ್ದಾರೆ. ಕಥೆ ಇಷ್ಟವಾದ್ರೆ ಮಾತ್ರ ಸಿನಿಮಾ ಒಪ್ಪಿಕೊಳ್ಳುತ್ತೇನೆ ಎಂದ ಅಮೀರ್, ಯಾವುದೋ ನಟರೊಬ್ಬರು ಕಥೆ ಕೇಳದೆ, ಬಟ್ಟೆ ಹೇಗಿರುತ್ತದೆ ಎಂದು ಪ್ರಶ್ನೆ ಮಾಡಿದ್ದರಂತೆ. ಇದನ್ನು ನೆನೆದ ಅಮೀರ್, ಕಥೆ ಬದಲು ಬಟ್ಟೆಗೆ ಮಹತ್ವ ನೀಡಿದ್ದು ನನಗೆ ಆಶ್ಚರ್ಯ ತರಿಸಿತ್ತು ಎಂದಿದ್ದಾರೆ.

ನಿರ್ಮಾಪಕರ ಜೊತೆ ಕಲಾವಿದನ ಪಾತ್ರವೂ ಮಹತ್ವದ್ದಂತೆ. ನಿರ್ಮಾಪಕರಿಗಿರುವಷ್ಟೇ ಜವಾಬ್ದಾರಿ ಕಲಾವಿದರಿಗಿರುತ್ತದೆ ಎಂದ ಅಮೀರ್, ನನ್ನ ಅಭಿನಯದ ಯಾವುದೇ ಚಿತ್ರ ಈವರೆಗೆ ಫ್ಲಾಪ್ ಆಗಿಲ್ಲ. ಆರಂಭದಲ್ಲಿ ನಾನು ಹಣ ಪಡೆಯುವುದಿಲ್ಲ. ಲಾಭ ಬಂದ ನಂತ್ರ ಹಣ ಪಡೆಯುತ್ತೇನೆ. ಒಂದು ವೇಳೆ ನನ್ನ ಚಿತ್ರ ನಷ್ಟ ಅನುಭವಿಸಿದ್ರೆ ನಾನು ಸಂಭಾವನೆ ಪಡೆಯುವುದಿಲ್ಲವೆಂದು ಅಮೀರ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...