alex Certify
ಕನ್ನಡ ದುನಿಯಾ       Mobile App
       

Kannada Duniya

ಅದೃಷ್ಟ ಬದಲಾಗ್ತಿದ್ದಂತೆ 1.20 ಕೋಟಿ ಮೌಲ್ಯದ ಕಾರು ಖರೀದಿಸಿದ ನಟ

ದೀರ್ಘ ಸಮಯದ ನಂತ್ರ ಬಾಲಿವುಡ್ ಗೆ ಮತ್ತೆ ವಾಪಸ್ ಆಗಿರುವ ನಟ ಬಾಬಿ ಡಿಯೋಲ್ ಅದೃಷ್ಟ ಬದಲಾಗಿದೆ. ರೇಸ್-3 ಬಾಬಿ ಡಿಯೋಲ್ ಕೈ ಹಿಡಿದಿದೆ. ಇನ್ಮುಂದೆ ಉತ್ತಮ ಅವಕಾಶ ಸಿಗಬಹುದೆಂಬ ನಿರೀಕ್ಷೆಯಲ್ಲಿರುವ ಬಾಬಿ ಡಿಯೋಲ್ ತಮಗಾಗಿ ಒಂದು ಭರ್ಜರಿ ಉಡುಗೊರೆ ಖರೀದಿ ಮಾಡಿದ್ದಾರೆ.

ಬಾಬಿ ಡಿಯೋಲ್ 1.20 ಕೋಟಿ ರೂಪಾಯಿ ಮೌಲ್ಯದ ರೇಂಜ್ ರೋವರ್ ಕಾರು ಖರೀದಿ ಮಾಡಿದ್ದಾರೆ. ಬಾಬಿ ಖರೀದಿಸಿರುವ ರೇಂಜ್ ರೋವರ್ 3.0 ಲೀಟರ್ ಡಿಸೇಲ್ ನ ಸ್ಪೋರ್ಟ್ಸ್ ಕಾರ್. ಬಾಬಿ ಡಿಯೋಲ್ ಗೆ ಐಷಾರಾಮಿ ಕಾರು ಹಾಗೂ ಬೈಕ್ ಖರೀದಿಸುವ ಹವ್ಯಾಸವಿದೆ. ಬಾಬಿ ಡಿಯೋಲ್ ಬಳಿ ಸಾಕಷ್ಟು ದುಬಾರಿ ಬೆಲೆಯ ಕಾರ್ ಹಾಗೂ ಬೈಕ್ ಗಳಿವೆ.

ರೇಸ್-3 ಚಿತ್ರಕ್ಕೆ ಬಾಬಿ ಡಿಯೋಲ್ ಗೆ ಅವಕಾಶ ನೀಡಿದ್ದು ಸಲ್ಮಾನ್. ಈ ಸಂಗತಿಯನ್ನು ಬಾಬಿ ಡಿಯೋಲ್ ಎಲ್ಲರ ಮುಂದೆ ಹೇಳಿದ್ದರು. ಸನ್ನಿ ಡಿಯೋಲ್ ಸಲ್ಮಾನ್ ಖಾನ್ ಗೆ ಸಹಾಯ ಮಾಡಿದ್ದರಂತೆ. ಈಗ ಸಲ್ಮಾನ್ ಬಾಬಿ ಡಿಯೋಲ್ ಗೆ ನೆರವಾದ್ರು. ಮೂಲಗಳ ಪ್ರಕಾರ ರೇಸ್-3 ಗಾಗಿ ಬಾಬಿ ಡಿಯೋಲ್ ಗೆ 7.50 ಕೋಟಿ ಸಂಭಾವನೆ ಸಿಕ್ಕಿದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...