alex Certify
ಕನ್ನಡ ದುನಿಯಾ       Mobile App
       

Kannada Duniya

ವಿಜಯ್ ‘ಮೆರ್ಸಲ್’ ಸಿನಿಮಾ ಡೈಲಾಗ್ ಗೆ ಬಿ.ಜೆ.ಪಿ. ಕಿಡಿ

ಚೆನ್ನೈ: ವಿಜಯ್ ಅಭಿನಯದ ‘ಮೆರ್ಸಲ್’ ಸಿನಿಮಾದಲ್ಲಿ ಡೈಲಾಗ್ ಬಿ.ಜೆ.ಪಿ. ಅಸಮಾಧಾನಕ್ಕೆ ಕಾರಣವಾಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿರುವ ‘ಮೆರ್ಸಲ್’ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಚಿತ್ರದಲ್ಲಿ ಜಿ.ಎಸ್.ಟಿ. ಮತ್ತು ಡಿಜಿಟಲ್ ಇಂಡಿಯಾ ಕುರಿತಾಗಿ ಪ್ರಶ್ನಿಸಲಾಗಿದೆ.

ಚಿತ್ರದ ಸನ್ನಿವೇಶವೊಂದರಲ್ಲಿ ಸಿಂಗಾಪೂರದಲ್ಲಿ ಶೇ. 8 ರಷ್ಟು ತೆರಿಗೆ ಇದ್ದರೆ, ಭಾರತದಲ್ಲಿ ಶೇ. 28 ರಷ್ಟು ತೆರಿಗೆ ಇದೆ ಎಂದು ಪ್ರಶ್ನಿಸುವ ವಿಜಯ್ ಜಿ.ಎಸ್.ಟಿ. ಅಡಿ ಮದ್ಯವನ್ನು ತಂದಿಲ್ಲ ಏಕೆ ಎಂದು ಕೇಳುತ್ತಾರೆ.

ಈ ದೃಶ್ಯಗಳಿಗೆ ಕತ್ತರಿ ಹಾಕಬೇಕೆಂದು ತಮಿಳುನಾಡು ಬಿ.ಜೆ.ಪಿ. ನಾಯಕರಾದ ಸೌಂದರ್ ರಾಜನ್ ಒತ್ತಾಯಿಸಿದ್ದಾರೆ. ಚಿತ್ರದಲ್ಲಿನ ದೃಶ್ಯಗಳು ರಾಜಕೀಯ ಪ್ರೇರಿತವಾಗಿದ್ದು, ಅದನ್ನು ಕೈಬಿಡದಿದ್ದರೆ, ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...