alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಿಕಾ ಶಿರಚ್ಛೇದಕ್ಕೆ ಕರೆಕೊಟ್ಟಿದ್ದ ಬಿಜೆಪಿ ಮುಖಂಡ ಅರೆಸ್ಟ್

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ  ಶಿರಚ್ಛೇದ ಮಾಡಿದವರಿಗೆ 10 ಕೋಟಿ ರೂಪಾಯಿ ಬಹುಮಾನ ಕೊಡುವುದಾಗಿ ಘೋಷಿಸಿದ್ದ ಬಿಜೆಪಿ ಮುಖಂಡ ಕನ್ವರ್ ಸೂರಜ್ ಪಾಲ್ ಸಿಂಗ್ ಅಮ್ಮುನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

ಸೂರಜ್ ಪಾಲ್ ನಿವಾಸದಲ್ಲೇ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಈತ ರಾಜ್ಪೂತ್ ಕರ್ಣಿ ಸೇನಾದ ಪ್ರಧಾನ ಕಾರ್ಯದರ್ಶಿಯೂ ಹೌದು. ಪದ್ಮಾವತ್ ಚಿತ್ರವನ್ನು ನಿಷೇಧಿಸುವಂತೆ ಒತ್ತಾಯಿಸಿ ಕರ್ಣಿ ಸೇನಾ ಭಾರೀ ಪ್ರತಿಭಟನೆ ನಡೆಸುತ್ತಿತ್ತು. ಈ ವೇಳೆ ದೀಪಿಕಾ ಹಾಗೂ ಬನ್ಸಾಲಿ ಶಿರಚ್ಛೇದಕ್ಕೆ ಅಮ್ಮು ಕರೆಕೊಟ್ಟಿದ್ದರು.

ಪದ್ಮಾವತ್ ಚಿತ್ರದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಪಾತ್ರ ಮಾಡಿರುವ ನಟ ರಣವೀರ್ ಸಿಂಗ್ ರ ಕಾಲು ಮುರಿಯುವುದಾಗಿ ಅಮ್ಮು ಬೆದರಿಕೆ ಹಾಕಿದ್ದರು. ನವೆಂಬರ್ 21ರಂದು ದೀಪಿಕಾ ಹಾಗೂ ಬನ್ಸಾಲಿ ಅವರ ಅಭಿಮಾನಿಯೊಬ್ಬ ಅಮ್ಮು ವಿರುದ್ಧ ಕೇಸ್ ದಾಖಲು ಮಾಡಿದ್ದ.

ತಮ್ಮ ಹೇಳಿಕೆಗೆ ಈಗಲೂ ಬದ್ಧ ಎಂದಿದ್ದ ಅಮ್ಮು, ತಮ್ಮನ್ನು ಬಂಧಿಸುವಂತೆ ಹರಿಯಾಣ ಪೊಲೀಸರಿಗೆ ಸವಾಲು ಹಾಕಿದ್ದರು. ಅಷ್ಟೇ ಅಲ್ಲ ನವೆಂಬರ್ 29 ರಂದು ಬಿಜೆಪಿಗೆ ರಾಜೀನಾಮೆ ಕೂಡ ನೀಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...