alex Certify
ಕನ್ನಡ ದುನಿಯಾ       Mobile App
       

Kannada Duniya

ಬೇಬಿ ಡಾಲ್ ಸನ್ನಿ ಲಿಯೋನ್ ಮೇಲೆ ಪೊಲೀಸ್ ಕಣ್ಣು

ಐಪಿಎಲ್ ಬೆಟ್ಟಿಂಗ್ ದಂಧೆ ಜೊತೆ ಬಿಟ್ ಕಾಯಿನ್ ಹಗರಣ ಬಾಲಿವುಡ್ ಕಲಾವಿದರ ಕೊರಳಿಗೆ ಉರುಳಾಗ್ತಿದೆ. ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ನಂತ್ರ ಈಗ ಬಾಲಿವುಡ್ ಬೇಬಿ ಡಾಲ್ ಹೆಸ್ರು ಬಿಟ್ ಕಾಯಿನ್ ಹಗರಣದಲ್ಲಿ ಕೇಳಿ ಬಂದಿದೆ. ಮುಖ್ಯ ಆರೋಪಿ ಅಮಿತ್ ಭಾರದ್ವಾಜ್ ಒಬ್ಬೊಬ್ಬರ ಹೆಸರನ್ನು ಹೊರಗೆ ಹಾಕ್ತಿದ್ದಾನೆ.

ಸದ್ಯದಲ್ಲಿಯೇ ಸನ್ನಿ ಲಿಯೋನ್ ಗೆ ಪೊಲೀಸರು ಸಮನ್ಸ್ ಜಾರಿ ಮಾಡುವ ಸಾಧ್ಯತೆಯಿದೆ. ಸನ್ನಿಯೊಂದೇ ಅಲ್ಲ ನೇಹಾ ಧೂಪಿಯಾ, ಜರೀನ್ ಖಾನ್, ಸೋನಲ್ ಚೌಹಾಣ್ ಸೇರಿದಂತೆ ಕೆಲ ಕಲಾವಿದರ ಹೆಸರು ಥಳಕು ಹಾಕಿಕೊಂಡಿದೆ. ಇದ್ರ ಬಗ್ಗೆ ಅಧಿಕಾರಿ ಮೂಲಗಳಿಂದ ಯಾವುದೇ ಹೇಳಿಕೆಯಾಗ್ಲಿ, ಸಮನ್ಸ್ ಆಗಲಿ ಜಾರಿಯಾಗಿಲ್ಲ.

ಮಂಗಳವಾರ ರಾಜ್ ಕುಂದ್ರಾ ವಿಚಾರಣೆ ನಡೆದಿದೆ. ಕೆಲ ಗಂಟೆ ಪೊಲೀಸ್ ಮುಂದೆ ಕುಳಿತು ಬಂದಿರುವ ರಾಜ್ ಕುಂದ್ರಾ ಶಂಕಿತ ಆರೋಪಿಯಾಗಿ ವಿಚಾರಣೆ ನಡೆದಿಲ್ಲ. ಸಾಕ್ಷಿಯಾಗಿ ನನ್ನ ವಿಚಾರಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಬಿಟ್ ಕಾಯಿನ್ ಸಂಬಂಧ ವೆಬ್ಸೈಟ್ ಶುರು ಮಾಡಿದ್ದ ಅಮಿತ್ ಭಾರದ್ವಾಜ್ ನನ್ನು ಪುಣೆಯಲ್ಲಿ ಬಂಧಿಸಲಾಗಿದೆ. ಈತನ ಬಗ್ಗೆ ಹೆಚ್ಚಿಗೆ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ. ಈ ಹಗರಣ 2000 ಕೋಟಿಗಿಂತಲೂ ಹೆಚ್ಚಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...