alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಕಷ್ಟಕ್ಕೆ ಸಿಲುಕಿದ್ದಾಳೆ ಕರಣ್ ಕೈ ಹಿಡಿದ ಬಿಪಾಷಾ

bipasha-hairstyle

ಸದ್ಯ ಕರಣ್ ಸಿಂಗ್ ಗ್ರೋವರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಬಾಲಿವುಡ್ ಬ್ಲಾಕ್ ಬ್ಯೂಟಿ ಬಿಪಾಷಾ ಬಸು ಸಮಸ್ಯೆಗೆ ಸಿಲುಕಿದ್ದಾಳೆ. ಅಭಿಮಾನಿಗಳಿಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಬಿಪಾಷಾ ಬಸು, ಇನ್ಸ್ಟ್ರಾಗ್ರಾಮ್ ನಲ್ಲಿ ಶಾರ್ಟ್ ಹೇರ್ ಸ್ಟೈಲ್ ನಲ್ಲಿರುವ ಒಂದು ಫೋಟೋ ಅಪ್ ಲೋಡ್ ಮಾಡಿದ್ದಾಳೆ.

ಸಣ್ಣ ಕೂದಲಿನ ಫೋಟೋ ಹಾಕೋದ್ರಿಂದ ಸಂಕಷ್ಟ ಎದುರಾಗಿದೆಯಾ ಅನ್ನೋದು ಅಭಿಮಾನಿಗಳ ಪ್ರಶ್ನೆ. ಸಮಸ್ಯೆ ಬಂದಿರೋದು ಫೋಟೋದಿಂದ ಅಲ್ಲ, ಹೇರ್ ಕಟ್ ನಿಂದ. ಸಣ್ಣ ಕೂದಲು ಬಿಪಾಷಾಗೆ ಇಷ್ಟವಂತೆ. ಹಾಗಾಗಿ ಕೂದಲು ಕಟ್ ಮಾಡಿಸಿಕೊಂಡಿದ್ದಾಳೆ. ಆದ್ರೀಗ ಆಕೆಗೆ ತನ್ನ ಹಿಂದಿನ ಉದ್ದ ಕೂದಲಿನ ಮೇಲೆ ಪ್ರೀತಿ ಬಂದಿದೆಯಂತೆ. ಈಗ ಏನು ಮಾಡಬೇಕು ಅಂತಾ ಅಭಿಮಾನಿಗಳ ಮುಂದೆ ಪ್ರಶ್ನೆ ಇಟ್ಟಿದ್ದಾಳೆ ಬಿಪಾಷಾ.

ಖಂಡಿತಾ, ಬಿಪಾಷಾ ಅಭಿಮಾನಿಗಳು ಇದಕ್ಕೆ ಉತ್ತರ ನೀಡಲೇಬೇಕು. ಇಲ್ಲಮ್ಮ ಸಣ್ಣ ಕೂದಲು ಚೆನ್ನಾಗಿದೆ ಅಂತಾ ಸಮಾಧಾನ ಮಾಡ್ತೀರೋ, ಇಲ್ಲ ಬೇರೆ ಏನು ಹೇಳಿ ಬಿಪಾಷಾ ನೋವು ಕಡಿಮೆ ಮಾಡ್ತಿರೋ ನಿಮಗೆ ಬಿಟ್ಟಿದ್ದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...