alex Certify
ಕನ್ನಡ ದುನಿಯಾ       Mobile App
       

Kannada Duniya

ಹನಿಮೂನ್ ಗೆ ಸಲ್ಮಾನ್ ಬರ್ತಾರೆ ಎಂದ ಬಿಪಾಶಾ ಬಸು

bipashaಬಾಲಿವುಡ್ ಹಾಟ್ ಬೆಡಗಿ ಬಿಪಾಶಾ ಬಸು ಹಾಗೂ ನಟ ಕರಣ್ ಸಿಂಗ್ ಗ್ರೋವರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಂಗಾಲಿ ಸಂಪ್ರದಾಯದಂತೆ ಅದ್ಧೂರಿಯಾಗಿ ಮದುವೆ ಸಮಾರಂಭ ನಡೆಯಿತು. ಮದುವೆ ಬಳಿಕ ನಡೆದ ರಿಸೆಪ್ಷನ್ ಕೂಡ ಜೋರಾಗಿತ್ತು.

ಬಾಲಿವುಡ್ ಸೂಪರ್ ಸ್ಟಾರ್ ಗಳಾದ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಸಂಜಯ ದತ್, ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ, ಸೋನಂ ಕಪೂರ್, ರೋಹಿತ್ ಶೆಟ್ಟಿ, ರಿತೇಶ್ ದೇಶ್ ಮುಖ್, ಜೆನಿಲಿಯಾ, ಡಿನೂ ಮೋರಿಯಾ ಸೇರಿದಂತೆ ಹಲವಾರು ಕಲಾವಿದರ ದಂಡೇ ಆಗಮಿಸಿ ನವ ದಂಪತಿಗೆ ಶುಭ ಹಾರೈಸಿತು. ಎಲ್ಲರೂ, ಸಮಾರಂಭಕ್ಕೆ ಬಂದು ಹೋದ ನಂತರ, ಸಲ್ಮಾನ್ ಅವರನ್ನು ಬೀಳ್ಕೊಡಲು ಬಿಪಾಶಾ ಹಾಗೂ ಕರಣ್ ಸಿಂಗ್ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಮಾಧ್ಯಮದವರು, ಸಲ್ಮಾನ್ ಮದುವೆ ಯಾವಾಗ ಎಂದು ಪ್ರಶ್ನಿಸಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ಸಲ್ಮಾನ್, ನಿಮಗೆ ಅದೇ ಚಿಂತೆ ಎಂದು ಕಿಚಾಯಿಸಿದರು. ಈ ಸಂದರ್ಭದಲ್ಲಿ ಜೊತೆಗಿದ್ದ ಬಿಪಾಶಾ, ಮೊದಲು ನೀವು ಮದುವೆಯಾಗಿ ಎಂದು ಪ್ರೆಸ್ ಪರ್ಸನ್ ಒಬ್ಬರಿಗೆ ಕಿಚಾಯಿಸಿದ್ದಾರೆ. ಹೀಗೆ ಮಾತನಾಡುತ್ತಾ, ಬಿಪಾಶಾ ಸಲ್ಮಾನ್ ಕೆನ್ನೆ ಹಿಡಿದಿದ್ದಾರೆ. ಅಲ್ಲದೇ, ಸಲ್ಮಾನ್ ನನ್ನ ಫ್ರೆಂಡ್. ಹನಿಮೂನ್ ಗೆ ಅವರೂ ಬರ್ತಾರೆ ಎಂದು ತಮಾಷೆಯಾಗಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...