alex Certify
ಕನ್ನಡ ದುನಿಯಾ       Mobile App
       

Kannada Duniya

ನಿಶ್ಚಿತಾರ್ಥ ಮಾಡ್ಕೊಂಡ್ಲಂತೆ ಬಿಪಾಶಾ !

Image_ibnlive_380

ಬಾಲಿವುಡ್ ಹಾಟ್ ನಟಿ ಬಿಪಾಶಾ ಬಸು ಹಾಗೂ ನಟ ಕರಣ್ ಸಿಂಗ್ ಗ್ರೋವರ್ ಮದುವೆಯಾಗುತ್ತಾರೆ ಎಂಬ ಸುದ್ದಿ ಬಾಲಿವುಡ್ ನಲ್ಲಿ ಹರಿದಾಡುತ್ತಿರುವ ನಡುವೆಯೇ ಇಬ್ಬರೂ ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಕರಣ್ ಸಿಂಗ್ ಈಗಾಗಲೇ ತಮ್ಮ ಪತ್ನಿ ಜೆನ್ನಿಫರ್ ಅವರೊಂದಿಗೆ ಸಂಬಂಧ ಮುರಿದುಕೊಂಡಿದ್ದು, ವಿಚ್ಛೇದನಕ್ಕೂ ಅರ್ಜಿ ಹಾಕಿರುವುದು ಬಯಲಾಗಿತ್ತು. ಅಷ್ಟೇ ಅಲ್ಲ, ಕರಣ್ ಸಿಂಗ್ ಹಾಗೂ ಬಿಪಾಶಾ ಕೈ ಕೈ ಹಿಡಿದು ಓಡಾಡುತ್ತಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿತ್ತು.

ಇದೀಗ ಇದಕ್ಕೆ ಪೂರಕವೆಂಬಂತೆ ಈ ಜೋಡಿ ಜಿಮ್ ನಿಂದ ಹೊರ ಬರುವ ಸಮಯದಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು, ಈ ವೇಳೆ ಬಿಪಾಶಾ ಕೈಯಲ್ಲಿ ದೊಡ್ಡದಾದ ಡೈಮಂಡ್‍ ರಿಂಗ್ ಹಾಕಿರುವುದು ಕಂಡುಬಂದಿದೆ. ಹೀಗಾಗಿ ಇವರಿಬ್ಬರು ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸದ್ಯದಲ್ಲಿಯೇ ಮದುವೆಯನ್ನೂ ಆಗಲಿದ್ದಾರೆ ಎಂಬ ಮಾತಿಗೆ ಪುಷ್ಟಿ ದೊರೆತಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...