alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ನಲ್ಲಿ ಕಣ್ಣೀರಿಟ್ಟ ಅನುಪಮಾ, ಕಾರಣ ಗೊತ್ತಾ..?

‘ಬಿಗ್ ಬಾಸ್’ ಮನೆಯಲ್ಲಿ ಸದಸ್ಯರೆಲ್ಲರೂ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಿಸಿದ್ದಾರೆ. ರಾಜ್ಯೋತ್ಸವದ ವಿಶೇಷವಾಗಿ ಹಿಂದಿನ ದಿನವೇ ಅನುಪಮಾ ಮನೆಯ ಸದಸ್ಯರಿಗೆ ಡ್ಯಾನ್ಸ್ ಕಲಿಸಿಕೊಟ್ಟಿದ್ದಾರೆ.

‘ಕರುನಾಡೇ ಕೈ ಚಾಚಿದೆ ನೋಡೇ…’ ಹಾಡಿಗೆ ಸದಸ್ಯರು ನೃತ್ಯ ಪ್ರದರ್ಶನ ಮಾಡಿದ್ದು, ವಿಶೇಷವಾಗಿತ್ತು. ಮನೆಯಲ್ಲಿ ರಾಜ್ಯೋತ್ಸವ ಸಂಭ್ರಮ ಮನೆ ಮಾಡಿತ್ತು. ರಾಜ್ಯೋತ್ಸವದ ವಿಶೇಷವಾಗಿ ಪ್ರತಿ ಸದಸ್ಯರಿಗೆ 4 ಆಂಗ್ಲ ಪದಗಳ ಚೀಟಿಗಳನ್ನು ಕೊಟ್ಟು ಅದಕ್ಕೆ ಸರಿಯಾದ ಕನ್ನಡ ಪದಗಳನ್ನು ಹೇಳುವಂತೆ ತಿಳಿಸಲಾಗಿತ್ತು.

ಇನ್ನು ಆಡು ಆಟ ಆಡು ಟಾಸ್ಕ್ ನ ಮುಂದುವರೆದ ಭಾಗವಾದ ಮಣಭಾರ ಸವಾಲ್ ನಲ್ಲಿ ಕೈಯಲ್ಲಿ ಕೊನೆಯವರೆಗೂ ಮಣ್ಣು ತುಂಬಿದ ಚೀಲಗಳನ್ನು ಹಿಡಿದುಕೊಂಡಿದ್ದ ಜೆ.ಕೆ. ವಿಜೇತರಾಗಿದ್ದಾರೆ. ಈ ಸವಾಲ್ ಮಾಡುವ ಸಂದರ್ಭದಲ್ಲಿ ಹೆಚ್ಚಿನ ಸದಸ್ಯರು ಸುಸ್ತಾಗಿದ್ದಾರೆ.

ನೀರು ಇದ್ದ ಬಟ್ಟಲನ್ನು ಕೈಯಲ್ಲಿಡಿದು ತಿರುಗುವ ಸವಾಲ್ ನಲ್ಲಿ ಭಾಗವಹಿಸಿದ್ದ ಸದಸ್ಯರೆಲ್ಲರೂ ಕೆಳಗಿಳಿದಿದ್ದಾರೆ. ಚಂದನ್ ಮತ್ತು ಶ್ರುತಿ ಉಳಿದಿದ್ದು, ಯಾರು ಗೆಲ್ಲಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

ಸಿಹಿಕಹಿ ಚಂದ್ರು ಬೆಳಿಗ್ಗೆ ಗ್ಯಾಸ್ ಆಫ್ ಮಾಡದ ಕಾರಣ ಬಹು ಹೊತ್ತಿನವರೆಗೆ ಒಲೆ ಉರಿದಿದೆ. ಹಾಗಾಗಿ ಗ್ಯಾಸ್ ಬಂದ್ ಮಾಡಲಾಗಿದೆ. ಸದಸ್ಯರು ಗ್ಯಾಸ್ ಆನ್ ಮಾಡುವಂತೆ ಮನವಿ ಮಾಡಿದಾಗ, ‘ಬಿಗ್ ಬಾಸ್’ ಟಿ.ವಿ.ಯಲ್ಲಿ ಹಿಂದೆ ಜಯಶ್ರೀನಿವಾಸನ್ ಗ್ಯಾಸ್ ಆನ್ ಮಾಡಿ ಹಾಗೇ ಬಿಟ್ಟಿದ್ದು, ಆ ಸಂದರ್ಭದಲ್ಲಿ ಸದಸ್ಯರು ಮುಂದೆ ಹೀಗೆ ಆಗದಂತೆ ಎಚ್ಚರ ವಹಿಸುತ್ತೇವೆ ಎಂದು ಹೇಳಿದ್ದನ್ನು ತೋರಿಸಲಾಗಿದೆ.

ಚಂದ್ರು ಅವರಿಗೆ ತಾವು ಮಾಡಿದ ಯಡವಟ್ಟು ಗೊತ್ತಾಗಿದೆ. ಮನೆಯಲ್ಲಿನ ಸದಸ್ಯರು ಚಂದ್ರು ಅವರ ಮೇಲೆ ಗ್ಯಾಸ್ ವಿಚಾರಕ್ಕೆ ಸಿಟ್ಟಾಗಿಲ್ಲ. ಆದರೆ, ಜಯಶ್ರೀನಿವಾಸನ್ ಮಾತ್ರ ದಿವಾಕರ್ ಮತ್ತು ಸಮೀರಾಚಾರ್ಯ ಬಳಿ ಆಗ ನನಗೆ ಬೈದಾಡಿದ್ದರು. ಚಂದ್ರುಗೆ ಯಾರೂ ಬೈದಾಡಿಲ್ಲ ಎಂದು ಹೇಳಿದ್ದಾರೆ. ಚಂದ್ರು ಸದಸ್ಯರ ಬಳಿ ನನಗೆ ಬೈದಾಡದಿದ್ದರೆ, ಜಯಶ್ರೀನಿವಾಸನ್ ಅವರು ಬೇಜಾರಾಗ್ತಾರೆ ಎಂದಿದ್ದು ತಮಾಷೆಯಾಗಿತ್ತು.

ತೇಜಸ್ವಿನಿ ಬಳಿ ಮಾತನಾಡುತ್ತಿದ್ದ ಅನುಪಮಾ ಜಗನ್ ವಿಚಾರ ಪ್ರಸ್ತಾಪಿಸಿದ್ದಾರೆ. ಜಗನ್ ಹೆಸರು ಹೇಳದೇ ತಮ್ಮಿಬ್ಬರ ಗೆಳೆತನದ ವಿಚಾರವಾಗಿ ಹೇಳುತ್ತಾ ಕಣ್ಣೀರಿಟ್ಟಿದ್ದಾರೆ. ಮನೆಯಲ್ಲಿ ಜಗನ್ ಅಂತರ ಕಾಯ್ದುಕೊಳ್ಳುತ್ತಿರುವ ಬಗ್ಗೆ, ಗೊತ್ತು ಗೊತ್ತಿಲ್ಲದಂತೆ ವರ್ತಿಸುತ್ತಿರುವ ಬಗ್ಗೆ ದೂರಿದ್ದಾರೆ. ಅನುಪಮಾ ಬೇಸರವಾಗಿರುವುದರ ಬಗ್ಗೆ ಆಶಿತಾ ಜಗನ್ ಬಳಿ ಹೇಳಿದ್ದು, ಸಮಾಧಾನಪಡಿಸುವಂತೆ ಸಲಹೆ ನೀಡಿದ್ದಾರೆ. ನಂತರದಲ್ಲಿ ಅನುಪಮಾ ಬಳಿ ಬಂದ ಜಗನ್ ಸಮಾಧಾನದ ಮಾತುಗಳನ್ನಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...