alex Certify
ಕನ್ನಡ ದುನಿಯಾ       Mobile App
       

Kannada Duniya

2 ನೇ ಸಲ ಎಂಟ್ರಿ ಪಡೆದ ತೇಜಸ್ವಿನಿ ಮತ್ತೆ ಹೊರಕ್ಕೆ

ತಮ್ಮ ತಂದೆಯ ಅನಾರೋಗ್ಯದ ಕಾರಣದಿಂದ ‘ಬಿಗ್ ಬಾಸ್’ ಮನೆಯಿಂದ ಹೊರಹೋಗಿದ್ದ ತೇಜಸ್ವಿನಿ ಮತ್ತೆ ಎಂಟ್ರಿ ಪಡೆದಿದ್ದರು. ಆದರೆ, ಅವರು ಮತ್ತೆ ಮನೆಯಿಂದ ಹೊರ ಹೋಗಿದ್ದಾರೆ.

ತೇಜಸ್ವಿನಿ ತಂದೆಯವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅವರ ತಾಯಿ ಫೋನ್ ನಲ್ಲಿ ಮಾತನಾಡಿದ ಬಳಿಕ ಅವರು ಮನೆಯಿಂದ ಹೊರ ಹೋಗಿದ್ದರು. ನಂತರದಲ್ಲಿ ಮನೆಗೆ ಎಂಟ್ರಿ ಪಡೆದಿದ್ದ ಅವರು, ಮನೆಯನ್ನು ತುಂಬಾ ಮಿಸ್ ಮಾಡಿಕೊಂಡೆ. ಇಲ್ಲಿನ ಸ್ನೇಹಿತರನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಈ ವಾರ ಅವರೂ ನಾಮಿನೇಟ್ ಆಗಿದ್ದರು. ಅವರೊಂದಿಗೆ ಅನುಪಮಾ, ಸಿಹಿಕಹಿ ಚಂದ್ರು, ಜಯಶ್ರೀನಿವಾಸನ್, ನಿವೇದಿತಾ ಗೌಡ, ಸಮೀರಾಚಾರ್ಯ, ಜಗನ್, ಕಾರ್ತಿಕ್ ನಾಮಿನೇಟ್ ಆಗಿದ್ದರು. ಇವರಲ್ಲಿ ಚಂದ್ರು ಮೊದಲಿಗೆ ಸೇಫ್ ಆದರೆ, ನಂತರದಲ್ಲಿ ಜಯಶ್ರೀನಿವಾಸನ್, ಕಾರ್ತಿಕ್, ಅನುಪಮಾ, ಜಗನ್, ನಿವೇದಿತಾ ಹಾಗೂ ಸಮೀರಾಚಾರ್ಯ ಸೇಫ್ ಆಗಿದ್ದಾರೆ.

ಶನಿವಾರ ‘ವಾರದ ಕತೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಸುದೀಪ್ ಮನೆಯ ಸದಸ್ಯರೆಲ್ಲರು ಈ ವಾರ ಹೇಗೆಲ್ಲಾ ಇದ್ದರು ಎಂಬುದರ ಕುರಿತಾಗಿ ಮಾತನಾಡಿದ್ದಾರೆ. ಕ್ಯಾಪ್ಟನ್ ರಿಯಾಜ್ ಅವರ ಬಗ್ಗೆ ಆಶಿತಾ ತೋರಿದ ವರ್ತನೆ ಬಗ್ಗೆ ಆಕ್ಷೇಪಿಸಿದ್ದಾರೆ. ಇನ್ನು ಕಾರ್ತಿಕ್ ಶ್ರುತಿಗೆ ಹಾಡು ಕಲಿಸಿದ್ದು, ಡ್ರೆಸ್ ಬಗ್ಗೆ ಮಾತನಾಡಿದ್ದು ತಮಾಷೆಯಾಗಿತ್ತು. ‘ಎದೆಯಲ್ಲಿ ಗಿಟಾರ್..’ ಹಾಡಿಗೆ ಕಾರ್ತಿಕ್, ಶ್ರುತಿ, ಚಂದ್ರು, ಅನುಪಮಾ, ಕೃಷಿ ಡ್ಯಾನ್ಸ್ ಮಾಡಿದ್ದಾರೆ.

ಟಾಸ್ಕ್ ನಲ್ಲಿ ಸಮೀರಾಚಾರ್ಯ ಮತ್ತು ಚಂದನ್ ಅವರು ತೋರಿದ ವರ್ತನೆ ಬಗ್ಗೆ ಸುದೀಪ್ ಆಕ್ಷೇಪಿಸಿ ತಿಳಿಹೇಳಿದ್ದಾರೆ. ‘ಕಾಲರ್ ಆಫ್ ದಿ ವೀಕ್’ನಲ್ಲಿ ಮಾತನಾಡಿದ ಮೈಸೂರಿನ ಅಮೃತಾ, ಟಾಸ್ಕ್ ನಲ್ಲಿ ಜಗಳವಾದಾಗ ಚಂದ್ರು ಸಮಾಧಾನಪಡಿಸಿದರೂ, ಜಗನ್ ತೋರಿದ ವರ್ತನೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದೇ ವೇಳೆ ಚಂದನ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿವೇದಿತಾ ತಮ್ಮ ತಾಯಿಯ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ತಂದೆ, ತಾಯಿಯನ್ನು ಮಿಸ್ ಮಾಡಿಕೊಂಡಿದ್ದಕ್ಕೆ ಭಾವುಕರಾಗಿ ಕಣ್ಣೀರಿಟ್ಟಿದ್ದು, ಮನೆಯಿಂದ ಹೊರಗೆ ಕಳಿಸಬೇಡಿ ಎಂದು ತಮ್ಮದೇ ಶೈಲಿಯಲ್ಲಿ ಹೇಳಿದಾಗ, ಸುದೀಪ್ ಗೆ ನಗು ತಡೆಯಲಾಗಲಿಲ್ಲ.

ಮನೆಯಿಂದ ಹೊರ ಹೋಗುವ ಮೊದಲು ತೇಜಸ್ವಿನಿ ಸೂಪರ್ ಅಧಿಕಾರವನ್ನು ಕಾರ್ತಿಕ್ ಅವರಿಗೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...