alex Certify
ಕನ್ನಡ ದುನಿಯಾ       Mobile App
       

Kannada Duniya

ಸಮೀರ್ ಮೇಲೆ ಸದಸ್ಯರಿಗೆ ಅನುಮಾನ, ಕಾರಣ ಗೊತ್ತಾ…?

‘ಬಿಗ್ ಬಾಸ್’ ಮನೆಯಿಂದ ಜಯಶ್ರೀನಿವಾಸನ್ ಹೊರ ಹೋಗಿರುವ ಕುರಿತಾಗಿ ಸದಸ್ಯರ ನಡುವೆ ಚರ್ಚೆಯಾಗಿದೆ. ಚಂದನ್, ನಿವೇದಿತಾ ಮತ್ತು ಕೃಷಿ ಅವರು ಮಾತನಾಡಿದ್ದು, ಜಯಶ್ರೀನಿವಾಸನ್ ಯಾರಿಗೂ ಗೊತ್ತಾಗದಂತೆ ಹೋಗಿದ್ದಾರೆ. ಬಹುಶಃ ಫ್ಯಾಮಿಲಿ ಪ್ರಾಬ್ಲಂ ಇರಬಹುದೆಂದು ಕೃಷಿ ಹೇಳಿದ್ದಾರೆ.

ಇದನ್ನು ಒಪ್ಪದ ಚಂದನ್, ಅವರು ಸೀಕ್ರೆಟ್ ರೂಂನಲ್ಲಿ, ಸಮೀರಾಚಾರ್ಯ ಅವರೊಂದಿಗೆ ಇದ್ದರು. ವಾರಾಂತ್ಯದಲ್ಲಿ ಹೊರ ಹೋಗಿದ್ದಾರೆ. ಸಮೀರಾಚಾರ್ಯ ಮನೆಯೊಳಗೆ ಬಂದ ದಿನವೇ ಅವರು ಹೋಗಿದ್ದಾರೆ. ಆದರೆ, ಇದನ್ನು ಸಮೀರಾಚಾರ್ಯ ಹೇಳಿಕೊಳ್ತಿಲ್ಲ ಎಂದು ತಿಳಿಸಿದ್ದಾರೆ. ಇದಕ್ಕೆ ನಿವೇದಿತಾ ದನಿಗೂಡಿಸಿದ್ದಾರೆ. ಸಮೀರ್ ಸೀಕ್ರೆಟ್ ರೂಂನಲ್ಲಿದ್ದರೂ ಗುಟ್ಟು ಬಿಟ್ಟು ಕೊಡ್ತಿಲ್ಲ ಎಂದಿದ್ದಾರೆ.

ಟಾಸ್ಕ್ ನಲ್ಲಿ ತಂಡದ ಸದಸ್ಯರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸಮೀರಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದು ತಂಡಕ್ಕೆ ಅನುಪಮಾ, ಮತ್ತೊಂದು ತಂಡಕ್ಕೆ ಸಮೀರಾಚಾರ್ಯ ಅವರು ಆಯ್ಕೆಯಾಗಿದ್ದಾರೆ. ಸಮೀರ್ ಅವರ ತಂಡದಲ್ಲಿ ಕಾರ್ತಿಕ್, ಶ್ರುತಿ ಹಾಗೂ ಕೃಷಿ ಅವರಿದ್ದಾರೆ.

ಲಕ್ಸುರಿ ಬಜೆಟ್ ಟಾಸ್ಕ್ ನಲ್ಲಿ ನೀಡಲಾದ ಸವಾಲ್ ನಲ್ಲಿ ಏನೇ ಚಟುವಟಿಕೆ ಇದ್ದರೂ, 10 ನಿಮಿಷದಲ್ಲಿ ಮುಗಿಸುವುದಾಗಿ ಸದಸ್ಯರು ಹೇಳಿದ್ರು. ಆದರೆ, ಬಹಳ ಸಮಯ ತೆಗೆದುಕೊಂಡಿದ್ದಾರೆ ಎಂದು ಸಮೀರ್ ಬೇಸರಗೊಂಡಿದ್ದು, ಅದನ್ನು ರಿಯಾಜ್ ಮತ್ತು ನಿವೇದಿತಾ ಬಳಿ ಹೇಳಿಕೊಂಡಿದ್ದಾರೆ.

10 ನಿಮಿಷದಲ್ಲಿ ಟಾಸ್ಕ್ ಮುಗಿಸುವುದಾಗಿ ಹೇಳಿದ್ದರೂ, ಇನ್ನೊಂದು ಸವಾಲ್ ನಲ್ಲಿ ಸಮೀರ್ ಹೆಚ್ಚು ಸಮಯ ಕೊಟ್ಟಿದ್ದಕ್ಕೆ ಅವರ ತಂಡದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವು ಸವಾಲ್ ಗಳಲ್ಲಿ ಎರಡೂ ತಂಡದ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಕಬಡ್ಡಿ ಆಟದ ವೇಳೆ ರೆಫ್ರಿ ಬಂದಿದ್ದು, ಸದಸ್ಯರಿಗೆ ಸಲಹೆ ಸೂಚನೆ ನೀಡಿದ್ದಾರೆ. ಆಟವಾಡುವಾಗ ಹಲವರಿಗೆ ಪೆಟ್ಟಾಗಿದೆ. ಅನುಪಮಾ ಅವರು ಪೆಟ್ಟು ಮಾಡಿಕೊಂಡು ಅತ್ತಿದ್ದಾರೆ. ಆಟವನ್ನು ಫ್ರೆಂಡ್ಲಿ ಮ್ಯಾಚ್ ರೀತಿ ಖುಷಿಯಿಂದ ಆಡದೇ ಸಮೀರಾಚಾರ್ಯ ಆಕ್ರೋಶದಿಂದ ಆಡಿದ್ದಾಗಿ ಚಂದನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಿಯಾಜ್ ಕೂಡ ಅದೇ ರೀತಿ ಹೇಳಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಸಮೀರ್ ತಪ್ಪಾಗಿದ್ರೆ ತಿದ್ದಿಕೊಳ್ಳುವೆ ಎಂದು ಹೇಳಿದ್ದಾರೆ. ಕೊನೆಗೆ ತಮ್ಮಿಂದ ಪೆಟ್ಟಾಗಿಲ್ಲ ಎಂಬುದು ಅನುಪಮಾ ಅವರಿಂದ ತಿಳಿಯುತ್ತಿದ್ದಂತೆ ನಿರಾಳರಾಗಿದ್ದಾರೆ.

ಚಂದನ್ ಗೆ ‘ಬಿಗ್ ಬಾಸ್’ ಮನೆಯಲ್ಲಿ ಸರಿಯಾದ ಜೋಡಿ ಯಾರೆಂಬುದರ ಕುರಿತಾಗಿ ರಿಯಾಜ್ ಅವರೊಂದಿಗೆ ಚರ್ಚೆ ನಡೆದಿದೆ. ಕೃಷಿ, ಆಶಿತಾ, ಶ್ರುತಿ ಅವರು ಸರಿಯಾದ ಜೋಡಿಯಾಗಬಹುದು ಎಂದು ರಿಯಾಜ್ ಹೇಳಿದ್ದು, ಇದಕ್ಕೆ ಚಂದನ್, ಯಾರೂ ನನಗೆ ಸರಿಯಾಗಲ್ಲ. ಅವರಿಗೆ ಅವರದೇ ಆದ ಕನಸುಗಳಿವೆ. ನಾನು ಊರ ಕಡೆ ನೋಡಿಕೊಳ್ಳುವೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...