alex Certify
ಕನ್ನಡ ದುನಿಯಾ       Mobile App
       

Kannada Duniya

ನಕಲಿ ವ್ಯಕ್ತಿತ್ವಕ್ಕೆ ಸಮೀರ್ ಹೆಸರು ಹೇಳಿದ ನಿವೇದಿತಾ

‘ಬಿಗ್ ಬಾಸ್’ ಮನೆಯೊಳಗೆ ಸ್ಪರ್ಧಿಗಳು ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಲಕ್ಸುರಿ ಬಜೆಟ್ ಪಾಯಿಂಟ್ ಗಳನ್ನು ಕಟ್ ಮಾಡಲಾಗಿದೆ. ಇದರೊಂದಿಗೆ ಹಲವು ಸೌಲಭ್ಯಗಳನ್ನು ಹಿಂಪಡೆಯಲಾಗಿದೆ.

ಸಮೀರಾಚಾರ್ಯ ಮೊದಲಿಗೆ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಅಂಕ ಕಡಿತ ಮಾಡಿ, ಬಿಸಿನೀರು ಸೌಲಭ್ಯ ಹಿಂಪಡೆಯಲಾಗಿದೆ. ಸಮೀರ್ ‘ಬಿಗ್ ಬಾಸ್’ ಸೂಚನೆಯಂತೆ ಅಂಬೆಗಾಲಲ್ಲಿ ನಡೆಯದೇ ಮಂಡಿಯೂರಿ ನಡೆದಿದ್ದಾರೆ. ನಂತರದಲ್ಲಿ ಮನೆಯೊಳಗೆ ಸದಸ್ಯರು ನಿಯಮಗಳನ್ನು ಉಲ್ಲಂಘಿಸಿದ ಪ್ಲೇಟ್, ಬಟ್ಟಲುಗಳನ್ನು ಕೂಡ ಹಿಂಪಡೆಯಲಾಗಿದೆ.

‘ಬಿಗ್ ಬಾಸ್’ನಿಂದ ಹೊರಗೆ ಹೋಗಿರುವ ದಯಾಳ್ ಪದ್ಮನಾಭನ್ ಅವರು ಮತ್ತೆ ಮನೆಯೊಳಗೆ ಬಂದಿದ್ದು, ಅವರು ಸ್ಪರ್ಧಿಗಳಿಗೆ ಸವಾಲ್ ಒಂದನ್ನು ನಡೆಸಿಕೊಟ್ಟಿದ್ದಾರೆ. ವಿಶೇಷವಾದ ಸವಾಲ್ ನಲ್ಲಿ ಮರದ ಚೌಕಟ್ಟಿನ ಮೇಲೆ ತುದಿಗಾಲಲ್ಲಿ ನಿಂತು ತಲೆಯ ಮೇಲೆ ಮರದ ತುಂಡು ಹಿಡಿದಿಟ್ಟುಕೊಳ್ಳಬೇಕಿತ್ತು. ಉಳಿದ ಸದಸ್ಯರು ಅದನ್ನು ತಪ್ಪಿಸಲು ಪ್ರಯತ್ನಿಸಬೇಕಿತ್ತು. ಇದರಲ್ಲಿ ಚಂದನ್ ವಿಜೇತರಾಗಿದ್ದಾರೆ.

ಇನ್ನು ಸದಸ್ಯರಿಗೆ ತಾವು ಏಕೆ ‘ಬಿಗ್ ಬಾಸ್’ನಲ್ಲಿ ಗೆಲ್ಲಬೇಕೆಂದು ಹೇಳಲು ತಿಳಿಸಲಾಗಿದ್ದು, ಎಲ್ಲಾ ಸದಸ್ಯರು ತಾವು ಏಕೆ ಗೆಲ್ಲಬೇಕು. ಗೆಲ್ಲಲು ತಮಗಿರುವ ವೈಶಿಷ್ಟ್ಯತೆ ಏನು ಎಂಬುದನ್ನು ತಿಳಿಸಿದ್ದಾರೆ. ಸಮೀರ್ ಅವರು ತಾವೇಕೆ ಗೆಲ್ಲಬೇಕೆಂದು ಅಭಿಪ್ರಾಯ ಮಂಡಿಸಿದಾಗ, ದಿವಾಕರ್ ಆಕ್ಷೇಪದ ಪ್ರತಿಕ್ರಿಯೆ ನೀಡಿದ್ದಾರೆ. ನಂತರದಲ್ಲಿ ಅನೇಕ ಸದಸ್ಯರು ಸಮೀರ್ ಅವರಿಗೆ ಪ್ರಶ್ನೆಗಳನ್ನು ಕೇಳಿದ್ದು, ಅವುಗಳಿಗೆ ಸಮೀರ್ ಸ್ಪಷ್ಟನೆ ನೀಡಿದ್ದಾರೆ.

ಮನೆಯಲ್ಲಿ ನಿಮ್ಮ ಅತ್ಯುತ್ತಮ ಕ್ಷಣ ಯಾವುದು ಎಂದು ಕಾರ್ತಿಕ್ ಪ್ರಶ್ನಿಸಿದ್ದು, ಎಲ್ಲರಿಗೆ ಕೈತುತ್ತು ಕೊಟ್ಟಿದ್ದು ಎಂದು ದಿವಾಕರ್ ಹೇಳಿದ್ದಾರೆ. ಸುದೀಪ್ ಮನೆಯೊಳಗೆ ಬಂದಾಗ ತಮ್ಮ ಪಕ್ಕದಲ್ಲೇ ಕುಳಿತಿದ್ದು, ಅತ್ಯುತ್ತಮ ಕ್ಷಣ ಎಂದು ಸಮೀರ್ ತಿಳಿಸಿದ್ದಾರೆ. ಮನೆಯಲ್ಲಿ ನಾನು ಯಾರಿಗೂ ಸಾರಿ ಕೇಳುವುದಿಲ್ಲ ಎಂದು ನಿವೇದಿತಾ ಯಾರಿಗೆ ಸಾರಿ ಕೇಳ್ತೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮನೆಯಲ್ಲಿ ಸದಸ್ಯರಿಗೆ ಪ್ರತ್ಯೇಕವಾಗಿ ವಿವಿಧ ಪ್ರಶ್ನೆಗಳನ್ನು ‘ಬಿಗ್ ಬಾಸ್’ ಕೇಳಿದ್ದು, ಅವುಗಳಿಗೆ ಸದಸ್ಯರು ಉತ್ತರಿಸಿದ್ದಾರೆ. ಮೊದಲಿಗೆ ಉತ್ತರಿಸಿದ ನಿವೇದಿತಾ, ನಕಲಿ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಸಮೀರ್ ಎಂದು ತಿಳಿಸಿದ್ದಾರೆ.

ನಂತರದಲ್ಲಿ ‘ಬಿಗ್ ಬಾಸ್’ನಿಂದ ಹೊರಗೆ ಹೋಗಿರುವ ಸಿಹಿಕಹಿ ಚಂದ್ರು ಮನೆಯೊಳಗೆ ಪ್ರವೇಶಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...