alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರುತಿಗಾಗಿ ಚಂದನ್ ರಿಂದ ವಿಶೇಷ ಹಾಡು

‘ಬಿಗ್ ಬಾಸ್’ ನೀಡಿದ್ದ ಸೂಚನೆಯಂತೆ ಮನೆಯಲ್ಲಿ ಕೊಲೆಗಾರರ ಪಾತ್ರವನ್ನು ಅನುಪಮಾ ಮತ್ತು ರಿಯಾಜ್ ಗುಟ್ಟಾಗಿ ನಿರ್ವಹಿಸಿದ್ದಾರೆ.

‘ಬಿಗ್ ಬಾಸ್’ ಸೂಚನೆ ನೀಡಿದಂತೆ ಮನೆಯ ಸದಸ್ಯರಿಂದ ಕೊಲೆಗಾರ ಪಾತ್ರಧಾರಿಗಳು ಚಟುವಟಿಕೆಗಳನ್ನು ಮಾಡಿಸಿದಾಗ ಆ ಸದಸ್ಯರು ಕೊಲೆಯಾದಂತೆ. ಕೊಲೆಯಾದವರು ಬಿಳಿ ಬಟ್ಟೆಯನ್ನು ಧರಿಸಬೇಕಿತ್ತು.

ಇದರಲ್ಲಿ ರಿಯಾಜ್ ಅವರು ಲಾಸ್ಯ, ಜಯಶ್ರೀನಿವಾಸನ್ ಮತ್ತು ಸಮೀರಾಚಾರ್ಯ ಅವರಿಂದ ಚಟುವಟಿಕೆಗಳನ್ನು ಮಾಡಿಸಿದ್ದಾರೆ. ಅನುಪಮಾ ಅವರು, ನಿವೇದಿತಾ, ದಿವಾಕರ್ ಮತ್ತು ರಿಯಾಜ್, ಸಂಯುಕ್ತಾ ಅವರಿಂದ ಚಟುವಟಿಕೆ ಮಾಡಿಸಿದ್ದಾರೆ. ಬೇರೆ ಸದಸ್ಯರಿಗೆ ರಿಯಾಜ್ ಬಗ್ಗೆ ಅನುಮಾನ ಬಂದ ಕಾರಣ, ಅವರಿಂದ ಚಟುವಟಿಕೆ ಮಾಡಿಸುವಂತೆ ಅನುಪಮಾಗೆ ‘ಬಿಗ್ ಬಾಸ್’ ಸೂಚನೆ ನೀಡಿದ್ದರು. ಇನ್ನು ಮನೆಯ ಸದಸ್ಯರು ಕೊಲೆಗಾರರನ್ನು ಕಂಡು ಹಿಡಿಯುವಲ್ಲಿ ವಿಫಲರಾಗಿದ್ದು, ಅದರಲ್ಲಿ ಶ್ರುತಿ ಮತ್ತು ಕಾರ್ತಿಕ್ ಮಾತ್ರ ಅನುಪಮಾ ಅವರ ಹೆಸರನ್ನು ಹೇಳಿದ್ದಾರೆ.

ಈ ಸೀಕ್ರೆಟ್ ಟಾಸ್ಕ್ ನಲ್ಲಿ ‘ಬಿಗ್ ಬಾಸ್’ ಸಲಹೆ ಸೂಚನೆ ನೀಡಲು ರಿಯಾಜ್ ಗೆ ಮೊಬೈಲ್ ನೀಡಿದ್ದು, ಅದನ್ನು ನೋಡಿದ ಸಮೀರಾಚಾರ್ಯ, ನೀವು ಮನೆಯಲ್ಲಿ ಉಳಿದುಕೊಳ್ಳಲು ವೋಟ್ ಮಾಡಿಕೊಳ್ತಿದೀರಾ. ಯಾರಿಗೂ ತಿಳಿಯದಂತೆ ಫೋನ್ ತಂದು ಇಲ್ಲಿ ಮೆಸೇಜ್ ಮಾಡಿಕೊಳ್ತಿದೀರಾ ಎಂದು ಹೇಳಿದ್ದಾಗಿ ರಿಯಾಜ್ ತಿಳಿಸಿದ್ದು, ಇದನ್ನು ಕೇಳಿಸಿಕೊಂಡ ಸದಸ್ಯರು ನಗಾಡಿದ್ದಾರೆ.

ಇನ್ನು ಚಂದನ್ ಅವರು ಶ್ರುತಿಗಾಗಿ ವಿಶೇಷ ಹಾಡೊಂದನ್ನು ರಚಿಸಿದ್ದಾರೆ. ಅದನ್ನು ಮೊದಲಿಗೆ ನಿವೇದಿತಾ ಬಳಿ ಹೇಳಿದ ಚಂದನ್, ನಂತರ ಮನೆಯೊಳಗೆ ಎಲ್ಲರೊಂದಿಗೆ ಇದ್ದ ಶ್ರುತಿ ಅವರನ್ನು ಹೊರಗೆ ಕರೆದುಕೊಂಡು ಹೋಗಿ ಹಾಡಿದ್ದಾರೆ. ಹಾಡಿಗೆ ಶ್ರುತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶ್ರುತಿ ಮತ್ತು ನಿವೇದಿತಾ ಅವರ ಹೊರತಾಗಿ ಉಳಿದವರು ಡಿಲೀಟ್ ಆಗಿದ್ದಾರೆ ಎಂದು ಚಂದನ್ ಹೇಳಿದ್ದಾಗಿ ಅನುಪಮಾ ತಿಳಿಸಿದ್ದು, ಈ ಕುರಿತಾಗಿ ಭಾರೀ ಚರ್ಚೆ ನಡೆದಿದೆ. ಮಾತಿನ ನಡುವೆ ಸಂಯುಕ್ತಾ ಆಡಿದ ಮಾತಿಗೆ ಶ್ರುತಿ ಆಕ್ಷೇಪಿಸಿದ್ದು, ಅವರ ಮಾತಿಗೆ ಮಾತು ಬೆಳೆದಿದೆ. ನಂತರದಲ್ಲಿ ಇಬ್ಬರೂ ಮಾತನಾಡಿಕೊಂಡಿದ್ದು, ಗೊಂದಲ ಬಗೆಹರಿಸಿಕೊಂಡಿದ್ದಾರೆ.

ಪುರುಷರು, ಮಹಿಳೆಯರ ನಡುವಿನ ಸ್ಪರ್ಧಾತ್ಮಕ ಬೆಳವಣಿಗೆ ಮತ್ತು ಪೈಪೋಟಿ ಪರಿಚಯಿಸಲು ‘ಮೇಲಾ ಫೀಮೇಲಾ’ ಲಕ್ಸುರಿ ಬಜೆಟ್ ಟಾಸ್ಕ್ ನೀಡಲಾಗಿದೆ. ಪುರುಷರು ಮತ್ತು ಮಹಿಳೆಯರ ತಂಡಗಳನ್ನು ರಚಿಸಲಾಗಿದೆ. ಕಾಲ ಕಾಲಕ್ಕೆ ವಿವಿಧ ಹಂತದ ಸವಾಲುಗಳನ್ನು ನೀಡಲಾಗುತ್ತದೆ ಎಂದು ‘ಬಿಗ್ ಬಾಸ್’ ಹೇಳಿದ್ದಾರೆ. ಪುರುಷ ಹಾಗೂ ಮಹಿಳಾ ಸದಸ್ಯರು ತಮ್ಮ ಪರಿಚಯವನ್ನು ವಿಶೇಷವಾಗಿ ಪ್ರಸ್ತುತಪಡಿಸಿದ್ದು ವಿಶೇಷವಾಗಿತ್ತು.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...