alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’: ಮತ್ತೆ ಜೋರಾಯ್ತು ಕಲರವ

20170111_213147

‘ಬಿಗ್ ಬಾಸ್’ ಮನೆಯಲ್ಲಿ ಈಗಿನ ಸದಸ್ಯರು ಹಾಗೂ ಕಳೆದ ಸೀಸನ್ ನಲ್ಲಿದ್ದ ಸದಸ್ಯರ ನಡುವೆ ಟಾಸ್ಕ್ ನಲ್ಲಿ ಪೈಪೋಟಿ ಏರ್ಪಟ್ಟಿದೆ.

ಮನೆಗೆ ಬಂದಿರುವ ಹಳೆಯ ಸೀಸನ್ ಸದಸ್ಯರು ಅತಿಥಿಗಳೆಂದು ಭಾವಿಸಿ, ಸದಸ್ಯರು ಕೆಲಸ ಮಾಡಿದ್ದಾರೆ. ಹಿಂದಿನ ಸೀಸನ್ ನಲ್ಲಿದ್ದ ಶ್ರುತಿ, ನೀತು, ರಿಷಿಕಾ, ಸುನಾಮಿ ಕಿಟ್ಟಿ, ಅಯ್ಯಪ್ಪ ಅವರು ನಾವು ಬಂದ ಕುರಿತಾಗಿ ನಿಮ್ಮ ಅಭಿಪ್ರಾಯವೇನು ಎಂದು ಪ್ರಶ್ನಿಸಿದ್ದಾರೆ.

ಮನೆಯೊಳಗಿರುವ ಮೋಹನ್, ಭುವನ್, ರೇಖಾ, ಕೀರ್ತಿ ಹಾಗೂ ಶಾಲಿನಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಶ್ರುತಿ ಅತಿಥಿಗಳಾಗಿ ಬಂದಿರುವ ನಾವು ಕೆಲಸ ಮಾಡುತ್ತೇವೆ. ನೀವು ಆರಾಮಾಗಿರಿ ಎಂದು ಸದಸ್ಯರಿಗೆ ಹೇಳಿದ್ದಾರೆ.

ಇನ್ನು ಸೀಕ್ರೆಟ್ ರೂಂನಲ್ಲಿದ್ದ ಮಾಳವಿಕಾ ಮತ್ತು ಪ್ರಥಮ್ ನಡುವೆ ಸಣ್ಣದಾಗಿ ಮತ್ತೆ ವಾಗ್ವಾದ ನಡೆದಿದೆ.

ಸೀಕ್ರೆಟ್ ರೂಂನಲ್ಲಿದ್ದ ಮಾಳವಿಕಾ ಮೊದಲಿಗೆ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಅವರಿಗೆ ಕೀರ್ತಿ, ಭುವನ್, ಶಾಲಿನಿ ಎಲ್ಲಿದ್ರಿ ಎಂದು ಪ್ರಶ್ನಿಸಿದರೂ, ಮಾಳವಿಕಾ ಏನನ್ನೂ ಹೇಳಲಿಲ್ಲ.

2 ತಂಡಗಳನ್ನು ಮಾಡಲಾಗಿದ್ದು, ಟೈಯರ್ ಎತ್ತಿ ಹಾಕುವ ಟಾಸ್ಕ್ ನಲ್ಲಿ ಕಳೆದ ಸೀಸನ್ ನಲ್ಲಿದ್ದ ತಂಡ ಮೊದಲ ಸ್ಥಾನ ಪಡೆದುಕೊಂಡಿದೆ.

ಇವರೆಲ್ಲರನ್ನು ಸೀಕ್ರೆಟ್ ರೂಂನಲ್ಲಿ ಕಂಡ ಪ್ರಥಮ್, ನನ್ನನ್ನೂ ಮನೆಗೆ ಕಳಿಸಿ ‘ಬಿಗ್ ಬಾಸ್’ ಎಂದು ಕೇಳಿಕೊಂಡಿದ್ದು, ಎಲ್ಲರೂ ಮಲಗಿದ ಬಳಿಕ, ಬೆಳಗಿನ ಜಾವ 3 ಗಂಟೆಗೆ ಪ್ರವೇಶ ನೀಡಲಾಗಿದೆ. ಮನೆಯೊಳಗೆ ಸದಸ್ಯರ ಸಂಖ್ಯೆ ಜಾಸ್ತಿಯಾಗಿ ಸಂಭ್ರಮ ಮೂಡಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಸ್ಥಾಪಿಸಿದರೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...