alex Certify
ಕನ್ನಡ ದುನಿಯಾ       Mobile App
       

Kannada Duniya

ಕಾವೇರಿದ ‘ಬಿಗ್ ಬಾಸ್’ ಮನೆಯಲ್ಲಿ ಹೀಗಾಯ್ತು….

‘ಬಿಗ್ ಬಾಸ್’ ಮನೆ 2 ನೇ ವಾರದಲ್ಲಿ ಕಾವೇರಿದೆ. ಮೊದಲ ವಾರ ಸೈಲೆಂಟ್ ಆಗಿದ್ದ ಮನೆಯಲ್ಲಿನ ಸದಸ್ಯರು ತಮ್ಮ ನಿಜ ರೂಪ ಪ್ರದರ್ಶಿಸತೊಡಗಿದ್ದಾರೆ. ರೇಗಾಟ, ಸಿಟ್ಟು, ಕೂಗಾಟ ಎಲ್ಲವೂ ವ್ಯಕ್ತವಾಗಿದೆ. ಇದರೊಂದಿಗೆ ಮುಖ್ಯವಾಗಿ ಮಾನವೀಯತೆಯೂ ವ್ಯಕ್ತವಾಗಿದೆ.

ಟಾಸ್ಕ್ ಕಾರಣಕ್ಕೆ ಜಯಶ್ರೀನಿವಾಸನ್ ಅವರ ಮೇಲೆ ರೇಗಾಡಿದ್ದ ಅನುಪಮಾ ಸಾರಿ ಕೇಳಿದ್ದಾರೆ. ಆಕ್ರೋಶದಿಂದ ಮಾತನಾಡಿದ್ದ ಜಗನ್, ಜಯಶ್ರೀನಿವಾಸನ್ ಅಸ್ವಸ್ಥರಾದಾಗ ಗಾಳಿ ಬೀಸಿದ್ದಾರೆ. ಸಮೀರಾಚಾರ್ಯ, ಶ್ರೀನಿವಾಸನ್ ಊಟ ಮಾಡಲಿಲ್ಲವೆಂದು ಕಣ್ಣೀರಿಟ್ಟಿದ್ದಾರೆ. ಮೊದಲಿಗೆ ಸಿಟ್ಟಿನಲ್ಲಿ ಮಾತನಾಡಿದ್ದ ಸಿಹಿಕಹಿ ಚಂದ್ರು, ಸಮಾಧಾನದೊಂದಿಗೆ ಮಾತನಾಡಿದ್ದಾರೆ. ಈ ಮೂಲಕ ‘ಬಿಗ್ ಬಾಸ್’ ಹಲವು ಮುಖಗಳನ್ನು ಪರಿಚಯಿಸಿದೆ.

ಕೆಲಸದ ವಿಚಾರವಾಗಿ ಪದೇ ಪದೇ ಹೇಳಿದ್ದನ್ನೇ ಹೇಳಲಾಗದು. 2 ನೇ ವಾರಕ್ಕೆ ಬಂದಿದ್ದೇವೆ. ಎಲ್ಲರೂ ಹೊಂದಿಕೊಳ್ಳಬೇಕೆಂದು ಸಿಹಿಕಹಿ ಚಂದ್ರು ಹೇಳಿದ್ದು, ಇದೇ ವಿಚಾರಕ್ಕೆ ದಿವಾಕರ್ ಅವರೊಂದಿಗೆ ಮಾತಿನ ಚಕಮಕಿ ನಡೆದಿದೆ. ಚಂದ್ರು ಪರವಾಗಿ ದಯಾಳ್ ಬ್ಯಾಟಿಂಗ್ ಮಾಡಿದರೆ, ದಯಾನಂದ್ ಪರವಾಗಿ ರಿಯಾಜ್ ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ನಾವು ಕಾಮನ್ ಮ್ಯಾನ್ ಗಳೆಂದು ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ದಯಾನಂದ್, ಸಮೀರಾಚಾರ್ಯ, ಮೇಘಾ ಮಾತಾಡಿಕೊಂಡಿದ್ದಾರೆ. ಲಕ್ಸುರಿ ಬಜೆಟ್ ಟಾಸ್ಕ್ ನಲ್ಲಿ ಮೊಟ್ಟೆಯಲ್ಲಿದ್ದ ಚೀಟಿಯ ಬಣ್ಣದ ಆಧಾರದ ಮೇಲೆ 2 ತಂಡಗಳನ್ನು ಆಯ್ಕೆ ಮಾಡಲಾಗಿದೆ.

ಒಂದು ಮೊಟ್ಟೆಯ ಕತೆ ಸವಾಲ್ ನಲ್ಲಿ ಸದಸ್ಯರೆಲ್ಲಾ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ದಯಾಳ್ ತಂಡ ಮುನ್ನಡೆ ಕಾಯ್ದುಕೊಂಡಿದ್ದು, ಎದುರಾಳಿ ತಂಡದ ಸದಸ್ಯರು ಇವರು ಹೇಳಿದ್ದನ್ನು ಕೇಳುವಂತಾಗಿದೆ. ಊಟವಿಲ್ಲದ ಕಾರಣಕ್ಕೆ ಜೆ.ಕೆ. ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಯಶ್ರೀನಿವಾಸನ್ ಅಸ್ವಸ್ಥರಾಗಿದ್ದು, ಮನೆಯ ಸದಸ್ಯರು ಅವರನ್ನು ಆರೈಕೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...