alex Certify
ಕನ್ನಡ ದುನಿಯಾ       Mobile App
       

Kannada Duniya

ಸಿನಿಮಾ ನೋಡಿದ ಚಂದ್ರುಗೆ ಬಿಗ್ ಶಾಕ್

‘ಬಿಗ್ ಬಾಸ್’ ಮನೆಯಲ್ಲಿ ಈ ವಾರ ಆಧುನಿಕ ನಗರದ ಜೀವನ ಶೈಲಿಯನ್ನು ಪರಿಚಯಿಸುವ ಉದ್ದೇಶದಿಂದ, ‘ಬಿಗ್ ಬಾಸ್ ನಗರ’ ಲಕ್ಸುರಿ ಬಜೆಟ್ ಟಾಸ್ಕ್ ನೀಡಲಾಗಿದೆ.

ಇದಕ್ಕಾಗಿ 10,000 ಲಕ್ಸುರಿ ಬಜೆಟ್ ಪಾಯಿಂಟ್ ಗಳನ್ನು ನಿಗದಿಪಡಿಸಲಾಗಿದ್ದು, ಕೊನೆಯಲ್ಲಿ ಸದಸ್ಯರ ಬಳಿ ಉಳಿಯುವ ಹಣವನ್ನು ಜೋಪಾನವಾಗಿಟ್ಟುಕೊಳ್ಳಲು ತಿಳಿಸಲಾಗಿದೆ.

ಜಯಶ್ರಿನಿವಾಸನ್, ಜಗನ್ ಟ್ಯಾಕ್ಸಿ ಡ್ರೈವರ್ ಗಳಾಗಿದ್ದು, ಚಂದ್ರು, ಸಮೀರಾಚಾರ್ಯ, ಕ್ಯಾಂಟೀನ್ ಮಾಲೀಕರಾಗಿದ್ದಾರೆ. ಆಶಿತಾ, ಕಾರ್ತಿಕ್, ನಿವೇದಿತಾ, ಶ್ರುತಿ, ಅನುಪಮಾ, ದಿವಾಕರ್, ಚಂದನ್ ನಾಗರಿಕರಾಗಿದ್ದಾರೆ. ರಿಯಾಜ್ ಹಾಗೂ ಕೃಷಿ ಅಧಿಕಾರಿಗಳಾಗಿದ್ದಾರೆ.

ನಾಗರಿಕರಿಗೆ 2000 ರೂ. ನೀಡಲಾಗಿದೆ. ನಾಗರಿಕರು ಮತ್ತು ಕ್ಯಾಂಟೀನ್ ಮಾಲೀಕರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವಾಗ, ಟ್ಯಾಕ್ಸಿಯಲ್ಲಿ ಹೋಗಬೇಕಿದೆ. ತಮಗೆ ಬೇಕಾದ ತಿಂಡಿ, ಊಟಗಳನ್ನು ಕ್ಯಾಂಟೀನ್ ನಲ್ಲಿ ಹಣ ನೀಡಿ ಪಡೆದುಕೊಳ್ಳಬೇಕಿದೆ. ಮನೆಯ ಏರಿಯಾಗಳಿಗೆ ವಿವಿಧ ಹೆಸರಿಡಲಾಗಿದೆ.

ಅಧಿಕಾರಿಗಳು ನಿಯಮವನ್ನು ಬಿಗಿ ಮಾಡಿದ ಕಾರಣಕ್ಕೆ ಮತ್ತು ಹೆಚ್ಚಿನ ಹಣ ಕೇಳುತ್ತಿದ್ದಾರೆ ಎಂದು ದಿವಾಕರ್ ಜಗಳವಾಡಿದ್ದಾರೆ. ಇದೇ ಕಾರಣಕ್ಕೆ ದಿವಾಕರ್ ಮತ್ತು ರಿಯಾಜ್ ನಡುವೆ ಭಾರೀ ವಾಗ್ವಾದವೇ ನಡೆದಿದೆ.

ಇನ್ನು ‘ಬಿಗ್ ಬಾಸ್’ ಮನೆಯಲ್ಲಿ ಕನ್ ಫೆಷನ್ ರೂಂ ಕಪಾಲಿ ಥಿಯೇಟರ್ ಆಗಿದ್ದು, ಇಲ್ಲಿ ಟಿಕೆಟ್ ಪಡೆದು ಸಿನಿಮಾ ನೋಡಿದ ಚಂದ್ರುಗೆ ಶಾಕ್ ಆಗಿದೆ. ಮನೆಯಲ್ಲಿ ಸದಸ್ಯರು ಅವರ ಬಗ್ಗೆ ಮಾತನಾಡಿದ್ದನ್ನು ಸಿನಿಮಾದಲ್ಲಿ ತೋರಿಸಲಾಗಿದೆ.

ಜಗನ್, ಕಾರ್ತಿಕ್, ಜಯಶ್ರಿನಿವಾಸನ್, ರಿಯಾಜ್, ನಿವೇದಿತಾ ಮೊದಲಾದವರು ತಮ್ಮ ಬಗ್ಗೆ ಮಾತನಾಡಿದ್ದನ್ನು ನೋಡಿದ ಚಂದ್ರು ಸೈಲೆಂಟ್ ಆಗಿ ಹೊರ ಬಂದಿದ್ದಾರೆ. ಹೇಗಿದೆ ಸಿನಿಮಾ ಎಂದು ಸದಸ್ಯರು ಅವರನ್ನು ಪ್ರಶ್ನಿಸಿದ್ದು, ಸೂಪರ್ ಸಿನಿಮಾ ಎಂದು ಚಂದ್ರು ಹೇಳಿದ್ದಾರೆ. ರಿಯಾಜ್, ಯಾರ ಬಂಡವಾಳ ಹೇಗೆ ಎಂದು ತೋರಿಸಿದೆ ಎಂದಾಗ, ಅದು ನನಗಾಗಿಯೇ ಮಾಡಿದ ಸಿನಿಮಾ ಎಂದು ಚಂದ್ರು ಪ್ರತಿಕ್ರಿಯೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...