alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಸಿನಿಮಾದಲ್ಲಿ ಬಯಲಾಯ್ತು ಸದಸ್ಯರ ಬಂಡವಾಳ

‘ಬಿಗ್ ಬಾಸ್’ ಮನೆಯಲ್ಲಿ ಆಧುನಿಕ ನಗರದ ಜೀವನ ಶೈಲಿ ತಿಳಿಸಲು ‘ಬಿಗ್ ಬಾಸ್ ನಗರ’ ಲಕ್ಸುರಿ ಬಜೆಟ್ ಟಾಸ್ಕ್ ನೀಡಲಾಗಿದೆ. ಮನೆಯ ಏರಿಯಾಗಳಿಗೆ ವಿವಿಧ ಹೆಸರಿಡಲಾಗಿದೆ. ಕಬ್ಬನ್ ಪಾರ್ಕ್, ಕಪಾಲಿ ಥಿಯೇಟರ್, ಟೌನ್ ಹಾಲ್ ಮೊದಲಾದವು ಇವೆ.

‘ಬಿಗ್ ಬಾಸ್’ ಮನೆಯಲ್ಲಿ ಕನ್ ಫೆಷನ್ ರೂಂ ಕಪಾಲಿ ಥಿಯೇಟರ್ ಆಗಿದ್ದು, ಇಲ್ಲಿ ಟಿಕೆಟ್ ಪಡೆದು ಸಿನಿಮಾ ನೋಡಬಹುದಾಗಿದೆ. ಮನೆಯಲ್ಲಿ ಸದಸ್ಯರು ತಮ್ಮ ಬಗ್ಗೆ ಏನೆಲ್ಲಾ ಮಾತನಾಡಿದ್ದಾರೆ ಎಂಬುದನ್ನು ತೋರಿಸಲಾಗ್ತಿದೆ.

ಮೊದಲ ದಿನ ಸಿನಿಮಾ ನೋಡಿದ ಚಂದ್ರುಗೆ, ಮನೆಯಲ್ಲಿ ಸದಸ್ಯರು ಅವರ ಬಗ್ಗೆ ಮಾತನಾಡಿದ್ದನ್ನು ತೋರಿಸಲಾಗಿದೆ.

ಇದೇ ರೀತಿಯ ಅನುಭವ ಜಗನ್ ಮತ್ತು ಅನುಪಮಾ ಅವರಿಗೆ ಆಗಿದೆ.
ಮನೆಯಿಂದ ಹೊರ ಬಂದಿದ್ದ ಕೃಷಿ, ‘ಬಿಗ್ ಬಾಸ್’ ವೇದಿಕೆಯಲ್ಲಿ ಸುದೀಪ್ ಅವರೊಂದಿಗೆ ಜಗನ್ –ಆಶಿತಾ ಕುರಿತಾಗಿ ಮಾತನಾಡಿದ್ದನ್ನು ಜಗನ್ ಗೆ ತೋರಿಸಲಾಗಿದೆ. ಇದೇ ರೀತಿ ತಮಗೆ ಸಂಬಂಧಿಸಿದಂತೆ ಮನೆಯಲ್ಲಿ ಸದಸ್ಯರು ಮಾತಾಡಿಕೊಂಡಿದ್ದನ್ನು ಕಂಡ ಜಗನ್, ಅನುಪಮಾ ಮೊದಲಿಗೆ ಸೈಲೆಂಟ್ ಆದಂತೆ ತೋರಿದರೂ, ನಂತರ ಸರಿಯಾಗಿದ್ದಾರೆ.

ಇದೇ ವಿಚಾರವನ್ನು ಕೊನೆಯಲ್ಲಿ ಪ್ರಸ್ತಾಪಿಸಿದ ಅನುಪಮಾ, ಸಿನಿಮಾದಲ್ಲಿ ಸದಸ್ಯರು ಮಾತನಾಡಿದ್ದನ್ನು ತೋರಿಸಲಾಗಿದೆ. ಸದಸ್ಯರ ಬಗ್ಗೆ ಅಭಿಪ್ರಾಯ, ಭಿನ್ನಾಭಿಪ್ರಾಯಗಳಿದ್ದಲ್ಲಿ ಇನ್ನೊಬ್ಬರ ಬಳಿ ಮಾತನಾಡಿರುತ್ತೇವೆ. ಅಂತಹ ಅಭಿಪ್ರಾಯಗಳು ಒಂದೇ ರೀತಿ ಇರುವುದಿಲ್ಲ. ಆಗಾಗ ಬದಲಾಗುತ್ತವೆ ಎಂದಿದ್ದಾರೆ.

ಟಾಸ್ಕ್ ನಲ್ಲಿ ಸೋತ ಚಿತ್ರಗಳ ಸರದಾರನಾಗಿ ಕಾಣಿಸಿಕೊಂಡಿದ್ದ ದಿವಾಕರ್, ದಿನದ ಕೊನೆಯಲ್ಲಿ ತಾನು ಅನುಭವಿಸಿದ್ದನ್ನು ಹೇಳಿಕೊಂಡಾಗ ಮನೆಯ ಸದಸ್ಯರಿಗೆ ನಗು ತಡೆಯಲಾಗಲಿಲ್ಲ. ಅದರಲ್ಲೂ ಕೃಷಿ, ಕಾರ್ತಿಕ್ ಅವರಂತೂ ಕೆಳಗೆ ಕುಳಿತು ನಕ್ಕಿದ್ದಾರೆ.

ಮನೆಯಲ್ಲಿ ನಡೆದ ಕಡೆಲೆಕಾಯಿ ಪರಿಷೆಯಲ್ಲಿ ಜಾತ್ರೆ ಕೂಡ ನಡೆದಿದೆ. ಈ ಜಾತ್ರೆಯಲ್ಲಿ ರಿಯಾಜ್ ಕಿವಿಯೋಲೆಗಳನ್ನು ಖರೀದಿಸಿ ಮನೆಯಲ್ಲಿನ ಮಹಿಳಾ ಸದಸ್ಯರಿಗೆ ಕೊಟ್ಟಿದ್ದಾರೆ. ಈ ಸಂದರ್ಭ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ. ರಿಯಾಜ್ ಹಾಗೂ ಮಹಿಳಾ ಸದಸ್ಯರ ಕಣ್ಣಂಚಲ್ಲಿ ನೀರು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...