alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ನಲ್ಲಿ ಮೊಬೈಲ್ ಬಳಸಿದ ರಿಯಾಜ್

‘ಬಿಗ್ ಬಾಸ್’ನಲ್ಲಿ ಕೃಷಿ ಅವರ ಕ್ಯಾಪ್ಟನ್ ಅವಧಿ ಮುಕ್ತಾಯವಾಗಿದೆ. ಈ ವಾರ ಯಾರೂ ಕ್ಯಾಪ್ಟನ್ ಇರುವುದಿಲ್ಲ. ಸದಸ್ಯರೇ ಕೆಲಸಗಳನ್ನು ಹಂಚಿಕೊಳ್ಳುವಂತೆ ‘ಬಿಗ್ ಬಾಸ್’ ತಿಳಿಸಿದ್ದಾರೆ.

ಈ ವಾರ ಸದಸ್ಯರ ಆಯ್ಕೆಯನುಸಾರ ಸಮೀರಾಚಾರ್ಯ, ನಿವೇದಿತಾ, ಜಯಶ್ರೀನಿವಾಸನ್, ಸಂಯುಕ್ತಾ, ಅನುಪಮಾ ದಿವಾಕರ್ ನಾಮಿನೇಟ್ ಆಗಿದ್ದಾರೆ. ಮನೆಯಿಂದ ಹೊರ ಹೋಗುವ ಮೊದಲು ಜಗನ್ ನೀಡಿದ ಸೂಪರ್ ಅಧಿಕಾರದಂತೆ ಕಾರ್ತಿಕ್ ಅವರು, ಲಾಸ್ಯ ಅವರನ್ನು ನೇರ ನಾಮಿನೇಟ್ ಮಾಡಿದ್ದಾರೆ.

ಮನೆಯಲ್ಲಿ ಸರಿಯಾಗಿ ಕ್ಲೀನಿಂಗ್ ಮಾಡಿಲ್ಲದ ಕಾರಣಕ್ಕೆ ನಿವೇದಿತಾ ಬಗ್ಗೆ ಕಾರ್ತಿಕ್ ಅಸಮಾಧಾನಗೊಂಡಿದ್ದಾರೆ. ಕಾರ್ತಿಕ್ ಅವರೇ ಕ್ಲೀನ್ ಮಾಡಿದ್ದು, ನಿವೇದಿತಾ ತಾನು ಕ್ಲೀನ್ ಮಾಡಲು ಮುಂದಾದರೂ ಅದಕ್ಕೆ ಕಾರ್ತಿಕ್ ಅವಕಾಶ ನೀಡದೇ ಅವರೇ ಕ್ಲೀನ್ ಮಾಡಿದ್ದಾರೆ.

ಜಗನ್ ತನಗೆ ನೀಡಿದ ಡ್ರೆಸ್ ಹಾಕಿಕೊಂಡ ದಿವಾಕರ್ ಅದನ್ನು ಕ್ಯಾಮೆರಾ ಬಳಿ ತೋರಿಸಿ ಧನ್ಯವಾದ ಹೇಳಿದ್ದಾರೆ. ಕಾರ್ತಿಕ್ ಅವರನ್ನು ಬೆನ್ನ ಮೇಲೆ ಎತ್ತಿಕೊಂಡು ಸಂಯುಕ್ತಾ ಹೆಜ್ಜೆ ಹಾಕಿದ್ದಾರೆ. ಇದಕ್ಕಿಂತ ಮೊದಲು ಅವರು ನಿವೇದಿತಾರನ್ನು ಬೆನ್ನ ಮೇಲೆ ಕೂರಿಸಿಕೊಂಡಿದ್ದು, ನಂತರದಲ್ಲಿ ಕಾರ್ತಿಕ್ ಅವರನ್ನು ಎತ್ತಿಕೊಂಡು ಹೋಗಿದ್ದಾರೆ.

ದಿವಾಕರ್ ಬಳಿ ಮಾತನಾಡುತ್ತಿದ್ದ ಚಂದನ್, ಎಲ್ಲದಕ್ಕೂ ನಂಬರ್ ಆದ್ರೆ ಮನುಷ್ಯತ್ವಕ್ಕೆ ಬೆಲೆ ಎಲ್ಲಿದೆ ಎಂದು ಜಯಶ್ರೀನಿವಾಸನ್ ಕುರಿತಾಗಿ ಹೇಳಿದ್ದಾರೆ.

ಲಕ್ಸುರಿ ಬಜೆಟ್ ಟಾಸ್ಕ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಅನುಪಮಾ ಮತ್ತು ಶ್ರುತಿ ಅವರಿಗೆ ತಿನಿಸು ಬಂದಿದ್ದು, ಕೃಷಿ ಅದರ ರುಚಿ ನೋಡಿದ ಕಾರಣಕ್ಕೆ ಮುಂದಿನ ವಾರದ 300 ಬಜೆಟ್ ಪಾಯಿಂಟ್ ಕಟ್ ಮಾಡಲಾಗಿದೆ. ಇದೇ ವಿಚಾರಕ್ಕೆ ಸದಸ್ಯರು ಕೃಷಿ ಬಗ್ಗೆ ಕೆಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸದಸ್ಯರಿಗೆ ಚಟುವಟಿಕೆ ನೀಡಲಾಗಿದ್ದು, ಜೈಲಿನಿಂದ ತಪ್ಪಿಸಿಕೊಂಡ ಕೊಲೆಗಾರ ಮನೆ ಸೇರಿಕೊಂಡಿದ್ದು, ಮನೆಯ ಸದಸ್ಯರು ಹತ್ಯೆಗೆ ಈಡಾಗದಂತೆ ಎಚ್ಚರ ವಹಿಸಬೇಕಿದೆ ಎಂದು ಸೂಚನೆ ನೀಡಲಾಗಿದೆ.

ಇದರಲ್ಲಿ ಕೆಲವರಿಗೆ ಸೀಕ್ರೆಟ್ ಟಾಸ್ಕ್ ನೀಡಲಾಗಿದ್ದು, ಅದನ್ನು ಬೇರೆ ಸದಸ್ಯರಿಗೆ ತಿಳಿಯದಂತೆ ಜಾಣ್ಮೆಯಿಂದ ಆಟವಾಡಬೇಕಿದೆ. ಈ ನಿಟ್ಟಿನಲ್ಲಿ ಸದಸ್ಯರು ಪ್ರಯತ್ನ ನಡೆಸಿದ್ದಾರೆ.

ರಿಯಾಜ್, ಅನುಪಮಾ ಅವರಿಗೆ ಕೊಲೆಗಾರನ ಪಾತ್ರ ನಿರ್ವಹಿಸಲು ಹೇಳಲಾಗಿದ್ದು, ‘ಬಿಗ್ ಬಾಸ್’ ಸಲಹೆ ಸೂಚನೆ ನೀಡಲು ರಿಯಾಜ್ ಗೆ ಮೊಬೈಲ್ ನೀಡಿದ್ದಾರೆ. ಅವರು ಫೋನ್ ಮೂಲಕ ‘ಬಿಗ್ ಬಾಸ್’ನಿಂದ ಸೂಚನೆ ಪಡೆದಿದ್ದಾರೆ.

ಸದಸ್ಯರು ಮಾತನಾಡುವ ಸಂದರ್ಭದಲ್ಲಿ ಜಯಶ್ರೀನಿವಾಸ್, ಶ್ರುತಿ ಬಳಸಿದ ಭಾಷೆ ಬಗ್ಗೆ ಚರ್ಚೆ ನಡೆದಿದೆ. ಸಮೀರಾಚಾರ್ಯ ಅವರಿಗೆ ತಿಂಡಿ ತಿನ್ನಿಸಿದ ಕೃಷಿ, ಮನೆಯಲ್ಲಿ ಯಾರೂ ನಿಮ್ಮ ದ್ವೇಷಿಗಳಲ್ಲ. ನಿಮ್ಮನ್ನು ಮನೆಗೆ ಬರುವ ಮೊದಲು ಯಾರೂ ನೋಡಿಲ್ಲ. 3 ಹೊತ್ತು ಊಟ ಮಾಡಿ. ನೀವು ಉಪವಾಸವಿದ್ದು ಸಾಧಿಸುವುದಾದರೂ ಏನು ಎಂದು ಪ್ರಶ್ನಿಸಿದ್ದಾರೆ. ಎಲ್ಲರೊಂದಿಗೆ ಬೆರೆಯುವಂತೆ ಸಲಹೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...