alex Certify
ಕನ್ನಡ ದುನಿಯಾ       Mobile App
       

Kannada Duniya

ಕಮಲ್ ಹಾಸನ್ ‘ಬಿಗ್ ಬಾಸ್’ ಸೆಟ್ ನಲ್ಲಿ ದುರಂತ

kamal-story_647_062617123938

ತಮಿಳು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ, ಕಮಲ್ ಹಾಸನ್ ನಿರೂಪಣೆಯ ‘ಬಿಗ್ ಬಾಸ್’ ರಿಯಾಲಿಟಿ ಶೋಗಾಗಿ ಕೆಲಸ ಮಾಡ್ತಾ ಇದ್ದ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ. 28 ವರ್ಷದ ಇಬ್ರಾಹಿಂ ಶೇಕ್ ಮೃತ ದುರ್ದೈವಿ. ಈತ ಮುಂಬೈ ಮೂಲದವನು.

ಬಿಗ್ ಬಾಸ್ ರಿಯಾಲಿಟಿ ಶೋ ಸೆಟ್ ನಲ್ಲಿ ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದ. ಬಿಗ್ ಬಾಸ್ ಸ್ಟುಡಿಯೋದಲ್ಲೇ ಇದ್ದಕ್ಕಿದ್ದಂತೆ ಇಬ್ರಾಹಿಂ ಕುಸಿದು ಬಿದ್ದಿದ್ದ. ಕೂಡಲೇ ಸೆಟ್ ನಲ್ಲಿದ್ದ ಮೆಡಿಕಲ್ ಸೆಂಟರ್ ನಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯ್ತು.

ಆದ್ರೆ ಇಬ್ರಾಹಿಂಗೆ ಪ್ರಜ್ಞೆ ಮರಳಲಿಲ್ಲ. ನಂತರ ಆತನನ್ನು ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಅಲ್ಲಿಗೆ ಕರೆತರುವಷ್ಟರಲ್ಲೇ ಇಬ್ರಾಹಿಂ ಸಾವನ್ನಪ್ಪಿದ್ದ. ತಮಿಳಿನ ಬಿಗ್ ಬಾಸ್ ಕಾರ್ಯಕ್ರಮವನ್ನು ಖ್ಯಾತ ನಟ ಕಮಲ್ ಹಾಸನ್ ನಡೆಸಿಕೊಡುತ್ತಾರೆ. ಇದು ತಮಿಳುನಾಡಲ್ಲಿ ಅತಿ ಹೆಚ್ಚು ಜನರು ವೀಕ್ಷಿಸಿದ ರಿಯಾಲಿಟಿ ಶೋ ಎಂಬ ಖ್ಯಾತಿಯನ್ನೂ ಗಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...