alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ನಿಂದ ಮೊದಲ ವಾರ ಹೊರಹೋಗಿದ್ಯಾರು ಗೊತ್ತಾ..?

ಕಳೆದ ವಾರವಷ್ಟೇ ಆರಂಭವಾಗಿದ್ದ ‘ಬಿಗ್ ಬಾಸ್’ ಮನೆಯಿಂದ ಮೊದಲ ವಾರ ನಾಮಿನೇಟ್ ಆಗಿದ್ದ 7 ಮಂದಿಯಲ್ಲಿ ಯಾರು ಹೋಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.

ನಾಮಿನೇಟ್ ಆಗಿದ್ದ 7 ಮಂದಿಯಲ್ಲಿ ಮೊದಲಿಗೆ ಜಯಶ್ರೀನಿವಾಸನ್ ಸೇಫ್ ಆಗಿದ್ದಾರೆ. ಬಳಿಕ ಜೆ.ಕೆ., ನಂತರದಲ್ಲಿ ನಿವೇದಿತಾ ಗೌಡ, ದಿವಾಕರ್, ಜಗನ್ ಸೇಫ್ ಆದರು.

ಕೊನೆಯಲ್ಲಿ ಉಳಿದ ಮೇಘಾ ಮತ್ತು ಸುಮಾ ಅವರಲ್ಲಿ ಮನೆಯಿಂದ ಸುಮಾ ಅವರು ಹೊರಹೋಗಿದ್ದಾರೆ. ‘ವಾರದ ಕತೆ ಕಿಚ್ಚನ ಜೊತೆ’ ಶನಿವಾರದ ಸಂಚಿಕೆಯಲ್ಲಿ ಸುದೀಪ್ ಮನೆಯ ಸದಸ್ಯರೊಂದಿಗೆ ಪಂಚಾಯಿತಿ ನಡೆಸಿದ್ದಾರೆ.

ಇಡೀ ವಾರ ಮನೆಯಲ್ಲಿ ನಡೆದ ಘಟಾನವಳಿಗಳ ಕುರಿತಾಗಿ ಮೆಲುಕು ಹಾಕಿದ್ದು, ನಿಯಮವನ್ನು ಮೀರಿದ ಕಾರಣಕ್ಕೆ ಚಂದನ್ ಗೆ ಎಚ್ಚರಿಕೆ ನೀಡಿ, ಸನ್ನೆಗಳ ಮೂಲಕ ಮಾತನಾಡದಂತೆ ತಾಕೀತು ಮಾಡಿದ್ದಾರೆ. ಅಲ್ಲದೇ ಸಮೀರಾಚಾರ್ಯರಿಗೆ ಹೇಳುವುದನ್ನು ಮಾಡಬೇಕು. ಮಾಡುವುದನ್ನು ಹೇಳಬೇಕೆಂದು ಟಾಂಗ್ ಕೊಟ್ಟಿದ್ದಾರೆ. ಮನೆಯಲ್ಲಿ ಸಕಾರಾತ್ಮಕ ಬೆಳವಣಿಗೆ, ಚಿಂತನೆ ಇರಲಿ ಎನ್ನುವ ಸಮೀರಾಚಾರ್ಯ ಹಲವು ಸಲ ಸದಸ್ಯರಿಂದ ಅಂತರ ಕಾಯ್ದುಕೊಂಡ ಬಗ್ಗೆ ಸುದೀಪ್ ತಿಳಿ ಹೇಳಿದ್ದಾರೆ.

ಸದಸ್ಯರೆಲ್ಲರು ಇಡೀ ವಾರದಲ್ಲಿ ಏನೆಲ್ಲಾ ಮಾಡಿದ್ದಾರೆ ಎಂಬುದನ್ನು ಅವರವರ ಅಭಿಪ್ರಾಯಗಳಲ್ಲೇ ಕೇಳುತ್ತಾ ಎಂದಿನಂತೆ ಸುದೀಪ್ ತಮ್ಮದೇ ಶೈಲಿಯಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು. ಅದರಲ್ಲಿಯೂ ಜಯಶಂಕರ್ ಗುರೂಜಿಯವರನ್ನಂತೂ ಸುದೀಪ್ ಇನ್ನಿಲ್ಲದಂತೆ ಕಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...