alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಕುರಿತಾಗಿ ಹೆಚ್ಚಾಗ್ತಿದೆ ಕುತೂಹಲ

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 5 ಅಕ್ಟೋಬರ್ 15 ರಿಂದ ಆರಂಭವಾಗಲಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಳೆದ 4 ಸೀಸನ್ ಗಳಲ್ಲಿ ತಮ್ಮದೇ ಶೈಲಿಯ ನಿರೂಪಣೆಯಿಂದಾಗಿ ಅಭಿಮಾನಿಗಳನ್ನು ಸೆಳೆದಿದ್ದಾರೆ. 5 ನೇ ಸೀಸನ್ ನಲ್ಲಿಯೂ ಕಮಾಲ್ ಮಾಡಲಿದ್ದಾರೆ.

ದಿನಗಳು ಸಮೀಪಿಸುತ್ತಿರುವಂತೆಯೇ ವೀಕ್ಷಕರಲ್ಲಿ ‘ಬಿಗ್ ಬಾಸ್’ ಕುರಿತಾಗಿ ಕುತೂಹಲ ಹೆಚ್ಚಾಗತೊಡಗಿದೆ. ಈ ಸೀಸನ್ ನಲ್ಲಿ ಸೆಲೆಬ್ರಿಟಿಗಳ ಜೊತೆಗೆ ಜನಸಾಮಾನ್ಯರಿಗೂ ಅವಕಾಶ ನೀಡಲಿರುವುದರಿಂದ ಯಾರೆಲ್ಲಾ ಮನೆಯೊಳಗೆ ಎಂಟ್ರಿ ಪಡೆಯಲಿದ್ದಾರೆ ಎಂಬುದು ಕುತೂಹಲ ಹೆಚ್ಚಾಗಲು ಕಾರಣವಾಗಿದೆ.

ಮೊದಲ ಸೀಸನ್ ನಲ್ಲಿ ವಿಜಯ್ ರಾಘವೇಂದ್ರ, 2 ನೇ ಸೀಸನ್ ನಲ್ಲಿ ಅಕುಲ್ ಬಾಲಾಜಿ, 3 ನೇ ಸೀಸನ್ ನಲ್ಲಿ ಶ್ರುತಿ, 4 ನೇ ಸೀಸನ್ ನಲ್ಲಿ ಪ್ರಥಮ್ ವಿಜೇತರಾಗಿದ್ದರು.

ಜನಪ್ರಿಯ ಶೋ ಆಗಿರುವ ‘ಬಿಗ್ ಬಾಸ್’ ಅನೇಕ ಭಾಷೆಗಳಲ್ಲಿ ಮೂಡಿ ಬರುತ್ತಿದೆ. ವಿವಾದಗಳಿಂದಲೂ ಹೆಚ್ಚಾಗಿ ಗಮನ ಸೆಳೆದಿದೆ. ಹಿಂದಿ, ತಮಿಳಿನಲ್ಲಿ ವಿವಾದವೇ ಪ್ರಧಾನ ಎನ್ನುವಂತಾಗಿತ್ತು. ಕನ್ನಡದಲ್ಲಿಯೂ ಇಂತಹ ಬೆಳವಣಿಗೆಗಳು ನಡೆದಿವೆ. ವಿಭಿನ್ನ ಮ್ಯಾನರಿಸಂ ಮೂಲಕ ವೀಕ್ಷಕರನ್ನು ಸೆಳೆದಿದ್ದ ವೆಂಕಟ್ ಕೋಪದಿಂದ ಸಿಂಗರ್ ರವಿ ಅವರ ಮೇಲೆ ಹಲ್ಲೆ ಮಾಡಿದ್ದರು. 4 ನೇ ಸೀಸನ್ ನಲ್ಲಿ ವಿಜೇತರಾದ ಪ್ರಥಮ್ ಅವರ ಮೇಲೆಯೂ ಅತಿಥಿಯಾಗಿ ಮನೆಯೊಳಗೆ ಹೋಗಿದ್ದ ವೆಂಕಟ್ ಹಲ್ಲೆ ಮಾಡಿದ್ದರು. ಗಾಸಿಪ್ ಗಳಿಗಂತೂ ಬರವೇ ಇಲ್ಲ.

ಮೊದಲ ಸೀಸನ್ ನಲ್ಲಿ ಅರುಣ್ ಸಾಗರ್, 2 ನೇ ಸೀಸನ್ ನಲ್ಲಿ ಸೃಜನ್ ಲೋಕೇಶ್ ವಿಜೇತರಾಗಲಿದ್ದಾರೆ ಎನ್ನಲಾಗಿತ್ತಾದರೂ, ಫಲಿತಾಂಶ ಬೇರೆಯೇ ಆಗಿತ್ತು. ಇಂತಹ ಹಲವಾರು ಕುತೂಹಲ, ಗಾಸಿಪ್, ವಿವಾದಗಳಿಂದ ‘ಬಿಗ್ ಬಾಸ್’ ವೀಕ್ಷಕರನ್ನು ಹೆಚ್ಚಾಗಿ ಸೆಳೆದಿದೆ. ಅಕ್ಟೋಬರ್ 15 ರಿಂದ ಶೋ ಕಣ್ತುಂಬಿಕೊಳ್ಳಲು ವೀಕ್ಷಕರು ಕಾತರರಾಗಿದ್ದಾರೆ. ಇದರೊಂದಿಗೆ ಯಾರೆಲ್ಲಾ ಸ್ಪರ್ಧಿಗಳಾಗ್ತಾರೆ ಎಂಬ ಕುತೂಹಲ ಹೆಚ್ಚಾಗತೊಡಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...