alex Certify
ಕನ್ನಡ ದುನಿಯಾ       Mobile App
       

Kannada Duniya

‘ಕಿಚ್ಚನ್ ಟೈಮ್’ಗೆ ಬಂದ ಚಂದನ್, ಮಯೂರಿ

‘ಬಿಗ್ ಬಾಸ್’ ಸೀಸನ್ 5 ನಲ್ಲಿ ಪ್ರತಿ ಭಾನುವಾರ ಕಿಚ್ಚ ಸುದೀಪ್ ನಡೆಸಿಕೊಡುವ ‘ಕಿಚನ್ ಟೈಮ್’ ವಿಶೇಷವಾಗಿದೆ. ಈ ವಾರ ನಟಿ ಮಯೂರಿ, ನಟ ಹಾಗೂ ‘ಬಿಗ್ ಬಾಸ್’ ಸೀಸನ್ 4 ರ ಸ್ಪರ್ಧಿ ಚಂದನ್ ಅವರು ಆಗಮಿಸಿದ್ದರು.

ಮಯೂರಿ ಹುಬ್ಬಳ್ಳಿ ವಿಶೇಷವಾದ ಗಿರ್ಮಿಟ್ ಮಂಡಕ್ಕಿ ಸಿದ್ಧಪಡಿಸಿದ್ದಾರೆ. ಇದಕ್ಕಿಂತ ಮೊದಲು ಮಯೂರಿ ವೆಜ್ ಅಡುಗೆ ಮಾಡಿದರೆ, ಚಂದನ್ ಅವರು ನಾನ್ ವೆಜ್ ಅಡುಗೆ ಸಿದ್ಧಪಡಿಸಿದ್ದಾರೆ. ಇಬ್ಬರೂ ಸುದೀಪ್ ಅವರು ಹೇಳಿದಂತೆ ಅಡುಗೆ ಮಾಡಿ, ಅದರ ರುಚಿ ಸವಿದ ಬಳಿಕ ಸಖತ್ ಆಗಿದೆ ಎಂದು ಹೇಳಿದ್ದಾರೆ. ಇನ್ನು ತಮಗೆ ಕೇಳಲಾದ ಪ್ರಶ್ನೆಗಳಿಗೆ ಇಬ್ಬರೂ ಅತಿಥಿಗಳು ಉತ್ತರಿಸಿದ್ದಾರೆ.

‘ಸೂಪರ್ ಸಂಡೇ ವಿತ್ ಸುದೀಪ’ ವೇದಿಕೆಯಲ್ಲಿ ಮನೆಯಿಂದ ಹೊರಬಂದ ದಯಾಳ್ ಮನೆಯೊಳಗಿನ ಅನುಭವ ಹಂಚಿಕೊಂಡಿದ್ದಾರೆ. ಮನೆಯಿಂದ ಹೊರಗೆ ಬರುವ ನಿರೀಕ್ಷೆ ಇರಲಿಲ್ಲ. ನಾನು ಮನೆಯಲ್ಲಿ ನಾನಾಗಿಯೇ ಇದ್ದೆ. ಗೇಮ್ ಆಡಲಿಲ್ಲ ಎಂದು ಹೇಳಿದ್ದಾರೆ.

ಸುದೀಪ್ ಮನೆಯಲ್ಲಿ ದಯಾಳ್ ತೋರಿದ ವರ್ತನೆ ಕುರಿತಾಗಿ ತಿಳಿಹೇಳಿದ್ದು, ಟಾಸ್ಕ್ ನಲ್ಲಿ ಕ್ಯಾಪ್ಟನ್ ಆಗಿದ್ದ ಸಂದರ್ಭದಲ್ಲಿ ರಿಯಾಜ್ ತನಗೆ ಹೇಳಬೇಕಿತ್ತು ಎಂದು ಬಯಸುವ ನೀವು ಹಾಲಿನ ವಿಚಾರದಲ್ಲಿ ಕ್ಯಾಪ್ಟನ್ ಗೆ ಏಕೆ ಹೇಳಲಿಲ್ಲ ಎಂದು ಪ್ರಶ್ನಿಸಿದ್ದು, ಇದಕ್ಕೆ ದಯಾಳ್ ಸಮಜಾಯಿಷಿ ನೀಡಿ, ಬೇರೆಯವರ ಭಾವನೆಗೆ ಪ್ರಾಮುಖ್ಯತೆ ಕೊಡಬೇಕಿತ್ತು ಎಂದಿದ್ದಾರೆ.

ಮನೆಯೊಳಗೆ ಸದಸ್ಯರ ವರ್ತನೆ ಅವರೊಂದಿಗಿನ ಒಡನಾಟ ಎಲ್ಲದರ ಬಗ್ಗೆಯೂ ಹೇಳಿಕೊಂಡ ದಯಾಳ್, ಅಪರಿಚಿತರೊಂದಿಗೆ ಕಳೆದ ಕ್ಷಣಗಳು ವಿಭಿನ್ನ ಅನುಭವ ನೀಡಿವೆ ಎಂದು ಹೇಳಿಕೊಂಡಿದ್ದಾರೆ. ದಯಾಳ್ ಪ್ರಕಾರ ಫೈನಲ್ ಗೆ ಅನುಪಮಾ ಮತ್ತು ಜೆ.ಕೆ. ಬರಬಹುದಾಗಿದೆ.

ನಂತರದಲ್ಲಿ ‘ಬಿಗ್ ಬಾಸ್’ ವೇದಿಕೆಯಲ್ಲಿ ‘ದಯವಿಟ್ಟು ಗಮನಿಸಿ’ ಚಿತ್ರ ತಂಡದ ವಸಿಷ್ಠ, ಭಾವನಾ, ಸಂಯುಕ್ತ ಬೆಳವಾಡಿ ಆಗಮಿಸಿದ್ದರು. ಅವರೊಂದಿಗೆ ಸುದೀಪ್ ಚಿತ್ರದ ಕುರಿತಾಗಿ ಮಾತನಾಡಿದ್ದಾರೆ. ಇನ್ನು ವಸಿಷ್ಠ ಹಾಡುವ ಮೂಲಕ ಗಮನ ಸೆಳೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...