alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಯ್ತು ‘ಬಿಗ್ ಬಾಸ್’ ಸ್ಪರ್ಧಿಗಳ ರಹಸ್ಯ

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 5 ಅಕ್ಟೋಬರ್ 15 ರಂದು ಆರಂಭವಾಗಲಿದೆ. ಭಾನುವಾರ ಸಂಜೆ 5 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ಸೂಪರ್ ಚಾನೆಲ್ ನಲ್ಲಿ ಪ್ರತಿ ದಿನ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

4 ಸೀಸನ್ ಗಳು ವೀಕ್ಷಕರನ್ನು ಸೆಳೆದಿದ್ದ ‘ಬಿಗ್ ಬಾಸ್’ 5 ನೇ ಸೀಸನ್ ಕೂಡ ಭಾರೀ ಕುತೂಹಲ ಮೂಡಿಸಿದೆ. ಈ ಬಾರಿ ‘ಬಿಗ್ ಬಾಸ್’ ಮನೆಯೊಳಗೆ ಜನ ಸಾಮಾನ್ಯರಿಗೂ ಪ್ರವೇಶ ನೀಡಲಾಗ್ತಿದೆ.

40,000 ಕ್ಕೂ ಅಧಿಕ ಮಂದಿ ವಿಡಿಯೊ ಕಳುಹಿಸಿದ್ದು, ಆದರಲ್ಲಿ ಆಯ್ದ 6 ಮಂದಿಯನ್ನು ಆಯ್ಕೆ ಮಾಡಲಾಗಿದೆ. 6 ಮಂದಿ ಜನಸಾಮಾನ್ಯರು ಸೇರಿ 17 ಮಂದಿ ಸ್ಪರ್ಧಿಗಳು ‘ಬಿಗ್ ಬಾಸ್’ ಮನೆಯೊಳಗೆ ಪ್ರವೇಶಿಸಲಿದ್ದಾರೆ. ಅವರಲ್ಲಿ 9 ಮಂದಿ ಪುರುಷರು, 8 ಮಂದಿ ಮಹಿಳೆಯರಾಗಿದ್ದಾರೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಭಾನುವಾರ ಸಂಜೆ, ‘ಬಿಗ್ ಬಾಸ್’ ಮನೆಯನ್ನು ಪರಿಚಯಿಸಿ, ಸ್ಪರ್ಧಿಗಳನ್ನು ಮನೆಯೊಳಗೆ ಕಳುಹಿಸಲಿದ್ದಾರೆ.

ಹಲವರ ಹೆಸರುಗಳು ಕೇಳಿ ಬರುತ್ತಿವೆಯಾದರೂ, ಯಾರು ‘ಬಿಗ್ ಬಾಸ್’ ಮನೆಯನ್ನು ಪ್ರವೇಶಿಸಲಿದ್ದಾರೆ ಎಂಬುದನ್ನು ತಿಳಿಯಲು ಭಾನುವಾರದವರೆಗೂ ಕಾಯಬೇಕಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...