alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ನಿಂದ ಹೊರ ಬಂದ ಶೀತಲ್ ಶೆಟ್ಟಿ

20161231_223159

‘ಬಿಗ್ ಬಾಸ್’ನಲ್ಲಿ ನೇರ ನಡೆ ನುಡಿಗಳಿಂದ ಗಮನ ಸೆಳೆದಿದ್ದ, ಶೀತಲ್ ಶೆಟ್ಟಿ 85 ನೇ ದಿನಕ್ಕೆ ಹೊರ ಬಂದಿದ್ದಾರೆ.

ಈ ಮೊದಲೇ ಅವರು ಮನೆಯಿಂದ ಹೊರ ಬಂದಿದ್ದು, 1 ವಾರ ಸೀಕ್ರೆಟ್ ರೂಂ ನಲ್ಲಿದ್ದು, ಮತ್ತೆ ಮನೆಯೊಳಗೆ ಪ್ರವೇಶ ಪಡೆದಿದ್ದರು.

ಶಾಲಿನಿಯೊಂದಿಗೆ ಮನೆಯಿಂದ ಹೊರ ಬಂದಿದ್ದ ಶೀತಲ್ ವಾರದ ಬಳಿಕ, ಮನೆಯೊಳಗೆ ಪ್ರವೇಶಿಸಿದ್ದರು. 2 ನೇ ಸಲ ಮನೆಯೊಳಗೆ ಪ್ರವೇಶಿಸಿದ ಶೀತಲ್ ಸದಸ್ಯರೊಂದಿಗೆ ನೇರಾನೇರವಾಗಿಯೇ ಮಾತನಾಡುತ್ತಿದ್ದರು.

ಶನಿವಾರದ ಸಂಚಿಕೆಯಲ್ಲಿ ‘ವಾರದ ಕತೆ ಕಿಚ್ಚನ ಜೊತೆ’ ಸಖತ್ ಆಗಿತ್ತು. ಮನೆಯ ಸದಸ್ಯರೆಲ್ಲರ ಅಭಿಪ್ರಾಯ ಪಡೆದುಕೊಂಡ ಸುದೀಪ್, ವಿವಿಧ ಸಲಹೆ, ಸೂಚನೆ ನೀಡಿದ್ದಾರೆ. ಸದಸ್ಯರ ವರ್ತನೆಗಳ ಕುರಿತಾಗಿ ಕಾಮಿಡಿ ಮಾಡಿದ್ದಾರೆ.

ನಿದ್ದೆ ಮಾಡಲು ಮುಂದಾಗಿದ್ದ ಪ್ರಥಮ್ ಗೆ ಕಿಚಾಯಿಸಿದ ಸುದೀಪ್, ಶೀತಲ್ ಬಳಿ ‘ಪೋಲಿಸ್’ ಹೇಳಿಕೆ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ. ಇನ್ನು ಭುವನ್ ಕುರಿತಾಗಿ ಹೊಸ ವರ್ಷಾಚರಣೆ ಬಗ್ಗೆ ಮಾತನಾಡಿದ್ದಾರೆ. ಇದೆಲ್ಲವೂ ತಮಾಷೆಯಾಗಿತ್ತು.

ಈ ವಾರ ನಾಮಿನೇಟ್ ಆಗಿದ್ದ ಭುವನ್, ಕೀರ್ತಿ, ಮಾಳವಿಕಾ, ಮೋಹನ್, ರೇಖಾ ಸೇಫ್ ಆಗಿದ್ದಾರೆ.

ಮನೆಯಿಂದ ಹೊರ ಹೋಗುವ ಮೊದಲು ಶೀತಲ್ ಗೆ ವಿಶೇಷ ಅಧಿಕಾರ ನೀಡಿ, ಮುಂದಿನ ವಾರಕ್ಕೆ ಯಾರನ್ನು ನೇರ ನಾಮಿನೇಟ್ ಮಾಡುತ್ತೀರಿ ಎಂದು ‘ಬಿಗ್ ಬಾಸ್’ ಕೇಳಿದಾಗ, ಅವರು, ಮಾಳವಿಕಾ ಹೆಸರನ್ನು ಸೂಚಿಸಿದ್ದಾರೆ.

‘ಕಾಲರ್ ಆಫ್ ದಿ ವೀಕ್’ನಲ್ಲಿ ಮಾತನಾಡಿದ ಬೆಂಗಳೂರಿನ ಪರಮೇಶ್ವರ್ ಅವರು, ರೇಖಾ ಇಷ್ಟು ವಾರಗಳ ಕಾಲ ಚೆನ್ನಾಗಿ ಆಟವಾಡಿದ್ದೀರಿ. ಈಗ ಗುಂಪಿನಲ್ಲಿ ಸೇರಿದ್ದೀರಿ ಎಂದು ಪ್ರಶ್ನಿಸಿದ್ದು, ಇದಕ್ಕೆ ರೇಖಾ, ಹಾಗೇನೂ ಇಲ್ಲ. ಎಲ್ಲರೊಂದಿಗೂ ಬೆರೆತಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ.

ಇನ್ನು ‘ಬಿಗ್ ಬಾಸ್’ ಬೋರ್ ಆಗ್ತಿದೆ. ಸ್ಪರ್ಧಿಗಳು ಡಲ್ ಆಗಿದ್ದಾರೆ. ನಗು ಕಡಿಮೆಯಾಗಿದೆ ಎಂದು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತಾಪಿಸಿದ್ದು, ಈ ಬಗ್ಗೆ ನಿಮ್ಮ ಅಭಿಪ್ರಾಯವೇನೆಂದು ಸುದೀಪ್ ಕೇಳಿದ್ದಾರೆ.

ಮೋಹನ್ ಪ್ರತಿಕ್ರಿಯೆ ನೀಡಿ, ನಗು ಕಡಿಮೆಯಾಗಿದೆ. ಕಳೆದುಹೋಗಿಲ್ಲ. ನಾವೂ ಮನುಷ್ಯರೇ. ಎಲ್ಲಾ ಭಾವನೆಗಳಿರುತ್ತವೆ ಎಂದು ತಿಳಿಸಿದ್ದಾರೆ.

ಇದಕ್ಕೆ ಪೂರಕವಾಗಿ ಮಾತನಾಡಿದ ಸುದೀಪ್, 85 ದಿನಗಳ ಕಾಲ ಮನೆ, ಕುಟುಂಬದವರನ್ನು ಬಿಟ್ಟು ಬಂದು ಸದಸ್ಯರು ಇದ್ದಾರೆ. ಆರೋಗ್ಯ ಸರಿ ಇರಲ್ಲ. ಊಟ ಸರಿ ಇಲ್ಲ. ಟಾಸ್ಕ್ ಮಾಡದವರೆಲ್ಲಾ ಇಲ್ಲಿ ಎಲ್ಲವನ್ನೂ ಮರೆತು ಆಡುತ್ತಾರೆ. ಅವರೂ ಮನುಷ್ಯರು ಎಂದು ತಿಳಿಸಿದ್ದಾರೆ.

ನಿಮ್ಮ(ನಾಗತಿಹಳ್ಳಿ) ಬಗ್ಗೆ ಗೌರವ ಇದೆ. ನೀವು ನಮಗೆ ಮಾರ್ಗದರ್ಶನ ಮಾಡಬೇಕು. ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತಾಪಿಸಿದ ಕಾರಣಕ್ಕೆ ಹೀಗೆ ಹೇಳುತ್ತಿದ್ದೇನೆ. ನೀವೂ ಒಮ್ಮೆ ‘ಬಿಗ್ ಬಾಸ್’ಗೆ ಬನ್ನಿ ಎಂದು ಆಹ್ವಾನಿಸಿದ್ದಾರೆ ಸುದೀಪ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...