alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಯುಕ್ತಾ ಹಲ್ಲೆ ಮಾಡಿದ ವಿಚಾರಕ್ಕೆ ಸುದೀಪ್ ಹೇಳಿದ್ದೇನು…?

‘ಬಿಗ್ ಬಾಸ್’ ಮನೆಗೆ ಅತಿಥಿಯಾಗಿ ಆಗಮಿಸಿದ್ದ ಸಂಯುಕ್ತಾ ಹೆಗ್ಡೆ ಅವರು, ಸಮೀರಾಚಾರ್ಯ ಅವರ ಮೇಲೆ ಹಲ್ಲೆ ನಡೆಸಿದ ವಿಚಾರವನ್ನು ಶನಿವಾರದ ಸಂಚಿಕೆಯಲ್ಲಿ ಸುದೀಪ್ ಪ್ರಸ್ತಾಪಿಸಿದ್ದಾರೆ.

‘ವಾರದ ಕತೆ ಕಿಚ್ಚನ ಜೊತೆ’ ವೇದಿಕೆಯಲ್ಲಿ ಕಾಣಿಸಿಕೊಂಡ ಸುದೀಪ್, ಮನೆಯಲ್ಲಿ ಕಪ್ಪು ಚುಕ್ಕೆಯಂತೆ ನಡೆಯಬಾರದ ಘಟನೆ ನಡೆದೋಯ್ತು. ಸಂಯುಕ್ತಾ ಮಾಡಿದ್ದು ಸರಿಯಲ್ಲ. ಅವರು ತಪ್ಪು ಮಾಡಿದ ಕಾರಣಕ್ಕೆ ‘ಬಿಗ್ ಬಾಸ್’ ಮನೆಯಿಂದ ಹೊರಗೆ ಕಳಿಸಿದ್ದಾರೆ. ಆದರೆ, ಸ್ಥಳದಲ್ಲೇ ಇದ್ದರೂ, ಸದಸ್ಯರ್ಯಾರೂ ಪ್ರತಿಕ್ರಿಯೆ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಯುಕ್ತಾ ಅವರು ಕೈ ಮಾಡಿದಾಗ, ಚಂದನ್ ಮತ್ತು ದಿವಾಕರ್ ಹೊರತಾಗಿ ಯಾರೂ ಪ್ರತಿಕ್ರಿಯೆ ನೀಡಲಿಲ್ಲ. ಸಂಯುಕ್ತಾ ಕೈ ಮಾಡಿದ್ದು ತಪ್ಪು ಎಂದು ಏಕೆ ಹೇಳಲಿಲ್ಲ ಎಂದು ಸುದೀಪ್ ಹೇಳಿದ್ದು, ಇದೇ ವಿಚಾರವಾಗಿ ಜಯಶ್ರೀನಿವಾಸನ್ ಹಾಗೂ ಕಾರ್ತಿಕ್ ಅವರನ್ನು ಪ್ರಶ್ನಿಸಿದ್ದಾರೆ.

ಸಮೀರ್ ಅವರೇ ಜಾಸ್ತಿ ಮಾತನಾಡುತ್ತಿದ್ದ ಕಾರಣ ನಮಗೆ ಮಾತನಾಡಲು ಅವಕಾಶ ಸಿಗಲಿಲ್ಲ ಎಂದು ಜಯಶ್ರೀನಿವಾಸನ್ ಹೇಳಿದ್ದು, ಹೊಡೆದಿದ್ದರಿಂದ ಸಂಯುಕ್ತಾ, ಕೂಗಾಡಿದ್ದರಿಂದ ಸಮೀರ್ ಅವರ ವ್ಯಕ್ತಿತ್ವ ಗೊತ್ತಾಗಿದೆ. ನೀವು ಸುಮ್ಮನಿದ್ದ ಕಾರಣಕ್ಕೆ ನಿಮ್ಮ ವ್ಯಕ್ತಿತ್ವವೂ ಹೊರ ಬಂದಿದೆ ಎಂದು ಸುದೀಪ್ ಹೇಳಿದ್ದಾರೆ.

ಘಟನೆಯ ವೇಳೆ ಕಾರ್ತಿಕ್ ಸ್ಥಳದಲ್ಲಿದ್ರೂ ಪ್ರತಿಕ್ರಿಯೆ ನೀಡದ ಬಗ್ಗೆ ಸುದೀಪ್ ಪ್ರಶ್ನಿಸಿದ್ದು, ಇದಕ್ಕೆ ಕಾರ್ತಿಕ್ ಸಮಜಾಯಿಷಿ ನೀಡಿ, ಹಿಂದೆ ಮನೆಯಲ್ಲಿ ಹಲವು ಸಲ ಇಂತಹ ಸಂದರ್ಭಗಳು ನಡೆದಾಗ, ಯಾರೂ ಕೇಳದ ಕಾರಣ, ನಾನು ಮಾತನಾಡಲಿಲ್ಲ ಎಂದು ಹೇಳಿದ್ದಾರೆ.

ಸದಸ್ಯರೊಂದಿಗೆ ಮಾತನಾಡಿದ ಸುದೀಪ್, ಕೆಲವನ್ನು ಬಿಟ್ಟುಬಿಡಿ, ಕೈ ಮಾಡುವುದರಿಂದ ವಾತಾವರಣ ಹಾಳಾಗುತ್ತದೆ. ಕೋಪ ಕಂಟ್ರೋಲ್ ನಲ್ಲಿರಲಿ. ಹಠಕ್ಕೆ ಬಿದ್ರೆ ಮನೆಯಿಂದ ಹೊರಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...