alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಸ್ಪರ್ಧಿಗಳಿಗೆ ಬಿಗ್ ಸರ್ಪ್ರೈಜ್ ಕೊಟ್ಟ ‘ಹೆಬ್ಬುಲಿ’

‘ಬಿಗ್ ಬಾಸ್’ ಮನೆಯೊಳಗೆ ವಿಶೇಷ ಅತಿಥಿ ಆಗಮಿಸಲಿದ್ದಾರೆ ಎಂದು ಸದಸ್ಯರಿಗೆ ಮೊದಲೇ ತಿಳಿಸಲಾಗಿತ್ತಾದರೂ, ಬರುವುದು ಸುದೀಪ್ ಅವರೇ ಎನ್ನುವುದು ಸದಸ್ಯರಿಗೆ ಗೊತ್ತಿರಲಿಲ್ಲ. ಮನೆಯೊಳಗೆ ‘ರಾಜು ಕನ್ನಡ ಮೀಡಿಯಂ’ ಚಿತ್ರದ ಗುರುನಂದನ್, ಆಶಿಕಾ ಅವರು ಆಗಮಿಸಿದ್ದರು.

ಅವರು ಹೋದ ಬಳಿಕ ಸುದೀಪ್ ಅವರು ಆಗಮಿಸಿದ್ದರು. ‘ಸೂಪರ್ ಸಂಡೇ ವಿತ್ ಸುದೀಪ’ ಸಂಚಿಕೆ ಸಖತ್ತಾಗಿತ್ತು. ಮೊದಲಿಗೆ ಮನೆಯೊಳಗೆ ಸದಸ್ಯರ ನಡುವೆ ವಿವಿಧ ವಿಷಯಗಳ ಕುರಿತಾಗಿ ಚರ್ಚೆ ನಡೆದಿದೆ.

ನಂತರದಲ್ಲಿ ‘ಬಿಗ್ ಬಾಸ್’ ವೇದಿಕೆಯಲ್ಲಿ ಮನೆಯಿಂದ ಹೊರಗೆ ಬಂದಿರುವ ರಿಯಾಜ್ ಕಾಣಿಸಿಕೊಂಡಿದ್ದಾರೆ. ರಿಯಾಜ್ ಅವರಿಗೆ ಸುದೀಪ್ ಮನೆಯೊಳಗಿನ ಅನುಭವದ ಬಗ್ಗೆ ಕೇಳಿದ್ದು, ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಮನೆಯೊಳಗಿನ ತಮ್ಮ ಖುಷಿ, ಸಿಟ್ಟು, ಜಗಳ, ತಮಾಷೆ, ರೂಲ್ಸ್, ಟಾಸ್ಕ್ ಚಟುವಟಿಕೆಗಳನ್ನು ನೋಡಿದ ರಿಯಾಜ್ ಭಾವುಕರಾಗಿದ್ದಾರೆ. ಒಂದು ಹಂತದಲ್ಲಿ ಕಣ್ಣೀರಿಟ್ಟಿದ್ದಾರೆ. ತಮ್ಮ ಮುಂದಿನ ಜರ್ನಿಯ ಕುರಿತಾಗಿ ಮಾತನಾಡಿದ್ದಾರೆ.

ರಿಯಾಜ್ ಅವರ ಪ್ರಕಾರ ಮುಂದಿನವಾರ ದಿವಾಕರ್ ಇಲ್ಲವೇ ಅನುಪಮಾ ಮನೆಯಿಂದ ಹೊರಗೆ ಬರಬಹುದಾಗಿದೆ. ಫಿನಾಲೆಗೆ ಚಂದನ್, ಕಾರ್ತಿಕ್, ಸಮೀರಾಚಾರ್ಯ ಬರ್ತಾರೆ. ಸಮೀರ್ ಗೆಲ್ತಾರೆ ಎಂದು ರಿಯಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಬಿಗ್ ಬಾಸ್’ ವೇದಿಕೆಯಲ್ಲಿ ‘ರಾಜು ಕನ್ನಡ ಮೀಡಿಯಂ’ ಚಿತ್ರದ ಟ್ರೇಲರ್ ಪ್ರದರ್ಶಿಸಲಾಗಿದೆ. ಚಿತ್ರತಂಡದವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಸುದೀಪ್ ಅವರೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದಕ್ಕಾಗಿ ಚಿತ್ರತಂಡದವರು ಕೃತಜ್ಞತೆ ಸಲ್ಲಿಸಿದ್ದಾರೆ.

ಚಿತ್ರದ ನಟ ಗುರುನಂದನ್ ಮತ್ತು ನಟಿ ಆಶಿಕಾ ರಂಗನಾಥ್ ಅವರು ‘ಬಿಗ್ ಬಾಸ್’ ಮನೆಯೊಳಗೆ ಹೋಗಿದ್ದಾರೆ. ಅತಿಥಿಗಳು ಮನೆಯೊಳಗೆ ಬರಲಿದ್ದಾರೆ ಎಂದು ‘ಬಿಗ್ ಬಾಸ್’ ತಿಳಿಸಿದ್ದರು. ಅತಿಥಿಗಳೊಂದಿಗೆ ಕೆಲ ಸಮಯ ಕಳೆದ ಸದಸ್ಯರು ಅವರೊಂದಿಗೆ ಕನ್ನಡದಲ್ಲಿಯೇ ಮಾತನಾಡಿದ್ದು ವಿಶೇಷವಾಗಿತ್ತು.

ಅವರಿಬ್ಬರನ್ನು ಬೀಳ್ಕೊಟ್ಟ ಬಳಿಕ ಮನೆಯೊಳಗೆ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಸದಸ್ಯರಿಗೆ ಪಾಸ್ ಸೂಚನೆ ನೀಡಿದ್ದರಿಂದ ಎಲ್ಲರೂ ಸುಮ್ಮನೆ ಇದ್ದರಾದರೂ, ‘ಹೆಬ್ಬುಲಿ’ ಚಿತ್ರದ ಹಾಡು ಕೇಳಿ ಬಂದಿದ್ದರಿಂದ ಸದಸ್ಯರಿಗೆ ಮನೆಯೊಳಗೆ ಸುದೀಪ್ ಬಂದಿರಬಹುದೆಂದು ಗೊತ್ತಾಗಿ ಪ್ಲೇ ಸೂಚನೆ ಸಿಗುತ್ತಿದ್ದಂತೆ ಮನೆಯೊಳಗೆ ಓಡಿದ್ದಾರೆ. ಅಲ್ಲಿ ಸುದೀಪ್ ಅವರನ್ನು ಕಂಡ ಸದಸ್ಯರ ಖುಷಿಗೆ ಪಾರವೇ ಇರಲಿಲ್ಲ. ಮನೆಯೊಳಗೆ ಸುದೀಪ್ ಎಲ್ಲರೊಂದಿಗೆ ಮಾತನಾಡಿ ತಮಾಷೆ ಮಾಡಿದ್ದಾರೆ. ಎಲ್ಲರ ವರ್ತನೆ ಕುರಿತಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಮೀರಾಚಾರ್ಯ ಅವರಿಗೆ ಕಚಗುಳಿ ಇಟ್ಟು ಪಾಸ್ ಆಗಿದ್ದಾಗಲೂ ನಗುವಂತೆ ಮಾಡಿದ್ದಾರೆ. ಸುದೀಪ್ ಅವರೊಂದಿಗೆ ಮನೆಯ ಸದಸ್ಯರೆಲ್ಲ ಮಾತನಾಡಿ ಸಂಭ್ರಮಿಸಿದ್ದಾರೆ. ಅವರೊಂದಿಗೆ ಊಟ ಮಾಡಿದ್ದಾರೆ. ಸುದೀಪ್ ತಂದಿದ್ದ ವಿಶೇಷ ತಿನಿಸಿನ ರುಚಿಯನ್ನು ಸದಸ್ಯರು ಸವಿದಿದ್ದಾರೆ. ಎಲ್ಲರೊಂದಿಗೆ ಮಾತನಾಡಿದ ಸುದೀಪ್ ಪಾಸ್ ಸೂಚನೆ ಸಿಗುತ್ತಲೇ ಅಲ್ಲಿಂದ ಹೊರಟಿದ್ದಾರೆ. ಅವರು ಹೋಗುವುದನ್ನು ಕಂಡ ಸದಸ್ಯರು ಓಡಿದರಾದರೂ, ಅಷ್ಟರಲ್ಲಿ ಡೋರ್ ಬಂದ್ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...