alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ನಿಂದ ಹೊರ ಬಂದ 2 ನೇ ಸ್ಪರ್ಧಿ ಮೇಘಾ

‘ಬಿಗ್ ಬಾಸ್’ನಿಂದ 2 ನೇ ವಾರಕ್ಕೆ ಕೊಡಗಿನ ಕುವರಿ ಮೇಘಾ ಹೊರಬಂದಿದ್ದಾರೆ. ಈ ವಾರ ಕಾಮನ್ ಮ್ಯಾನ್ ಗಳು ಮತ್ತು ಸೆಲೆಬ್ರಿಟಿಗಳ ನಡುವೆ ಅಂತರ ಹೆಚ್ಚಾಗಿತ್ತು. ಮೊದಲ ವಾರ ತಣ್ಣಗಿದ್ದ ಮನೆಯಲ್ಲಿ 2 ನೇ ವಾರಕ್ಕೆ ಕಾವೇರಿತ್ತು.

‘ವಾರದ ಕತೆ ಕಿಚ್ಚನ ಜೊತೆ’ಯಲ್ಲಿ ಇದನ್ನು ಆರಂಭದಲ್ಲಿಯೇ ಪ್ರಸ್ತಾಪಿಸಿದ ಸುದೀಪ್, 2 ನೇ ವಾರ ಮನೆಯಲ್ಲಿ ಕಾವೇರಿದೆ ಎಂದು ಹೇಳಿದ್ದಾರೆ.

ಮನೆಯ ಸದಸ್ಯರೆಲ್ಲರೊಂದಿಗೆ ವಾರದ ಬೆಳವಣಿಗೆಗಳ ಕುರಿತಾಗಿ ಪಂಚಾಯಿತಿ ನಡೆಸಿದ ಸುದೀಪ್, ಸದಸ್ಯರ ತಪ್ಪು ಒಪ್ಪುಗಳನ್ನು ತಿಳಿಹೇಳಿದ್ದಾರೆ. ಕೆಲವು ಸದಸ್ಯರು, ತಾವು ಹೀಗೆ ಮಾಡಬಾರದಾಗಿತ್ತು, ಹೇಳಬಾರದಾಗಿತ್ತು ಎಂದು ಸಾರಿ ಕೇಳಿದ್ದಾರೆ. ಮತ್ತೆ ಕೆಲವರು ಸಮರ್ಥಿಸಿಕೊಂಡಿದ್ದಾರೆ.

ಮನೆಯ ನಿಯಮಗಳನ್ನು ಮುರಿದ ಕಾರಣಕ್ಕೆ ಮತ್ತು ನಿಯಮಗಳನ್ನು ಸರಿಯಾಗಿ ತಿಳಿದುಕೊಳ್ಳದೇ ತಪ್ಪೆಸಗಿದ ಕಾರಣಕ್ಕೆ ಸುದೀಪ್ ಕೆಲವರಿಗೆ ಮೃದು ಮಾತಿನಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾರೆ.

ದಯಾಳ್ ಅವರ ವರ್ತನೆ ಕುರಿತಾಗಿ ಅಸಮಾಧಾನ ಹೊರ ಹಾಕಿದ ರಿಯಾಜ್, ಅವರು ಸಾರಿ ಕೇಳಲಿ ಎಂದು ಬಯಸಿದ್ದಾರೆ. ಇನ್ನು ದಯಾಳ್ ಅವರ ತಪ್ಪುಗಳ ಬಗ್ಗೆ ಸುದೀಪ್ ಮನವರಿಕೆ ಮಾಡಿಕೊಟ್ಟಿದ್ದಾರೆ.

ಸೆಲೆಬ್ರಿಟಿಗಳು ಮತ್ತು ಕಾಮನ್ ಮ್ಯಾನ್ ಗಳ ನಡುವೆ ಅಂತರ ಹೆಚ್ಚಾದಾಗ, ಸಿಹಿಕಹಿ ಚಂದ್ರು ಸರಿಪಡಿಸಬಹುದಾಗಿತ್ತು ಎಂದು ಹೇಳಿದ್ದಾರೆ.

ಕ್ಯಾಪ್ಟನ್ ಆಗಿ ಶ್ರುತಿ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳದೇ ದಯಾಳ್ ಅವರ ಪ್ರಭಾವಕ್ಕೆ ಒಳಗಾಗಿದ್ದ ಬಗ್ಗೆ ಸುದೀಪ್ ಹೇಳಿದರಲ್ಲದೇ, ಸದಸ್ಯರ ಸರಿ -ತಪ್ಪುಗಳೆಲ್ಲವನ್ನು ತಿಳಿಸಿದ್ದಾರೆ. ಚಂದನ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ನಾಮಿನೇಟ್ ಆಗಿದ್ದ ಸದಸ್ಯರಲ್ಲಿ ಸಮೀರಾಚಾರ್ಯ, ರಿಯಾಜ್, ದಿವಾಕರ್, ಜಗನ್, ಕೃಷಿ, ಆಶಿತಾ, ದಯಾಳ್ ಅವರು ಸೇಫ್ ಆಗಿದ್ದಾರೆ.

ಮೊದಲ ವಾರ ಸುಮಾ ಅವರು ಹೊರ ಬಂದರೆ, 2 ನೇ ವಾರ ಮೇಘಾ ಹೊರಬಂದಿದ್ದಾರೆ. ಹೊರ ಬರುವ ಮೊದಲು ಅವರಿಗೆ ನೀಡಲಾದ ಅಧಿಕಾರದಂತೆ ದಿವಾಕರ್ ಅವರಿಗೆ ಸೂಪರ್ ಅಧಿಕಾರ ನೀಡಿದ್ದಾರೆ. ಇದನ್ನು ನಾಮಿನೇಷನ್ ಪ್ರಕ್ರಿಯೆಯಲ್ಲಿ ದಿವಾಕರ್ ಬಳಸಬಹುದಾಗಿದೆ. ಇಬ್ಬರು ಕಾಮನ್ ಮ್ಯಾನ್ ಗಳು ‘ಬಿಗ್ ಬಾಸ್’ನಿಂದ ಹೊರ ಬಂದಂತಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...