alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಸದಸ್ಯರಿಗೆ ಬಿಗ್ ಶಾಕ್ ಕೊಟ್ಟ ಸುದೀಪ್

‘ಬಿಗ್ ಬಾಸ್’ ನಲ್ಲಿ ಭಾನುವಾರದ ಸಂಚಿಕೆ ವಿಶೇಷವಾಗಿತ್ತು. ‘ಸೂಪರ್ ಸಂಡೇ ವಿತ್ ಸುದೀಪ’ದಲ್ಲಿ ಮನೆಯೊಳಗೆ ಸುದೀಪ್ ಎಂಟ್ರಿ ಕೊಟ್ಟರೂ ಸದಸ್ಯರಿಗೆ ಗೊತ್ತೇ ಆಗಲಿಲ್ಲ. ಭಾನುವಾರದ ‘ಕಿಚ್ಚನ್ ಟೈಮ್ ಸ್ಪೆಷಲ್’ ಆಗಿ ಮನೆಯೊಳಗೇ ಅಡುಗೆ ಮಾಡಿದ್ದಾರೆ ಸುದೀಪ್.

ಸುದೀಪ್, ‘ಪ್ರೇಮಬರಹ’ ನಟ ಚಂದನ್, ಕ್ರಿಕೆಟಿಗರಾದ ಕಾರಿಯಪ್ಪ, ರಿತೇಶ್ ಭಟ್ಕಳ್ ಅವರು ಮನೆಯೊಳಗೆ ಅಡುಗೆಯನ್ನು ಮಾಡಿದ್ದಾರೆ. ವಿವಿಧ ತಿನಿಸುಗಳನ್ನು ಸದಸ್ಯರಿಗೆ ಮಾಡಿಕೊಟ್ಟಿದ್ದಾರೆ. ಇದೇ ವೇಳೆ ಸದಸ್ಯರು ವಿವಿಧ ಪ್ರದರ್ಶನ ನೀಡಿ ರಂಜಿಸಿದ್ದಾರೆ.

ಮೊದಲಿಗೆ ಮನೆಯೊಳಗೆ ವಿವಿಧ ವಿಷಯಗಳ ಕುರಿತಾಗಿ ಚರ್ಚೆ ನಡೆದಿದೆ. ನಂತರದಲ್ಲಿ ಮನೆಯಿಂದ 2 ನೇ ಬಾರಿಗೆ ಹೊರಬಿದ್ದಿರುವ ಕೃಷಿ ಅವರೊಂದಿಗೆ ಸುದೀಪ್ ಮಾತನಾಡಿದ್ದಾರೆ. ಕೃಷಿ ಮನೆಯೊಳಗೆ 2 ನೇ ಸಲ ಹೋಗಿದ್ದು, ಹೊರಗೆ ಬಂದಿದ್ದು, ಅಲ್ಲದೇ, ಮನೆಯೊಳಗಿನ ಸದಸ್ಯರ ಕುರಿತಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮನೆಯಿಂದ ಹೊರಗೆ ಬಂದಿದ್ದರ ಕುರಿತಾಗಿ ಮಾತನಾಡಿ, ನನ್ನನ್ನು ಜನ ಸ್ವೀಕರಿಸಿಲ್ಲ ಅನಿಸ್ತಿದೆ ಎಂದು ಹೇಳಿದ್ದು, ಮನೆಯೊಳಗೆ ಸಮೀರಾಚಾರ್ಯ ತಮ್ಮ ತಪ್ಪನ್ನು ಒಪ್ಪಿಕೊಳ್ಳಲ್ಲ. ಅದನ್ನು ಅವರ ಬಳಿಯೇ ಹೇಳಿದ್ದೇನೆ ಎಂದು ಕೃಷಿ ತಿಳಿಸಿದ್ದಾರೆ.

ಇನ್ನು ಮುಂದಿನ ಜರ್ನಿಯ ಕುರಿತಾಗಿ ಮಾತನಾಡಿದ್ದಾರೆ. ತಮ್ಮ ಪ್ರಕಾರ ಚಂದನ್, ಶ್ರುತಿ, ದಿವಾಕರ್, ಅನುಪಮಾ, ಕಾರ್ತಿಕ್ ಫಿನಾಲೆಗೆ ಬರಬಹುದೆಂದು ತಿಳಿಸಿದ್ದಾರೆ. ನಾನೇಕೆ ಹೊರಗೆ ಬಂದೆ ಎಂಬುದೇ ಗೊತ್ತಾಗಲಿಲ್ಲ ಎಂದು ಹೇಳಿದ್ದಾರೆ. ಮನೆಯೊಳಗೆ ತಾವು ಕಳೆದ ಕ್ಷಣಗಳನ್ನು ಕಂಡು ಭಾವುಕರಾಗಿದ್ದಾರೆ.

‘ಬಹುಮಾನ ತಯಾರಿದೆ’ ವಿಶೇಷ ಚಟುವಟಿಕೆಯಲ್ಲಿ ಶ್ರುತಿ, ಅನುಪಮಾ, ನಿವೇದಿತಾ ಅವರ ಹಾಡು -ಡ್ಯಾನ್ಸ್ ಗಮನ ಸೆಳೆಯುವಂತಿತ್ತು. ‘ಕಾಣದ ಕಡಲಿಗೆ..’ ಹಾಡನ್ನು ಶ್ರುತಿ ಹಾಡಿದ್ದು ವಿಶೇಷವಾಗಿತ್ತು, ಕಾರ್ತಿಕ್ ಹಾಗೂ ಚಂದನ್ ಅವರ ಹಾಡು, ದಿವಾಕರ್ ಅವರ ಕುಡುಕನ ಆಕ್ಟಿಂಗ್, ರಿಯಾಜ್ ನಿರೂಪಣೆ ಅತ್ಯುತ್ತಮವಾಗಿತ್ತು. ಇನ್ನು ಸದಸ್ಯರೆಲ್ಲಾ ಅಂತ್ಯಾಕ್ಷರಿ ಹಾಡಿ ರಂಜಿಸಿದ್ದಾರೆ.

ಸುದೀಪ್, ಚಂದನ್, ರಿತೇಶ್ ಭಟ್ಕಳ್, ಕಾರಿಯಪ್ಪ ಅವರು ಮನೆಯೊಳಗೆ ಅಡುಗೆ ಮಾಡಿ ಅಲ್ಲಿಂದ ತೆರಳಿದ್ದಾರೆ. ಮುಖ ಕಾಣಿಸಿಕೊಳ್ಳದಂತೆ ಮಾಸ್ಕ್ ಹಾಕಿಕೊಂಡಿದ್ದ ನಾಲ್ವರು ಮನೆಯೊಳಗಿನ ಸದಸ್ಯರಿಗೆ ಗೊತ್ತಾಗದಂತೆ ನಟಿಸಿದ್ದಾರೆ.

ಅವರು ಮನೆಯಿಂದ ಹೊರಗೆ ಹೋದ ಬಳಿಕ, ಅಡುಗೆ ಮಾಡಿದ್ದು ಇವರೇ ಎಂಬುದು ಗೊತ್ತಾಗುತ್ತಿದ್ದಂತೆ ಸದಸ್ಯರಿಗೆ ಅಚ್ಚರಿಯಾಗಿದೆ. ಸುದೀಪ್ ಅವರನ್ನು ಹತ್ತಿರದಲ್ಲಿದ್ರೂ ಗುರುತು ಹಿಡಿಯಲಾಗಲಿಲ್ಲ ಎಂದು ಪರಿತಪಿಸಿದ್ದಾರೆ. ಸಮೀರ್, ಚಂದನ್ ತಮಗೆ ಗೊತ್ತಾದ್ರೂ ಹೊಟ್ಟೆ ಕಾಣಿಸಿಕೊಂಡಿದ್ದರಿಂದ ಗುರುತಿಸಲಾಗಲಿಲ್ಲ ಎಂದು ಹೇಳಿದ್ದಾರೆ. ಮನೆಯೊಳಗೆ ಬಂದ್ರೂ ಸುದೀಪ್ ಅವರನ್ನು ಗುರುತಿಸದ ಕಾರಣಕ್ಕೆ ಮನೆಯೊಳಗಿದ್ದ ರಿಯಾಜ್, ಕಾರ್ತಿಕ್, ಅನುಪಮಾ, ಶ್ರುತಿ, ನಿವೇದಿತಾ, ದಿವಾಕರ್, ಚಂದನ್, ಸಮೀರ್ ಬೇಸರಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...