alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ಗೆ ಕ್ಷಣಗಣನೆ: ಯಾರೆಲ್ಲಾ ಇರ್ತಾರೆ ಗೊತ್ತಾ..?

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 5 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾನುವಾರ ಸಂಜೆ 6 ಗಂಟೆಯಿಂದ ಶೋ ಆರಂಭವಾಗಲಿದ್ದು, ಈ ಬಾರಿ ಮನೆಯೊಳಗೆ ಯಾರೆಲ್ಲಾ ಪ್ರವೇಶಿಸಲಿದ್ದಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಸಹಜವಾಗಿದೆ.

ಎಂದಿನಂತೆ ಸುದೀಪ್ ಹೋಸ್ಟ್ ಮಾಡಲಿದ್ದಾರೆ. ಪ್ರತಿ ಬಾರಿ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ಸುದೀಪ್ ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ.

ಈ ಬಾರಿ ಬಿಗ್ ಬಾಸ್ ನಲ್ಲಿ ಬೇರೆ, ಬೇರೆ ಕ್ಷೇತ್ರಗಳು, ಪ್ರದೇಶಗಳು ವೃತ್ತಿಯವರು ‘ಬಿಗ್ ಬಾಸ್’ ಮನೆಯನ್ನು ಪ್ರವೇಶಿಸಲಿದ್ದಾರೆ. ಕನ್ನಡ ನಾಡಿನಿಂದ ಹೊರಗಿರುವ ಪ್ರಸಿದ್ಧ ವ್ಯಕ್ತಿಯೊಬ್ಬರು ಸ್ಪರ್ಧಿಯಾಗಿರುತ್ತಾರೆ.

6 ಮಂದಿ ಜನ ಸಾಮಾನ್ಯರಿಗೂ ಪ್ರವೇಶ ನೀಡಲಾಗಿದೆ. 8 ಮಂದಿ ಮಹಿಳೆಯರು, 9 ಪುರುಷರು ಮನೆಯನ್ನು ಪ್ರವೇಶಿಸಲಿದ್ದಾರೆ. ಯಾರೆಲ್ಲಾ ಇರ್ತಾರೆ ಎನ್ನುವುದನ್ನು ತಿಳಿಯಲು ಸಂಜೆ 6 ರಿಂದ ಕಲರ್ಸ್ ಸೂಪರ್ ಚಾನೆಲ್ ವೀಕ್ಷಿಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...