alex Certify
ಕನ್ನಡ ದುನಿಯಾ       Mobile App
       

Kannada Duniya

ಹರಿಪ್ರಿಯಾ ಪ್ರಕಾರ ‘ಬಿಗ್ ಬಾಸ್’ ವಿನ್ನರ್ ಇವರಂತೆ

‘ಬಿಗ್ ಬಾಸ್’ ಭಾನುವಾರದ ಸಂಚಿಕೆ ‘ಸೂಪರ್ ಸಂಡೇ ವಿತ್ ಸುದೀಪ’ ಸಖತ್ತಾಗಿತ್ತು. ಮೊದಲಿಗೆ ಅಡುಗೆ ಮನೆಯಲ್ಲಿ ಮೊಸರಿನ ವಿಚಾರಕ್ಕೆ ಜಗಳವಾಗಿದೆ. ಕೃಷಿ ಮೊಸರಿನ ಬಗ್ಗೆ ಹೇಳಿದ್ದು, ಸಂಯುಕ್ತಾ ಮೊಸರನ್ನು ತೆಗೆದುಕೊಂಡವರು ಯಾರು ಒಪ್ಪಿಕೊಳ್ಳಿ ಎಂದು ಒಪ್ಪಿಸಿದ್ದಾರೆ. ಚಂದನ್, ದಿವಾಕರ್, ರಿಯಾಜ್, ಜಯಶ್ರೀನಿವಾಸನ್ ನಾವು ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ. ಇಲ್ಲಿ ಮಾತಾಡಿದ್ದೆಲ್ಲಾ ವೇಸ್ಟ್. ಯಾಕೆಂದ್ರೆ ಯಾರೂ ಒಪ್ಪಿಕೊಳ್ಳಲ್ಲ ಎಂದು ಕೃಷಿ ಹೇಳಿದ್ದಾರೆ.

ಸಮೀರಾಚಾರ್ಯ ಮೊಸರು ತಿಂದಿಲ್ಲ. ನಾನು ಅವಲಕ್ಕಿ ಮೊಸರು ಸ್ವಲ್ಪ ತೆಗೆದುಕೊಂಡಿದ್ದೇನೆ ಎಂದರೆ, ಅನುಪಮಾ ಬೌಲ್ ನಲ್ಲಿದ್ದ ಮೊಸರನ್ನು ತೆಗೆದುಕೊಂಡಿದ್ದು ಯಾರು ಎಂದು ಕೇಳಿದ್ದು ಅಷ್ಟೇ ಎಂದು ಹೇಳಿದ್ದಾರೆ. ಇಷ್ಟೇ ವಿಚಾರಕ್ಕೆ ಸಮೀರಾಚಾರ್ಯ ಸಿಟ್ಟಾಗಿ ಅಲ್ಲಿಂದ ಹೊರ ನಡೆದಿದ್ದಾರೆ. ಇದಕ್ಕೆ ಸಂಯುಕ್ತಾ, ರಿಯಾಜ್ ಮೊದಲಾದವರು ಆಕ್ಷೇಪಿಸಿದ್ದಾರೆ. ನಾನು ಇನ್ಮುಂದೆ ಇಲ್ಲೇ ಊಟ, ತಿಂಡಿ ತಿನ್ನುತ್ತೇನೆ ಎಂದು ಸಮೀರಾಚಾರ್ಯ ಹೇಳಿದ್ದಾರೆ. ನಂತರ ಸಮೀರಾಚಾರ್ಯ ಮತ್ತು ಸಂಯುಕ್ತಾ ನಡುವೆ ಮಾತಿನ ಚಕಮಕಿ ನಡೆದಿದೆ.

‘ಕಿಚ್ಚನ್ ಟೈಮ್’ನಲ್ಲಿ ಅತಿಥಿಯಾಗಿ ನಟಿ ಹರಿಪ್ರಿಯಾ ಆಗಮಿಸಿದ್ದಾರೆ. ಸುದೀಪ್ ಅವರೊಂದಿಗೆ ಅಡುಗೆ ಮಾಡಿ ರುಚಿ ಸವಿದಿದ್ದಾರೆ. ಅಲ್ಲದೇ ತಮ್ಮ ಸಿನಿ ಜರ್ನಿಯ ಕುರಿತಾಗಿ ಮಾತನಾಡಿದ್ದಾರೆ. ಕನ್ನಡ, ತೆಲುಗು ಸೇರಿ ವಿವಿಧ ಭಾಷೆಗಳಲ್ಲಿ 37 ಸಿನಿಮಾ ಮಾಡಿದ್ದಾಗಿ ಹರಿಪ್ರಿಯಾ ತಿಳಿಸಿದ್ದಾರೆ. ‘ಉಗ್ರಂ’, ‘ನೀರ್ ದೋಸೆ’ ಖುಷಿ ಕೊಟ್ಟ ಸಿನಿಮಾಗಳಾಗಿವೆ ಎಂದಿದ್ದಾರೆ. ಮುಂದಿನ ಚಿತ್ರಗಳ ಕುರಿತಾಗಿ ಮಾತನಾಡಿದ್ದಾರೆ.

‘ಬಿಗ್ ಬಾಸ್’ ಪ್ರತಿ ಸೀಸನ್ ನೋಡಿದ್ದೇನೆ ಎಂದು ಅವರು, ಈ ಬಾರಿ ಸೆಲೆಬ್ರಿಟಿಗಳೊಂದಿಗೆ ಕಾಮನ್ ಮ್ಯಾನ್ ಗಳು ಇರುವುದು ವಿಶೇಷವಾಗಿದೆ ಎಂದು ಹೇಳಿದ್ದಾರೆ. ಫಿನಾಲೆಗೆ ದಿವಾಕರ್, ನಿವೇದಿತಾ, ಅನುಪಮಾ, ಕಾರ್ತಿಕ್, ಚಂದನ್ ಬರಬಹುದು. ಚಂದನ್ ಗೆಲ್ಲಬಹುದು. ನಿವೇದಿತಾ ನನ್ನ ಫೇವರೀಟ್ ಕಂಟೆಸ್ಟೆಂಟ್ ಎಂದು ತಿಳಿಸಿದ್ದಾರೆ.

‘ಬಿಗ್ ಬಾಸ್’ ವೇದಿಕೆಯಲ್ಲಿ ಕಾಣಿಸಿಕೊಂಡ ಜಗನ್ ಮನೆಯೊಳಗಿನ ಅನುಭವ ಹಂಚಿಕೊಂಡಿದ್ದಾರೆ. 63 ದಿನಗಳ ಕಾಲ ಮನೆಯೊಳಗಿನ ಖುಷಿ, ನೋವು, ಸಿಟ್ಟು, ನಲಿವು, ಆಟ, ಹತಾಷೆಯ ಕ್ಷಣಗಳನ್ನು ನೋಡಿದ ಅವರು ಭಾವುಕರಾಗಿದ್ದಾರೆ. ಅಲ್ಲದೇ, ಸುದೀಪ್ ಅವರೊಂದಿಗೆ ವೇದಿಕೆಯಲ್ಲಿ ಮನೆಯ ಸದಸ್ಯರ ಕುರಿತಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇನ್ನು ‘ಬಿಗ್ ಬಾಸ್’ ವೇದಿಕೆಯಲ್ಲಿ ಚಂದನ್ ಅವರ ತಂಡದ ‘ಟಕಿಲ’ ಆಲ್ಬಂ ಅನ್ನು ಸುದೀಪ್ ಬಿಡುಗಡೆ ಮಾಡಿದ್ದಾರೆ. ‘ಟಕಿಲ’ ತಂಡದಿಂದ ನೃತ್ಯ ಪ್ರದರ್ಶನ ನಡೆದಿದ್ದು, ತಂಡದವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...