alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಫಿನಾಲೆಯಿಂದ ಮಾಳವಿಕಾ, ಮೋಹನ್ ಔಟ್

malvi

‘ಬಿಗ್ ಬಾಸ್’ ಸೀಸನ್ 4 ಫಿನಾಲೆಗೆ ಎಂಟ್ರಿ ಪಡೆದಿದ್ದ 5 ಮಂದಿಯಲ್ಲಿ ಇಬ್ಬರು ಹೊರ ಬಂದಿದ್ದಾರೆ.

ಮಾಳವಿಕಾ ಮತ್ತು ಮೋಹನ್ ಅವರು ಹೊರ ಬಂದಿದ್ದು, ರೇಖಾ, ಕೀರ್ತಿ ಕುಮಾರ್ ಹಾಗೂ ಪ್ರಥಮ್ ಫಿನಾಲೆಯಲ್ಲಿ ಉಳಿದುಕೊಂಡಿದ್ದಾರೆ.

ಶನಿವಾರ ಗ್ರಾಂಡ್ ಫಿನಾಲೆ ವೇದಿಕೆಯಲ್ಲಿ ಮಾತನಾಡಿದ ಸುದೀಪ್, 113 ದಿನಗಳ ಕಾಲ ಮನೆಯಲ್ಲಿದ್ದ ಸದಸ್ಯರ ಕುರಿತಾಗಿ ಮಾತನಾಡಿದ್ದಾರೆ.

ಮನೆಯೊಳಗಿದ್ದ ಸದಸ್ಯರಿಗೆ ಹೊರಗೆ ನಡೆದ ಬೆಳವಣಿಗೆಗಳನ್ನು ನ್ಯೂಸ್ ಓದುವ ಮೂಲಕ ಶೀತಲ್ ಶೆಟ್ಟಿ ತಿಳಿಸಿದ್ದಾರೆ.

ನೋಟ್ ಬ್ಯಾನ್ ಮಾಡಿದ್ದು, ಜಯಲಲಿತಾ ನಿಧನ, ‘ಮಾಸ್ತಿಗುಡಿ’ ಶೂಟಿಂಗ್ ದುರಂತ ಮೊದಲಾದ ಘಟನೆಗಳನ್ನು ತಿಳಿಸಿದ್ದು, ಸದಸ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಮೊದಲೇ ಮನೆಯಿಂದ ಹೊರ ಬಂದಿದ್ದ ಶಾಲಿನಿ ವೇದಿಕೆ ಮೇಲೆ ಕಾಣಿಸಿಕೊಂಡಿದ್ದು, ಮನೆಯೊಳಗಿನ ಅನುಭವ ಹಂಚಿಕೊಂಡಿದ್ದಾರೆ.

ಫಿನಾಲೆಗೆ ಎಂಟ್ರಿ ಪಡೆದ ಐವರು ಸ್ಪರ್ಧಿಗಳ ಕುರಿತು ನಿರಂಜನ್ ಮಾಡಿದ ಮಿಮಿಕ್ರಿ ನಗೆಗಡಲಲ್ಲಿ ತೇಲಿಸಿದೆ.

ಸುದೀಪ್ ಮನೆಯೊಳಗಿನ ಸದಸ್ಯರೊಂದಿಗೆ ಮಾತನಾಡಿದ ನಂತರದಲ್ಲಿ ಮೊದಲಿಗೆ ಮೋಹನ್ ಹೊರ ಬಂದರೆ, ನಂತರ ಮಾಳವಿಕಾ ಹೊರ ನಡೆದಿದ್ದಾರೆ.

ವೇದಿಕೆಗೆ ಬಂದ ಇಬ್ಬರೂ, ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ವೇದಿಕೆಯಲ್ಲಿ ಮೊದಲ ಸೀಸನ್ ಸ್ಪರ್ಧಿ ವಿಜಯ್ ರಾಘವೇಂದ್ರ, ಭುವನ್-ಸಂಜನಾ, ರಿಷಿಕಾ ಅವರು ನೃತ್ಯ ಪ್ರದರ್ಶಿಸಿದ್ದಾರೆ.

ಉಳಿದಿರುವ ಮೂವರಲ್ಲಿ ಯಾರು ವಿನ್ ಆಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...