alex Certify
ಕನ್ನಡ ದುನಿಯಾ       Mobile App
       

Kannada Duniya

ಕಿಚ್ಚ ಸುದೀಪ್, ಪ್ರಥಮ್ ಗೆ ಹೇಳಿ ಹ್ಯಾಟ್ಸಾಫ್

20170129_232731

‘ಬಿಗ್ ಬಾಸ್’ ಸೀಸನ್ 4 ರಲ್ಲಿ ಪ್ರಥಮ್ ವಿನ್ನರ್ ಆಗಿದ್ದು, ಕೀರ್ತಿ ರನ್ನರ್ ಅಪ್ ಆಗಿದ್ದಾರೆ.

‘ಬಿಗ್ ಬಾಸ್’ ಮನೆಯಿಂದ ಇಬ್ಬರನ್ನು ಕರೆದುಕೊಂಡು ಬಂದ ಸುದೀಪ್, ಪ್ರಥಮ್ ವಿಜೇತರಾಗಿದ್ದಾರೆ ಎಂದು ಘೋಷಿಸಿದ ಕೂಡಲೇ, ಪ್ರಥಮ್ ಕುಣಿದಾಡಿದ್ದಾರೆ.

ಅಂಗಿ ತೆಗೆದು, ವೇದಿಕೆ ಮೇಲೆಲ್ಲ ಕುಣಿದಾಡುತ್ತಾ ಸಂಭ್ರಮಿಸಿದ್ದಾರೆ. ಇದೇ ಸಂದರ್ಭದಲ್ಲಿ ತಂದೆ ಮಲ್ಲಣ್ಣನವರ ಒಪ್ಪಿಗೆ ಪಡೆದು, ತಮಗೆ ಬಂದ 50 ಲಕ್ಷ ರೂ. ಬಹುಮಾನವನ್ನು ದಿವ್ಯಾಂಗ ಹೆಣ್ಣು ಮಕ್ಕಳಿಗೆ, ಹುತಾತ್ಮ ಯೋಧರ  ಕುಟುಂಬ, ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ನೀಡುತ್ತೇನೆ. ತಂದೆಯ ಊರಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲು ಬಳಸುವುದಾಗಿ ಘೋಷಿಸಿದ್ದಾರೆ.

‘ಬಿಗ್ ಬಾಸ್’ ವೇದಿಕೆಯಲ್ಲೇ ಪ್ರಥಮ್, ತಮಗೆ ಬಂದ 50 ಲಕ್ಷ ರೂ. ಬಹುಮಾನವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸುವುದಾಗಿ ಘೋಷಿಸುವ ಮೂಲಕ ಗಮನಸೆಳೆದರು.

ರನ್ನರ್ ಅಪ್ ಆದ ಕೀರ್ತಿ ಕುಮಾರ್ ಗೆ ಸುದೀಪ್ ವೈಯಕ್ತಿಕವಾಗಿ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ಇದರಿಂದ ಭಾವುಕರಾದ ಕೀರ್ತಿ ತಮಗೆ ಬಹುಮಾನ ಬಂದರೂ ಇಷ್ಟು ಖುಷಿಯಾಗುತ್ತಿರಲಿಲ್ಲ. ‘ಬಿಗ್ ಬಾಸ್’ ನಲ್ಲಿ ತಮಗೆ ಬಂದ ಹಣದಲ್ಲಿ ಸ್ವಲ್ಪ ಭಾಗವನ್ನು ಕನ್ನಡ ಶಾಲೆಗಳ ಅಭಿವೃದ್ಧಿಗೆ ವಿನಿಯೋಗಿಸುವುದಾಗಿ ಘೋಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...