alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ : ಪ್ರಥಮ್ ವಿನ್ನರ್, ಕೀರ್ತಿ ರನ್ನರ್ ಅಪ್

20170129_232440114 ದಿನಗಳ ಕಾಲ ನಡೆದ ‘ಬಿಗ್ ಬಾಸ್’ ಸೀಸನ್ 4 ನಲ್ಲಿ ಪ್ರಥಮ್ ವಿನ್ನರ್ ಹಾಗೂ ಕೀರ್ತಿಕುಮಾರ್ ರನ್ನರ್ ಅಪ್ ಆಗಿದ್ದಾರೆ.

ಫಿನಾಲೆಗೆ ಎಂಟ್ರಿ ಪಡೆದಿದ್ದ 5 ಮಂದಿಯಲ್ಲಿ ಮಾಳವಿಕಾ ಮತ್ತು ಮೋಹನ್ ಅವರು ಹೊರ ಬಂದಿದ್ದು, ಕೊನೆಯ ಹಂತದಲ್ಲಿ ರೇಖಾ, ಕೀರ್ತಿ ಕುಮಾರ್ ಹಾಗೂ ಪ್ರಥಮ್ ಉಳಿದುಕೊಂಡಿದ್ದರು.

ಭಾನುವಾರದ ಸಂಚಿಕೆಯಲ್ಲಿ ಮನೆಯಲ್ಲಿ ನಡೆದ ಭಾವುಕ ಕ್ಷಣಗಳು, ಜಗಳ, ನಗು ಮತ್ತು ಸದಸ್ಯರ ಜರ್ನಿ ಕುರಿತಾದ ವಿಡಿಯೋ ಪ್ರದರ್ಶಿಸಿದ್ದು, ಸದಸ್ಯರು ಭಾವುಕರಾಗಿದ್ದಾರೆ.

ಇದೇ ಸಂದರ್ಭದಲ್ಲಿ ತಮಾಷೆಗಾಗಿ ‘ಚೋಟಾ ಬಾಸ್’  ಅವಾರ್ಡ್ ಗಳನ್ನು ನೀಡಲಾಗಿದೆ. ಶೀತಲ್ ಶೆಟ್ಟಿ, ಸಂಜನಾ ಮೊದಲಾದವರು ಚೋಟಾ ಬಾಸ್ ಅವಾರ್ಡ್ ಪಡೆದುಕೊಂಡಿದ್ದಾರೆ.

ಪ್ರಥಮ್, ಶಾಲಿನಿ, ರೇಖಾ, ಕೀರ್ತಿ ಕುಮಾರ್, ಮಾಳವಿಕಾ, ಮೋಹನ್, ಸಂಜನಾ, ಭುವನ್, ವಾಣಿಶ್ರೀ, ದೊಡ್ಡಗಣೇಶ್, ಕಾವ್ಯ, ನಿರಂಜನ್, ಓಂ ಪ್ರಕಾಶ್, ಸುಕೃತಾ, ಮಸ್ತಾನ್, ಕಾರುಣ್ಯ, ಚೈತ್ರಾ, ಶೀತಲ್ ಅವರು ಸ್ಪರ್ಧಿಗಳಾಗಿದ್ದರು.

15 ವಾರಗಳ ಕಾಲ ನಡೆದ ಫಿನಾಲೆಯಲ್ಲಿ ಕೊನೆ ಹಂತದಲ್ಲಿದ್ದ ಮೂವರಲ್ಲಿ ಮೊದಲಿಗೆ ರೇಖಾ ಹೊರಗೆ ಬಂದಿದ್ದಾರೆ. ಉಳಿದ ಇಬ್ಬರಲ್ಲಿ ಪ್ರಥಮ್ ವಿನ್ನರ್, ಕೀರ್ತಿ ರನ್ನರ್ ಅಪ್ ಆಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...