alex Certify
ಕನ್ನಡ ದುನಿಯಾ       Mobile App
       

Kannada Duniya

ಸಾರಿ ಕೇಳಿದ ಹುಚ್ಚ ವೆಂಕಟ್: ನಿರೂಪಣೆ ಮಾಡಿದ ಕಿಚ್ಚ ಸುದೀಪ್

sudeep-bigg-bos

‘ಬಿಗ್ ಬಾಸ್’ ಮನೆಯಲ್ಲಿ ಪ್ರಥಮ್ ಮೇಲೆ ಹಲ್ಲೆ ಮಾಡಿದ್ದ ಹುಚ್ಚ ವೆಂಕಟ್ ಅವರಿಗೆ, ಶಿಕ್ಷೆ ಆಗಬೇಕೆಂದು ಹೇಳಿದ್ದ ಸುದೀಪ್ ನಿರೂಪಣೆ ಮಾಡ್ತಾರಾ ಎಂಬ ಕುತೂಹಲ ವೀಕ್ಷಕರಲ್ಲಿ ಸಹಜವಾಗಿತ್ತು. ಕಾರ್ಯಕ್ರಮದ ಆರಂಭದಲ್ಲೇ ವೆಂಕಟ್ ತಮ್ಮಿಂದಾದ ತಪ್ಪಿಗೆ ಕ್ಷಮೆ ಕೇಳಿದ್ದಾರೆ.

ಪ್ರಥಮ್ ಮೇಲೆ ಕೈ ಮಾಡಿದ್ದಕ್ಕೆ ಕ್ಷಮೆ ಕೇಳುತ್ತೇನೆ. ಯಾರ ಮೇಲೆಯೂ ಕೈ ಮಾಡದಂತೆ ಹೇಳಿದ್ದರು. ನನ್ನಿಂದ ತಪ್ಪಾಗಿದೆ. ಕಲರ್ಸ್ ಕನ್ನಡ ವಾಹಿನಿ, ‘ಬಿಗ್ ಬಾಸ್’, ಸುದೀಪ್ ಅವರಿಗೆ ಬೇಜಾರಾಗಿದ್ದಕ್ಕೆ ಸಾರಿ. ಸುದೀಪ್ ಅವರು ದಯವಿಟ್ಟು ಕಾರ್ಯಕ್ರಮ ನಡೆಸಿಕೊಡಬೇಕೆಂದು ವೆಂಕಟ್ ಹೇಳಿದ್ದಾರೆ. ಬಳಿಕ ಆರಂಭವಾದ ‘ವಾರದ ಕತೆ ಕಿಚ್ಚನ ಜೊತೆ’ಯಲ್ಲಿ ಮಾತನಾಡಿದ ಸುದೀಪ್, ನ್ಯಾಯ ಉಳಿಸಿಕೊಳ್ಳಬೇಕು. ತಪ್ಪು ಮಾಡಿದವರು ಕ್ಷಮೆ ಕೇಳಿದ್ದಾರೆ. ಹಿಂದಿನ ಸಂಚಿಕೆಯಲ್ಲಿ ತಪ್ಪು ಮಾಡಿದ್ದ ವ್ಯಕ್ತಿಗೆ ಮನೆಯೊಳಗೆ ಬಿಟ್ಟು ತಪ್ಪು ನಿರ್ಧಾರ ತೆಗೆದುಕೊಂಡಿದ್ದಾರೆ. ಹಲ್ಲೆ ಮಾಡಿದ ವೆಂಕಟ್ ಗೆ ಕಾನೂನಿನ ಪ್ರಕಾರ ಶಿಕ್ಷೆ ಆಗಬೇಕು. ಹೊಡೆಸಿಕೊಂಡ ಪ್ರಥಮ್ ದೂರು ದಾಖಲಿಸಬೇಕೆಂದು ಹೇಳಿದ್ದಾರೆ.

ಈ ಕುರಿತಾಗಿ ಕನ್ಫೆಕ್ಷನ್ ರೂಂನಲ್ಲಿ ಪ್ರಥಮ್ ರನ್ನು ಪ್ರಶ್ನಿಸಿದ ‘ಬಿಗ್ ಬಾಸ್’ ವೆಂಕಟ್ ವಿರುದ್ಧ ದೂರು ದಾಖಲಿಸಲು ನಿಮಗೆ ಅವಕಾಶವಿದೆ ಎಂದಾಗ, ವೆಂಕಟ್ ಹಲ್ಲೆ ಮಾಡಿದ್ದಕ್ಕೆ ಅಸಮಾಧಾನವಿಲ್ಲ. ನಾನಾಗಲೇ ಅದನ್ನು ಮರೆತಿದ್ದೇನೆ. ಶೋ ಬಿಟ್ಟು ಹೊರ ಹೋಗಲ್ಲ ಎಂದು ಪ್ರಥಮ್ ಹೇಳಿದ್ದಾರೆ.

ನಂತರ ವೇದಿಕೆಯಲ್ಲಿ ಮಾತನಾಡಿದ ಸುದೀಪ್, ತಪ್ಪು ಮಾಡುವುದು ಸಹಜ. ಕ್ಷಮೆ ಕೇಳಿದ್ದು, ದೊಡ್ಡ ಮನಸು. ಕಳೆದ ಬಾರಿ ಹೊರ ಬಂದ ವೆಂಕಟ್ ಅನೇಕ ಸಲ ರಿಕ್ವೆಸ್ಟ್ ಮಾಡಿಕೊಂಡಿದ್ದರಿಂದ ‘ಬಿಗ್ ಬಾಸ್’ ಸೆಕೆಂಡ್ ಚಾನ್ಸ್ ಕೊಟ್ಟಿದ್ದರು. ಅದು ಹೀಗೆಲ್ಲಾ ಆಗಿದೆ ಎಂದು ಹೇಳಿ ವಿಷಯಕ್ಕೆ ತೆರೆ ಎಳೆದಿದ್ದಾರೆ.

ಸೈಲೆಂಟ್ ಆಗಿ ಬಾತ್ ರೂಂ ಕ್ಲೀನ್ ಮಾಡಿದ ಸಂಜನಾ-ಭುವನ್:

‘ಬಿಗ್ ಬಾಸ್’ಗೆ ಬಂದಿದ್ದೇಕೆ ಎಂದು ಸದಸ್ಯರನ್ನೆಲ್ಲಾ ಸುದೀಪ್ ಪ್ರಶ್ನಿಸಿದಾಗ ಎಲ್ಲರೂ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಓಂ ಪ್ರಕಾಶ್ ಡೈರೆಕ್ಷನ್ ನಲ್ಲಿ ನಡೆದ ಡ್ರಾಮಾದಲ್ಲಿ ಸಾಧನೆ ಮಾಡಿದ ಮಾಳವಿಕಾ, ಶಾಲಿನಿ ಅವರೇ ಜೂನಿಯರ್ ಆರ್ಟಿಸ್ಟ್ ಗಳಾಗಿದ್ದರು. ನೀವು ಕಿತ್ತೊಗಿರೋ ಕ್ಯಾರೆಕ್ಟರ್ ಎಂದು ದೂರಿದ್ದೀರಿ. ಕಿತ್ತೊಗಿರುವುದು ನಮ್ಮ ಯೋಚನೆ, ಪಾತ್ರಗಳಲ್ಲ ಎಂದು ಸುದೀಪ್, ಸಂಜನಾಗೆ ಹೇಳಿದ್ದಾರೆ.

ಬಾತ್ ರೂಂ ಕ್ಲೀನ್ ಮಾಡಲು ಎಷ್ಟು ನಿಮಿಷ ಬೇಕೆಂದು ಸುದೀಪ್ ಕೆಲವು ಸದಸ್ಯರನ್ನು ಪ್ರಶ್ನಿಸಿದಾಗ, ಕೆಲವರು ಇಷ್ಟು ನಿಮಿಷ ಬೇಕೆಂದು ಹೇಳಿದ್ದು, 21 ನಿಮಿಷ ಭುವನ್ ಮತ್ತು ಸಂಜನಾ ಸೈಲೆಂಟ್ ಆಗಿ ಕ್ಲೀನ್ ಮಾಡಿದ್ದೇಗೆ ಎಂದು ಸುದೀಪ್ ಪ್ರಶ್ನಿಸಿದ್ದಾರೆ. ಪೊರಕೆ, ನೀರಿನ ಶಬ್ಧ ಕೂಡ ಕೇಳದೆ ಕ್ಲೀನ್ ಮಾಡಲಾಗಿದೆ ಎಂದು ಕಿಚಾಯಿಸಿದ್ದಾರೆ.

ಇಬ್ಬರೂ ತಮ್ಮದೇ ಆದ ರೀತಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತ ಚರ್ಚೆಯಲ್ಲಿ ಪ್ರಥಮ್, ಬಾತ್ ರೂಂನಲ್ಲಿ ಕ್ಯಾಮೆರಾ ಹಾಕಿಸಿ ಎಂದಾಗ, ಸುದೀಪ್ ಹೇಳಿದ ಮಾತು ನಗು ತರಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...