alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ನಿಂದ ಹೊರ ಹೋಗಿದ್ಯಾರು ಗೊತ್ತಾ…?

‘ಬಿಗ್ ಬಾಸ್’ ಮನೆಗೆ 2 ನೇ ಸಲ ಎಂಟ್ರಿ ಪಡೆದಿದ್ದ ಕೃಷಿ ಮತ್ತೆ ಮನೆಯಿಂದ ಹೊರ ಬಿದ್ದಿದ್ದಾರೆ. ಈ ವಾರ ನಾಮಿನೇಟ್ ಆಗಿದ್ದ ಸದಸ್ಯರಲ್ಲಿ ಕೊನೆಗೆ ಅನುಪಮಾ ಮತ್ತು ಕೃಷಿ ಅವರು ಉಳಿದುಕೊಂಡಿದ್ದು, ಕೃಷಿ ಮನೆಯಿಂದ ಹೊರ ನಡೆದಿದ್ದಾರೆ. ಹೋಗುವ ಮೊದಲು ಸೂಪರ್ ಅಧಿಕಾರವನ್ನು ಶ್ರುತಿ ಅವರಿಗೆ ನೀಡಿದ್ದಾರೆ.

ಶನಿವಾರದ ಸಂಚಿಕೆ ‘ವಾರದ ಕತೆ ಕಿಚ್ಚನ ಜೊತೆ’ಯಲ್ಲಿ ಸುದೀಪ್ ಮನೆಯ ಸದಸ್ಯರೊಂದಿಗೆ ಪಂಚಾಯಿತಿ ನಡೆಸಿದ್ದಾರೆ. ಈ ವಾರ ಸದಸ್ಯರು ನೀಡಿದ ಪ್ರದರ್ಶನದ ಕುರಿತಾಗಿ ಪ್ರಸ್ತಾಪಿಸಿ ಕೆಲವರಿಗೆ ಬೆಂಡೆತ್ತಿದ್ದು, ಮತ್ತೆ ಕೆಲವರಿಗೆ ಮಾತಿನಲ್ಲೇ ಚಾಟಿ ಬೀಸಿದ್ದಾರೆ.

ಮೊದಲಿಗೆ ಮನೆಯೊಳಗೆ ದಿವಾಕರ್ ಎಂಟ್ರಿ ಪಡೆದುಕೊಂಡಿದ್ದು, ಸದಸ್ಯರಿಗೆ ಅಚ್ಚರಿಯಾಗಿದೆ. ದಿವಾಕರ್ ಸೀಕ್ರೆಟ್ ರೂಂನಲ್ಲಿದ್ದರೂ, ಅದನ್ನು ಹೇಳಿಕೊಳ್ಳಲಿಲ್ಲ. ನಾನು ‘ಬಿಗ್ ಬಾಸ್’ನಿಂದ ಹೊರ ಹೋದ ಬಳಿಕ ಮನೆಗೆ ಹೋಗಿದ್ದೆ. ಮತ್ತೆ ವಾಪಸ್ ಬರುವಂತೆ ಸೂಚನೆ ನೀಡಿದ್ದರಿಂದ ನಾನು ಬಂದಿದ್ದಾಗಿ ತಿಳಿಸಿದ್ದಾರೆ. ಮನೆಯೊಳಗಿನ ಸದಸ್ಯರೆಲ್ಲಾ ಅದನ್ನೇ ನಂಬಿದ್ದಾರೆ.

ಮನೆಯೊಳಗಿನ ಸದಸ್ಯರೊಂದಿಗೆ ಮಾತನಾಡಿದ ಸುದೀಪ್, ಇನ್ನು 22 ದಿನಗಳು ಮಾತ್ರ ಉಳಿದಿವೆ. ಯಾರೆಲ್ಲಾ ಫಿನಾಲೆ ವಾರಕ್ಕೆ ಬರಬಹುದು. ವಿನ್ ಆಗಬಹುದೆಂದು ಕೇಳಿದ್ದು, ಇದಕ್ಕೆ ಬಹುತೇಕ ಎಲ್ಲಾ ಸದಸ್ಯರು ಚಂದನ್, ಕಾರ್ತಿಕ್ ಹೆಸರನ್ನು ಸೂಚಿಸಿದ್ದಾರೆ.

ಕ್ಯಾಪ್ಟನ್ ಆಗಿ ಕನ್ ಫೆಷನ್ ರೂಂನಲ್ಲಿ ನಿದ್ದೆ ಮಾಡಿದ ಸಮೀರ್ ಅವರ ವರ್ತನೆ ತಮಾಷೆ ಎನಿಸಿದರೂ, ಅದು ಸರಿ ಕಾಣಲಿಲ್ಲ. ಕ್ಯಾಪ್ಟನ್ ಆಗಿ ನಿದ್ದೆ ಮಾಡಿದ್ದು ಅವಮಾನ ಎಂದು ಸುದೀಪ್ ಬೆಂಡೆತ್ತಿದ್ದಾರೆ. ಸವಾಲ್ ನಲ್ಲಿ ಸಮೀರಾಚಾರ್ಯ ಅವರು ಕುಳಿತಿದ್ದ ಕುರ್ಚಿಗೆ ಕಾಲಿನಿಂದ ಒದ್ದರೂ, ಅದನ್ನು ಒಪ್ಪಿಕೊಳ್ಳದ ರಿಯಾಜ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಳಪೆ ಬೋರ್ಡ್ ಸಿಕ್ಕಿದ್ದಕ್ಕೆ ಅನುಪಮಾರನ್ನು ಪ್ರಶ್ನಿಸಿ, ನಿಮಗೆ ಕಳಪೆ ಬೋರ್ಡ್ ಬಂದಿರಬಹುದು ಆದರೆ, ಕಷ್ಟಪಟ್ಟು ಟಾಸ್ಕ್ ಮಾಡಿದ್ದೀರಿ ಎಂದು ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತನ್ನನ್ನು ನೇರ ನಾಮಿನೇಟ್ ಮಾಡಿದ್ದರ ಬಗ್ಗೆ ನಿರೀಕ್ಷೆ ಇತ್ತು. ಕಳಪೆ ಬೋರ್ಡ್ ನೀಡುವಾಗ ಅವರು ಯೋಚನೆ ಮಾಡಬೇಕಿತ್ತು. ಎಂದು ಸಮೀರ್ ಕುರಿತಾಗಿ ಅನುಪಮಾ ಪ್ರತಿಕ್ರಿಯೆ ನೀಡಿದ್ದಾರೆ.

ನಿವೇದಿತಾ ಕನ್ನಡ, ಶ್ರುತಿ ಅವರ ಕನ್ನಡದ ಬಗ್ಗೆ, ಕಾರ್ತಿಕ್ ಸುತ್ತ ಕೃಷಿ, ಅನುಪಮಾ, ಶ್ರುತಿ ಕಾಣಿಸಿಕೊಂಡ ಬಗ್ಗೆ ಹೇಳಿದ್ದು ತಮಾಷೆಯಾಗಿತ್ತು. ‘ಎಸ್ ಆರ್ ನೋ ರೌಂಡ್’ನಲ್ಲಿ ವಿವಿಧ ಪ್ರಶ್ನೆಗಳನ್ನು ಕೇಳಿ ಸದಸ್ಯರಿಂದ ಉತ್ತರ ಪಡೆದುಕೊಂಡಿದ್ದು ಕೂಡ ತಮಾಷೆಯಾಗಿತ್ತು.

ಈ ವಾರ ಅನುಪಮಾ, ಕಾರ್ತಿಕ್, ಕೃಷಿ, ನಿವೇದಿತಾ, ಶ್ರುತಿ, ರಿಯಾಜ್ ಹಾಗೂ ಶ್ರುತಿ ಅವರು ನಾಮಿನೇಟ್ ಆಗಿದ್ದು, ಮನೆಯಿಂದ ಕೃಷಿ ಅವರು ಹೊರ ಹೋಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...