alex Certify
ಕನ್ನಡ ದುನಿಯಾ       Mobile App
       

Kannada Duniya

ಶಂಕರ್ ನಾಗ್ ಕುರಿತ ರಹಸ್ಯ ಬಹಿರಂಗಪಡಿಸಿದ ಸಿಹಿಕಹಿ ಚಂದ್ರು

‘ಬಿಗ್ ಬಾಸ್’ ಮನೆಯಲ್ಲಿನ ಸದಸ್ಯರು ಸಂತಸದಿಂದ ದೀಪಾವಳಿ ಆಚರಿಸಿದ್ದಾರೆ. ಮನೆಯ ನಿಯಮಗಳನ್ನು ಮೀರಿದ ಕಾರಣಕ್ಕೆ ಹಿಂದಿನ ದಿನ ಗ್ಯಾಸ್ ಬಂದ್ ಮಾಡಿದ್ದರಿಂದ ಸದಸ್ಯರು ಊಟಕ್ಕೆ ತೊಂದರೆ ಅನುಭವಿಸುವಂತಾಗಿತ್ತು. ಸದಸ್ಯರು ತಪ್ಪು ತಿದ್ದಿಕೊಳ್ಳಲು ಮುಂದಾಗಿದ್ದರಿಂದ ಗ್ಯಾಸ್ ಪೂರೈಕೆ ಮಾಡಲಾಗಿದೆ. ಇನ್ನು ನನ್ನ ನೀನು ಗೆಲ್ಲಲಾರೆ 3 ನೇ ಹಂತದ ಸವಾಲ್ ಧೈರ್ಯಂ ಸರ್ವತ್ರ ಸಾಧನಂ ನೀಡಲಾಗಿತ್ತು.

ಧೈರ್ಯ ಕಡಿಮೆ ಇರುವ ಸದಸ್ಯರನ್ನು ಎರಡೂ ತಂಡದಿಂದ ಆಯ್ಕೆ ಮಾಡಲಾಗಿದ್ದು, ಆಯ್ಕೆಯಾದ ತೇಜಸ್ವಿನಿ, ಸುಮಾ ಅವರು ದೈಹಿಕ, ಮಾನಸಿಕ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಿತ್ತು. ಸವಾಲ್ ನಲ್ಲಿ ಇಬ್ಬರೂ ಗೆದ್ದಿದ್ದಾರೆ.

‘ಬಿಗ್ ಬಾಸ್’ ಲಕ್ಸುರಿ ಬಜೆಟ್ ಟಾಸ್ಕ್ ನಲ್ಲಿ ಚಂದ್ರು ಟೀಂ 5 ಅಂಕ, ತೇಜಸ್ವಿನಿ ಟೀಂ 2 ಅಂಕ ಪಡೆಯಿತು. 5000 ಲಕ್ಸುರಿ ಬಜೆಟ್ ಪಾಯಿಂಟ್ ಸಂಗ್ರಹಿಸಿದರೂ, ನಿಯಮ ಮೀರಿದ ಕಾರಣಕ್ಕೆ ಚಂದ್ರು ಟೀಂ 3400 ಪಾಯಿಂಟ್ ಮಾತ್ರ ಉಳಿಸಿಕೊಂಡಿತು. ಮತ್ತೆ ಶಿಸ್ತು ಮೀರಿದ ಕಾರಣಕ್ಕೆ ಲಕ್ಸುರಿ ಪಾಯಿಂಟ್ಸ್ ಕಳೆದುಕೊಳ್ಳಬೇಕಾಯಿತು.

ಇನ್ನು ಕ್ಯಾಪ್ಟನ್ ಅನುಪಮಾ, ಉತ್ತಮ ಪ್ರದರ್ಶನ ನೀಡಿದ ಸದಸ್ಯರಾಗಿ ಜೆ.ಕೆ. ಅವರನ್ನು ಆಯ್ಕೆ ಮಾಡಿದ್ದಾರೆ. ಸಮೀರಾಚಾರ್ಯ ಕಳಪೆ ಪ್ರದರ್ಶನ ನೀಡಿದ್ದಾರೆ ಎಂದು ಅವರಿಗೆ ಫಲಕ ಹಾಕಲಾಗಿದ್ದು, ಅದನ್ನು ಹಾಕಿಕೊಳ್ಳದ ಕಾರಣಕ್ಕೆ ‘ಬಿಗ್ ಬಾಸ್’ ಎಚ್ಚರಿಕೆ ನೀಡಿದ್ದಾರೆ.

ಸಿಹಿಕಹಿ ಚಂದ್ರು, ಶಂಕರ್ ನಾಗ್ ಅಭಿನಯದ ‘ಗೀತಾ’ ಚಿತ್ರದ ‘ಏನೇ ಕೇಳು ಕೊಡುವೆ ನಿನಗೆ ನಾನೀಗ…’ ಹಾಡಿನ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ.

ಸದಸ್ಯರ ಬಳಿ ಮಾತನಾಡುತ್ತಿದ್ದ ಚಂದ್ರು, ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಶಂಕರ್ ನಾಗ್, ಹಾಡು ಬರೆಸಿಕೊಂಡು ಬರುವಂತೆ ಹೇಳಿದ್ದರು. ಅದರಂತೆ ನಾನು, ರಮೇಶ್ ಭಟ್, ಮತ್ತೊಬ್ಬರು ಚಿ.ಉದಯಶಂಕರ್ ಬಳಿ ಹೋದೆವು. ಬ್ಯುಸಿಯಾಗಿದ್ದ ಅವರು ಹಾಡು ಬರೆದುಕೊಟ್ಟರೆ, ಶಂಕರ್ ನಾಗ್ ಏನು ಕೊಡ್ತಾರೆ ಎಂದು ಕೇಳಿದರು. ಕಾಲ್ ಬುಕ್ ಮಾಡಿ ಶಂಕರ್ ಸಂಪರ್ಕಿಸಿದಾಗ, ಏನ್ ಕೇಳಿದರೂ ಕೊಡುತ್ತೇನೆ ಮೊದಲು ಹಾಡು ಬರೆದು ಕೊಡಲು ಹೇಳಿ ಎಂದು ತಿಳಿಸಿದರು.

ಇದೇ ಮಾತನ್ನು ಉದಯ ಶಂಕರ್ ಅವರಿಗೆ ಹೇಳಿದಾಗ, ಮರುಕ್ಷಣದಲ್ಲೇ ‘ಏನೇ ಕೇಳು ಕೊಡುವೆ ನಿನಗೆ ನಾನೀಗ..’ ಹಾಡನ್ನು ರಚಿಸಿದ್ದರು ಎಂದು ಉದಯಶಂಕರ್ ಮತ್ತು ಶಂಕರ್ ನಾಗ್ ಅವರ ಬಗ್ಗೆ ನೆನಪಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...