alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ನಲ್ಲಿ ಗಂಟು ಮೂಟೆ ಕಟ್ಟಿದರು ಸ್ಪರ್ಧಿಗಳು

big boss 789lop

‘ಬಿಗ್ ಬಾಸ್’ ಶೋ ಅಂತಿಮ ಹಂತಕ್ಕೆ ಬಂದಿದ್ದು ಸ್ಪರ್ಧಿಗಳು ತಮ್ಮ ಲಗೇಜ್ ಪ್ಯಾಕ್ ಮಾಡಿಕೊಂಡಿದ್ದಾರೆ. ಸುದೀರ್ಘ 98 ದಿನಗಳ ಜರ್ನಿ ಮುಕ್ತಾಯವಾಗುವ ಹಂತಕ್ಕೆ ಬಂದಿದ್ದರೂ, ಚಂದನ್ ಅವರಿಗೆ ಗೊಂದಲ ಬಗೆಹರಿದಂತೆ ಕಾಣುತ್ತಿಲ್ಲ. ಇದನ್ನು ಅವರೇ ಶ್ರುತಿ ಬಳಿ ಹೇಳಿಕೊಂಡರು.

ಭಾನುವಾರ ಫಿನಾಲೆ ನಡೆಯಲಿದ್ದು, ಇದಕ್ಕಾಗಿ ಸಂಪೂರ್ಣ ಸಿದ್ಧತೆ ನಡೆದಿವೆ. ಬಿಗ್ ಬಾಸ್ ಮನೆಯಲ್ಲಿರುವ ಶ್ರುತಿ, ಚಂದನ್, ಪೂಜಾಗಾಂಧಿ, ರೆಹಮಾನ್, ಆನಂದ್ ಅವರಿಗೆ ಫಿನಾಲೆ ಕಾರಣಕ್ಕೆ ಪ್ರಸಾದನ ಕಲಾವಿದರಿಂದ ಮೇಕಪ್ ಮಾಡಿಸಲಾಯಿತು. ಚಂದನ್ ಗೆ ತಮಗೆ ಗೌತಮಿ, ನೇಹಾ ಮಾತಾಡಿದ್ದರ ಕುರಿತಂತೆ ಗೊಂದಲವಿರುವ ಬಗ್ಗೆ ಶ್ರುತಿ ಅವರ ಬಳಿ ಹೇಳಿಕೊಂಡರು. ಪೂಜಾ ನನ್ನ ಅಕ್ಕನ ವಯಸ್ಸಿನವರು ಎಂದಾಗ ಶ್ರುತಿ ಒಂದಿಷ್ಟು ಸಲಹೆ ನೀಡುವ ಮೂಲಕ ಚಂದನ್ ಗೆ ಸಮಾಧಾನ ಮಾಡಿದರು.

ಗೌತಮಿ, ನೇಹಾ ಹೇಳಿದ್ದಾರೆಂದರೆ ನಿನ್ನಲ್ಲೇ ಏನೋ ತಪ್ಪಿರಬಹುದು. ಮಾತನಾಡುವಾಗ ತುಂಬಾ ಸೂಕ್ಷ್ಮವಾಗಿ ಮಾತನಾಡುವುದನ್ನು ಕಲಿಯಬೇಕು. ನೀನು ಇನ್ನೂ ಬೆಳೆಯಬೇಕಿರುವ ಹುಡುಗ, ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಯೋಚಿಸಿ ಮಾತಾಡು. ಏನೇ ಮಾತಾಡುವುದಿರಲಿ ಹೇಳೋಕು ಒಂದು ರೀತಿ, ನೀತಿ ಇದೆ ಎಂದು ಶ್ರುತಿ ಚಂದನ್ ಗೆ ಸಲಹೆ ನೀಡಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...