alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಲ್ಫಿಯೊಂದಿಗೆ ಸಂಭ್ರಮಿಸಿದ ‘ಬಿಗ್ ಬಾಸ್’ ಸ್ಪರ್ಧಿಗಳು

‘ಬಿಗ್ ಬಾಸ್’ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಸದಸ್ಯರಿಗೆ ಮನೆಯಲ್ಲಿ ಕಳೆದ ಕ್ಷಣ ಮತ್ತು ಅನುಭವಗಳ ಕುರಿತಾಗಿ ವಿವಿಧ ಚಟುವಟಿಕೆಗಳನ್ನು ನಿರ್ವಹಿಸಲು ತಿಳಿಸಲಾಗಿದೆ.

ಮನೆಯೊಳಗೆ ಕಳೆದ ಕ್ಷಣಗಳ ನೆನಪಿಗಾಗಿ ‘ಸೂಪರ್ ಸೆಲ್ಫಿ’ ಛಾಯಾಚಿತ್ರ ಸೆರೆಹಿಡಿಯಲು ಮೊಬೈಲ್ ಫೋನ್ ಕಳಿಸಲಾಗಿದೆ. ಅದರಲ್ಲಿ ಮೊದಲಿಗೆ ಚಂದನ್ ಮನೆಯಲ್ಲಿ ತಮ್ಮ ಇಷ್ಟದ ಸ್ಥಳಗಳು, ಹೆಚ್ಚು ಸಮಯ ಕಳೆದ ಸ್ಥಳಗಳನ್ನು ಸೆಲ್ಫಿಯಲ್ಲಿ ಸೆರೆ ಹಿಡಿದುಕೊಂಡಿದ್ದಾರೆ. ಅದೇ ರೀತಿ ನಿವೇದಿತಾ, ಕಾರ್ತಿಕ್, ಶ್ರುತಿ, ದಿವಾಕರ್ ವಿವಿಧೆಡೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಎಲ್ಲರೂ ಸೇರಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದು ವಿಶೇಷವಾಗಿತ್ತು.

ಸದಸ್ಯರಿಗೆ ಮನೆಯ ದೇವಿಯ ಮೂರ್ತಿಗೆ ಪೂಜೆ ಮಾಡುವಂತೆ ತಿಳಿಸಲಾಗಿತ್ತು. ಅಲ್ಲದೇ ಸದಸ್ಯರಿಗೆ ಉಪಹಾರ ಮಾಡಲು ಹೇಳಲಾಗಿತ್ತು ಎಲ್ಲಾ ಸದಸ್ಯರು ಸೇರಿ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದಾರೆ. ದೇವಿಯ ಮೂರ್ತಿಗೆ ಪೂಜೆ ಮಾಡಿ ಪ್ರಾರ್ಥಿಸಿದ್ದಾರೆ. ಮನೆಯಿಂದ ಹೊರ ಹೋಗಿರುವ ಮತ್ತು ಮನೆಯಲ್ಲಿರುವ ಸದಸ್ಯರೊಂದಿಗಿನ ಒಡನಾಟ ಹಂಚಿಕೊಳ್ಳುವಂತೆ ತಿಳಿಸಿದ್ದು, ಅದರಲ್ಲಿ ಸದಸ್ಯರು ಟಿ.ವಿ. ಪ್ಲಾಸ್ಮಾಗಳಿಗೆ ಬಿಲ್ಲೆಗಳನ್ನು ಹಚ್ಚುವ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಫಿನಾಲೆ ತಲುಪಿದ ಸದಸ್ಯರಿಗೆ ತಮ್ಮ ಅಂದವನ್ನು ಹೆಚ್ಚಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಎಲ್ಲರೂ ಖುಷಿಯಿಂದ ಅಂದವನ್ನು ಹೆಚ್ಚಿಸಿಕೊಂಡಿದ್ದಾರೆ. ಫಿನಾಲೆ ಸಮೀಪಿಸುತ್ತಿದ್ದಂತೆ ಕುತೂಹಲ ಹೆಚ್ಚಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...