alex Certify
ಕನ್ನಡ ದುನಿಯಾ       Mobile App
       

Kannada Duniya

ತಂದೆಯನ್ನು ಕಂಡು ಭಾವುಕರಾದ ಶ್ರುತಿ

‘ಬಿಗ್ ಬಾಸ್’ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳ ಕುಟುಂಬದವರು ಬಂದು ಹೋದ್ರೂ ಶ್ರುತಿ ಅವರ ಮನೆಯಿಂದ ಯಾರೂ ಬಂದಿರಲಿಲ್ಲ. ಅಕ್ಕನ ವಿಡಿಯೋ ಮಾತ್ರ ನೋಡಿದ್ದ ಶ್ರುತಿ ಬಹಳಷ್ಟು ಬೇಸರವಾಗಿದ್ದರು. ಸಂಕ್ರಾಂತಿ ಸ್ಪೆಷಲ್ ಆಗಿ ‘ಬಿಗ್ ಬಾಸ್’ ಮನೆಯೊಳಗೆ ಶ್ರುತಿ ಅವರ ತಂದೆ ಪ್ರಕಾಶ್ ಅವರು ಬಂದಿದ್ದಾರೆ.

ತಂದೆಯನ್ನು ಕಂಡ ಕೂಡಲೇ ಶ್ರುತಿ ಓಡಿ ಹೋಗಿ ತಬ್ಬಿಕೊಂಡಿದ್ದಾರೆ. ಹೊರಗಿನ ಮತ್ತು ಮನೆಯ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ‘ಬಿಗ್ ಬಾಸ್’ ಮನೆಯನ್ನೆಲ್ಲಾ ತಂದೆಗೆ ತೋರಿಸಿದ ಶ್ರುತಿ, ಅವರೊಂದಿಗೆ ಮಾತನಾಡಿದ್ದಾರೆ. ಸದಸ್ಯರನ್ನು ಪರಿಚಯಿಸಿಕೊಟ್ಟಿದ್ದಾರೆ. ಪ್ರಕಾಶ್ ಅವರು, ಸೈನಿಕನಾಗಿ ಹಲವಾರು ತಿಂಗಳುಗಳ ನಂತರ ಕುಟುಂಬದವರನ್ನು ನೋಡುತ್ತಿದ್ದೆ. ನೀವೆಲ್ಲಾ 3 ತಿಂಗಳ ನಂತರ ಕುಟುಂಬದವರನ್ನು ನೋಡಿದ್ದೀರಿ. ಎಲ್ಲರೂ ಚೆನ್ನಾಗಿ ಆಡುತ್ತೀದ್ದೀರಿ ಶುಭವಾಗಲಿ ಎಂದು ಹೇಳಿದ್ದಾರೆ.

ಮನೆಯೊಳಗೆ ಈ ವಾರ ಎಲ್ಲಾ ಸದಸ್ಯರೂ ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ಇರುವುದಿಲ್ಲ ಎಂದು ‘ಬಿಗ್ ಬಾಸ್’ ತಿಳಿಸಿದ್ದಾರೆ. ಕಾರ್ತಿಕ್, ಚಂದನ್, ಶ್ರುತಿ, ನಿವೇದಿತಾ, ದಿವಾಕರ್, ಅನುಪಮಾ, ಸಮೀರಾಚಾರ್ಯ ಅವರು ಮನೆಯೊಳಗಿದ್ದಾರೆ.

ಸದಸ್ಯರಿಗೆ 5000 ಲಕ್ಸುರಿ ಬಜೆಟ್ ಪಾಯಿಂಟ್ ಗಳನ್ನು ನೀಡಲಾಗಿದ್ದು, ನಿಯಮಗಳನ್ನು ಉಲ್ಲಂಘಿಸಿದ ಸಂದರ್ಭದಲ್ಲಿ ಹಂತ ಹಂತವಾಗಿ ಅಂಕ ಹಾಗೂ ಸೌಲಭ್ಯ ಕಡಿತ ಮಾಡುವುದಾಗಿ ‘ಬಿಗ್ ಬಾಸ್’ ತಿಳಿಸಿದ್ದಾರೆ. ಮೊದಲಿಗೆ ಸಮೀರಾಚಾರ್ಯ ನಿಯಮ ಮೀರಿದ ಕಾರಣ, 250 ಅಂಕ ಕಡಿತ ಮಾಡಲಾಗಿದೆ. ಇದಕ್ಕಾಗಿ ಸಮೀರಾಚಾರ್ಯ ಬೇಸರವಾಗಿದ್ದಾರೆ. ಅವರಿಗೆ ಕೆಲವು ಸದಸ್ಯರು ಸಮಾಧಾನಪಡಿಸಿದ್ದಾರೆ.

ಇನ್ನು ಮನೆಯಿಂದ ಹೊರಗೆ ಹೋದ ನಂತರದ ಜೀವನ, ಕೆಲಸ ಹಾಗೂ ಕಚೇರಿ ಕುರಿತಾಗಿ ಚಂದನ್, ಸಮೀರ್, ದಿವಾಕರ್ ಅವರ ನಡುವೆ ಚರ್ಚೆ ನಡೆದಿದೆ. ಮನೆಯೊಳಗೆ ಸಂಕ್ರಾಂತಿ ಆಚರಣೆ ಜೋರಾಗಿ ನಡೆದಿದೆ. ರಂಗೋಲಿ ಹಾಕಿ, ಎಳ್ಳು, ಬೆಲ್ಲ ಹಂಚಿ ಸದಸ್ಯರು ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದ್ದಾರೆ.

ಮನೆಯೊಳಗೆ ನೀಡಲಾದ ವಿವಿಧ ಚಟುವಟಿಕೆಗಳಲ್ಲಿ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಟೈಲ್ಸ್ ಜೋಡಿಸುವ ಸವಾಲ್ ನಲ್ಲಿ ಚಂದನ್, ದಿವಾಕರ್, ಶ್ರುತಿ ಮೊದಲಿಗರಾಗಿ ಬಹುಮಾನ ಪಡೆದಿದ್ದಾರೆ. ‘ಹೌದು ಬಿಗ್ ಬಾಸ್’ ವಿಶೇಷ ಚಟುವಟಿಕೆಯಲ್ಲಿ ‘ಬಿಗ್ ಬಾಸ್’ ಕೇಳಿದ್ದಕ್ಕೆಲ್ಲಾ ಹೌದು ಎಂದು ಹೇಳುವ ಜೊತೆಗೆ ಸಂದರ್ಭ, ಪರಿಸ್ಥಿತಿಗೆ ತಕ್ಕಂತೆ ಅದನ್ನು ನಿರ್ವಹಿಸಬೇಕಿದೆ. ನಿವೇದಿತಾ ಅವರನ್ನು ಕಾರ್ತಿಕ್ ಈಜುಕೊಳಕ್ಕೆ ಹಾಕಿದ ಮತ್ತು ಅನುಪಮಾ, ಶ್ರುತಿ ಅವರು ನೀರಿಗೆ ಇಳಿದ ಪ್ರಸಂಗ ತಮಾಷೆಯಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...