alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ನಲ್ಲಿ ನಡೀತು ನಡೆಯಬಾರದ ಘಟನೆ…!

‘ಬಿಗ್ ಬಾಸ್’ ಮನೆಯಲ್ಲಿ ಟಾಸ್ಕ್ ವೇಳೆ ಸಮೀರಾಚಾರ್ಯ ಅನುಚಿತವಾಗಿ ಮುಟ್ಟಿದ್ದಾಗಿ ಆರೋಪಿಸಿದ ಸಂಯುಕ್ತಾ ಅವರಿಗೆ ಕಪಾಳಮೋಕ್ಷ ಮಾಡಿ ಮನೆಯಿಂದ ಹೊರ ಹೋಗಿದ್ದಾರೆ. ಮನೆಯೊಳಗೆ ಅತಿಥಿಯಾಗಿ ಬಂದಿದ್ದ ಸಂಯುಕ್ತಾ ನಿಯಮವನ್ನು ಉಲ್ಲಂಘಿಸಿ ಸಮೀರಾಚಾರ್ಯ ಅವರ ಮೇಲೆ ಕೈ ಮಾಡಿದ ಕಾರಣಕ್ಕೆ ಅವರನ್ನು ಹೊರ ಹಾಕಲಾಗಿದೆ.

ಪುರುಷರು ಮತ್ತು ಮಹಿಳೆಯರ ತಂಡವನ್ನು ಪ್ರತ್ಯೇಕವಾಗಿ ಮಾಡಲಾಗಿದ್ದು, ಲಕ್ಸುರಿ ಬಜೆಟ್ ಟಾಸ್ಕ್ ನಲ್ಲಿ ವಿವಿಧ ಹಂತದ ಸವಾಲುಗಳನ್ನು ನೀಡಲಾಗಿದೆ. ದಾರವನ್ನು ಕಟ್ಟಲಾಗಿದ್ದ ಗೋಪುರವನ್ನು ಹಾಳು ಮಾಡಲು ಮತ್ತು ಅದನ್ನು ರಕ್ಷಿಸಿಕೊಳ್ಳುವ ಸವಾಲನ್ನು ನೀಡಲಾಗಿದೆ.

ಈ ಸವಾಲ್ ನಲ್ಲಿ ಮಹಿಳಾ ತಂಡದ ಹಗ್ಗಗಳನ್ನು ಕಟ್ ಮಾಡಲು ಬಂದಿದ್ದ ರಿಯಾಜ್ ಕೈಗೆ ಗಾಯವಾಗಿದೆ. ಇದೇ ವಿಚಾರಕ್ಕೆ ಸಂಯುಕ್ತಾ ಮತ್ತು ರಿಯಾಜ್ ಅವರ ನಡುವೆ ಮಾತಿಗೆ ಮಾತು ಬೆಳೆದಿದೆ. ಸಮೀರಾಚಾರ್ಯ ಅವರೊಂದಿಗೂ ಸಂಯುಕ್ತಾ ಜಗಳವಾಡಿದ್ದಾರೆ. ದಿವಾಕರ್ ನೂಕಾಡಿದ್ದಾರೆ ಎಂದು ಸಂಯುಕ್ತಾ, ಅವರೇ ನೂಕಿದ್ದಾರೆ ಎಂದು ದಿವಾಕರ್ ಜಗಳವಾಡಿದ್ದಾರೆ.

ಚಂದನ್ ಮೇಲೆ ಕುಳಿತಿದ್ದ ತಮ್ಮನ್ನು ಎಳೆಯುವಾಗ ಸಮೀರಾಚಾರ್ಯ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆಕ್ರೋಶಗೊಂಡ ಸಂಯುಕ್ತಾ ಸಮೀರಾಚಾರ್ಯ ಮೇಲೆ ಹಲ್ಲೆ ಮಾಡಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಸಮೀರಾಚಾರ್ಯ ಕೂಡ ಸಿಟ್ಟಿನಿಂದ ಮಾತನಾಡಿದ್ದು, ನಾನು ಮುಟ್ಟಿಲ್ಲ. ಅನುಚಿತವಾಗಿ ವರ್ತಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನಾನು ತಪ್ಪು ಮಾಡಿದ್ದರೆ, ನನ್ನನ್ನು ಹೊರ ಹಾಕಿ, ಅವರು ತಪ್ಪು ಮಾಡಿದ್ದರೆ, ಹೊರಗೆ ಹಾಕಿ ಎಂದಿದ್ದಾರೆ.

ಸಂಯುಕ್ತಾ ಅವರನ್ನು ಕನ್ ಫೆಷನ್ ರೂಂಗೆ ಕರೆಸಿಕೊಂಡು ‘ಬಿಗ್ ಬಾಸ್’ ಮಾತನಾಡಿದ್ದಾರೆ. ಸಮೀರಾಚಾರ್ಯ, ನಾನು ತಪ್ಪು ಮಾಡಿದ್ರೆ ಶಿಕ್ಷೆ ಅನುಭವಿಸಲು ಸಿದ್ಧವಾಗಿದ್ದೇನೆ ಎಂದು ಹೇಳಿದ್ದಾರೆ. ಇಬ್ಬರೊಂದಿಗೂ ಮಾತನಾಡಿದ ‘ಬಿಗ್ ಬಾಸ್’ ಕೊನೆಗೆ ಸಂಯುಕ್ತ ಅವರನ್ನು ಹೊರಗೆ ಕಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...