alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಯುಕ್ತಾಗೆ ಟಾಂಗ್ ಕೊಟ್ಟ ದಿವಾಕರ್

‘ಬಿಗ್ ಬಾಸ್’ ಮನೆಯಲ್ಲಿ ಸದಸ್ಯರಿಗೆ ನೀಡಲಾಗಿದ್ದ ‘ಜೊತೆ ಜೊತೆಯಲಿ’ ಲಕ್ಸುರಿ ಬಜೆಟ್ ಟಾಸ್ಕ್ ಮುಕ್ತಾಯವಾಗಿದೆ. ಕ್ಯಾಪ್ಟನ್ ಕೃಷಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾಗಿ ‘ಬಿಗ್ ಬಾಸ್’ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕ್ಯಾಪ್ಟನ್ ಈ ವಾರ ಕಳಪೆ ಮತ್ತು ಉತ್ತಮ ಪ್ರದರ್ಶನ ನೀಡಿದ ಜೋಡಿಗಳನ್ನು ಆಯ್ಕೆ ಮಾಡಿದ್ದು, ಅನುಪಮಾ –ಶ್ರುತಿ ಅವರನ್ನುಉತ್ತಮ ಸ್ಪರ್ಧಿಗಳಾಗಿ ಆಯ್ಕೆ ಮಾಡಿ, ಸಂಯುಕ್ತಾ –ಲಾಸ್ಯ ಅವರಿಗೆ ಕಳಪೆ ಫಲಕ ನೀಡಿದ್ದಾರೆ. ಅಲ್ಲದೇ, ಮನಗೆದ್ದ ಜೋಡಿಯಾಗಿ ಜಗನ್ –ಕಾರ್ತಿಕ್ ಅವರನ್ನು ಆಯ್ಕೆ ಮಾಡಿದ್ದಾರೆ.

ಸಮೀರಾಚಾರ್ಯ –ದಿವಾಕರ್, ಚಂದನ್ –ಶ್ರುತಿ, ಅನುಪಮಾ –ಶ್ರುತಿ ಅವರ ಜೋಡಿ ವಿವಿಧ ಸವಾಲುಗಳಲ್ಲಿ ವಿಜೇತರಾಗಿದ್ದಾರೆ ಎಂದು ಕೃಷಿ ಹೇಳಿದ್ದಾರೆ. ಕ್ಯಾಪ್ಟನ್ ಆಗಿದ್ದ ಕೃಷಿ ಅವರಿಗೆ ಚಂದನ್, ನಿವೇದಿತಾ, ಅನುಪಮಾ, ಶ್ರುತಿ ಹಾಡು –ನೃತ್ಯದ ಮೂಲಕ ಅಭಿನಂದಿಸಿದ್ದಾರೆ. ಸಮೀರಾಚಾರ್ಯ, ದಿವಾಕರ್ ಗೊಂಬೆ ಮಾಡಿಕೊಟ್ಟಿದ್ದಾರೆ.

ಮನೆಗೆ ಬಂದು ಸದಸ್ಯರ ಕಾಳಜಿಯಲ್ಲಿದ್ದ ಮಗುವಿನ ಗೊಂಬೆ ವಾಪಸ್ ಹೋಗಿದ್ದು, ಸದಸ್ಯರು ಮಗುವಿನೊಂದಿಗೆ ಕಳೆದ ಕ್ಷಣ, ಅನುಭವಗಳನ್ನು ಹಂಚಿಕೊಂಡಿದ್ದಾರೆ.

‘ಗೃಹ ಪ್ರವೇಶ’, ‘ನಿನ್ನ ನಾ ಬಲ್ಲೆನಾ’ ಸವಾಲ್ ಗಳಲ್ಲಿ ಸದಸ್ಯರು ಉತ್ಸಾಹದಿಂದ ಭಾಗವಹಿಸಿದ್ದಾರೆ. ಸಂಯುಕ್ತಾ ಮತ್ತು ಲಾಸ್ಯ ಅವರ ನಡುವೆ ಮತ್ತೆ ವಾಗ್ವಾದ ನಡೆದಿದೆ. ಲಾಸ್ಯ ಏರಿದ ದನಿಯಲ್ಲಿ, ನೀನು ಎಲ್ಲದಕ್ಕೂ ಜಗಳ ಮಾಡ್ತಿಯಾ ಏನನ್ನೂ ಹೇಳಲು ಬಿಡ್ತಿಲ್ಲ. ಎಲ್ಲವನ್ನೂ ನೀನೇ ಮಾತಾಡ್ತಿಯಾ, ಹೇಳುವುದನ್ನು ಕೇಳಿಸಿಕೊಳ್ತಿಲ್ಲ ಎಂದು ಸಂಯುಕ್ತಾ ಮೇಲೆ ರೇಗಾಡಿದ್ದು, ಇದಕ್ಕೆ ಪ್ರತಿಯಾಗಿ ಸಂಯುಕ್ತಾ ಕೂಡ ಮಾತನಾಡಿದ್ದಾರೆ. ಇವರ ಜಗಳವನ್ನು ಕಂಡು ಕಾಣದಂತೆ ಕೆಲವರು ಇದ್ದರೆ, ನಿವೇದಿತಾ –ಚಂದನ್ ನಗಾಡಿದ್ದಾರೆ. ತಮ್ಮ ಜಗಳದಿಂದ ಸಂಯುಕ್ತಾ –ಲಾಸ್ಯ ಮಜಾ ತೆಗೆದುಕೊಂಡಿದ್ದಾರೆ.

ಈ ನಡುವೆ ದಿವಾಕರ್, ನೀವು ಮೇಕಪ್ ಮಾಡಿಕೊಂಡಾಗ ಹೀರೋಯಿನ್ ಥರಾ ಕಾಣ್ತಿದೀರಾ. ನೀವು ಮೊದಲು ಬಂದಾಗ, ಹೀರೋಯಿನ್ ಅಂದಾಗ ನಂಬಲಾಗಲಿಲ್ಲ ಎಂದು ಸಂಯುಕ್ತಾಗೆ ಹೇಳಿದ್ದು, ಹೌದು, ನನಗೇ ಅನಿಸಿಲ್ಲ ನಾನು ಹೀರೋಯಿನ್ ಅಂಥ ಎಂದು ಸಂಯುಕ್ತಾ ಪ್ರತಿಕ್ರಿಯಿಸಿದ್ದಾರೆ. ಎಲ್ಲಾ ಹೀರೋಯಿನ್ ಒಂದೇ ರೀತಿ ಇರಲ್ಲ. ನನ್ನಷ್ಟು ಫಿಟ್ ಹೀರೋಯಿನ್ ಕನ್ನಡ ಇಂಡಸ್ಟ್ರೀಲಿ ಇಲ್ಲ ಎಂದು ಹೇಳಿದ್ದಾರೆ. ಹೌದು, ನೀವು ಟಾಸ್ಕ್ ಗಳಲ್ಲಿ ಪಾಲ್ಗೊಂಡಾಗ ಅದು ಗೊತ್ತಾಯ್ತು ಎಂದು ದಿವಾಕರ್ ಹೇಳಿದ್ದಾರೆ. ಇಲ್ಲಿಂದ ಹೊರ ಹೋದ ಬಳಿಕ ‘ಕಿರಿಕ್ ಪಾರ್ಟಿ’ ಸಿನಿಮಾ ನೋಡ್ತೇನೆ ಎಂದು ತಿಳಿಸಿದ್ದಾರೆ.

ಇನ್ನು ಈ ವಾರ ಮನೆಯಿಂದ ಯಾರು ಹೊರ ಹೋಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಚಂದನ್, ದಿವಾಕರ್, ಜಗನ್, ಜಯಶ್ರೀನಿವಾಸನ್, ಸಮೀರಾಚಾರ್ಯ, ಶ್ರುತಿ ನಾಮಿನೇಟ್ ಆಗಿದ್ದು, ಯಾರು ಹೊರ ಹೋಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...